ಕಾಲ ಭೈರವ ಪಾತ್ರದಲ್ಲಿ ರಾಮ್ ಚರಣ್ ಅದ್ಭುತವಾಗಿ ನಟಿಸಿದ್ದಾರೆ. ಕುದುರೆ ಸವಾರಿಗಳು, ಕತ್ತಿ ಕಾಳಗಗಳು ಮೋಡಿ ಮಾಡುತ್ತವೆ. ನಾಯಕಿ ಕಾಜಲ್ ಅಗರ್ವಾಲ್ ಗ್ಲಾಮರ್, ನಟನೆ ಮನಸೆಳೆಯುತ್ತದೆ. ರಾಮ್ ಚರಣ್-ಕಾಜಲ್ ಜೋಡಿ ಚೆನ್ನಾಗಿ ಮೂಡಿಬಂದಿದೆ. ಪ್ರೇಮಕಥೆ ಮನೋರಂಜನೆ ನೀಡುತ್ತದೆ. ಬಲವಾದ ಭಾವನೆಗಳು ಚಿತ್ರಕ್ಕೆ ಪ್ರಮುಖ ಶಕ್ತಿಯಾಗಿವೆ. ಮಗಧೀರ ಚಿತ್ರದಲ್ಲಿ ಶ್ರೀಹರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆ ಕೇಳಿ ಚಿರಂಜೀವಿ ಭಯಭೀತರಾಗಿದ್ದರಂತೆ. ರಾಜಮೌಳಿ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.