ಅಷ್ಟಕ್ಕೇ ನಿಲ್ಲಲಿಲ್ಲ. ಯಾರಾದರೂ ಚಿತ್ರರಂಗದಲ್ಲಿ ಪರಿಚಯಸ್ಥರಿದ್ದಾರಾ ಎಂದು ಕೇಳಿದರು.. ಇಲ್ಲ ಎಂದೆ. ಜಾತಿ ಏನು ಎಂದು ಕೇಳಿದರು.. ನನ್ನ ಜಾತಿ ಹೇಳಿದೆ. ಆಹಾ.. ಹಾಗಾದರೆ ಎಲ್ಲವನ್ನೂ ಮುಚ್ಚಿಕೊಂಡು ಹೊರಟುಹೋಗು. ಇಲ್ಲಿ ನೀನು ಉಳಿಯುವುದು ಕಷ್ಟ ಎಂದರು. ಅವರು ಹಾಗೆ ಮಾತನಾಡಿದ್ದರಿಂದ ತುಂಬಾ ಬೇಸರವಾಯಿತು, ನಾನು ಇಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲವೇ ಎಂಬ ಅನುಮಾನ ಶುರುವಾಯಿತು. ತಕ್ಷಣ ನನ್ನ ನೆಚ್ಚಿನ ಆಂಜನೇಯ ಸ್ವಾಮಿಯನ್ನು ನೆನೆದು ಧೈರ್ಯ ತಂದುಕೊಳ್ಳುತ್ತಿದ್ದೆ.