2023ರಲ್ಲಿ ನಟ ಮನೋಜ್ ಮಂಚು ಮತ್ತು ಭೂಮಾ ಮೌನಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಂಧ್ರ ಪ್ರದೇಶ್ ಖ್ಯಾತ ಲೀಡರ್ ಆಗಿರುವ ಭೂಮಾ ನಾಗಿ ರೆಡ್ಡಿ ಅವರ ಪುತ್ರಿ.
27
'ಹೈದರಾಬಾದ್‌ನಲ್ಲಿ ಇರುವ ಸಹೋದರಿ ಲಕ್ಷ್ಮಿ ಮಂಜು ಮನೆಯಲ್ಲಿ ಅದ್ಧೂರಿಯಾಗಿ ಮದುವೆಯಾದರು. ಮದುವೆಯಲ್ಲಿ ಅಪ್ತರು ಮಾತ್ರ ಭಾಗಿಯಾಗಿದ್ದರು. ಈ ಮದುವೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
37
ಮನೋಜ್ ಮತ್ತು ಮೌನಿಕಾಗೆ ಇಬ್ಬರು ಮಕ್ಕಳಿದ್ದಾರೆ. 'ಎರಡು ವರ್ಷಗಳ ಹಿಂದೆ ನನ್ನ ಜೀವನದ ಬೆಸ್ಟ್ ನಿರ್ಧಾರ ತೆಗೆದುಕೊಂಡಿರುವೆ. ನನ್ನ ಪ್ರಪಂಚವನೇ ಬದಲಾಯಿಸಿದ ಮಹಿಳೆಯನ್ನು ಮದುವೆಯಾದೆ' ಎಂದು ಮನೋಜ್ ಬರೆದುಕೊಂಡಿದ್ದಾರೆ.
47
'ನನ್ನ ಜೀವನಕ್ಕೆ ನೀನು ಕಾಲಿಡುತ್ತಿದ್ದಂತೆ ನಾನು ಕಲ್ಪನೆ ಮಾಡಿಕೊಳ್ಳದಷ್ಟು ಪ್ರೀತಿಯನ್ನು ನೀನು ಕೊಟ್ಟಿರುವೆ. ನನ್ನ ವಿಧಿಯನ್ನು ನಂಬುತ್ತೀನಿ ಅಂದ್ರೆ ಅದು ನಿನ್ನಿಂದಲೇ. ಅಷ್ಟರಲ್ಲಿ ಮಟ್ಟಕ್ಕೆ ಜೀವನದ ದಾರಿ ತೋರಿಸಿರುವೆ'
57
'ಕಳೆದ ಎರಡು ವರ್ಷದಲ್ಲಿ ನಮ್ಮ ಮನೆಯಲ್ಲಿ ಖುಷಿ ಸಂತೋಷದಿಂದ ತುಂಬಿಸಿರುವೆ. ನನ್ನ ಇಬ್ಬರು ಮಕ್ಕಳಿಗೆ ನೀನು ಅದ್ಭುತ ತಾಯಿ ಯಾಗಿರುವೆ. ನಿನ್ನಿಂದ ತುಂಬಾ ಕಲಿಯಲಿದ್ದಾರೆ.'
67
'ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೀವಿ. ಯಶಸ್ಸು ಮತ್ತು ಫೇಲ್ಯೂಯರ್ ನೋಡಿದ್ದೀನಿ. ಆದರೆ ನೀನು ಮಾತ್ರ ನನ್ನೊಟ್ಟಿಗೆ ನಿಂತಿರುವೆ. ನೀನೇ ನನ್ನ ಬೆಸ್ಟ್ ಫ್ರೆಂಡ್, ಬಿಗ್ ಸಪೋರ್ಟ್ ಹಾಗೂ ನನ್ನ ಬೆಸ್ಟ್ ಸಂಗಾತಿ'
77
ಮನೋಜ್ ಮಂಚು ಎಂದೂ ತಮ್ಮ ಎಮೋಷನ್‌ಗಳನ್ನು ಓಪನ್ ಆಗಿ ಹಂಚಿಕೊಂಡವರು ಅಲ್ಲ. ಹೀಗಾಗಿ ಈ ಪತ್ರವನ್ನು ನೋಡಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮ್ಯಾನ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.