2024ರಲ್ಲಿ ಬಿಡುಗಡೆಯಾಗಲಿರುವ ಟಾಪ್‌ ವೆಬ್‌ ಸರಣಿಗಳಿವು!

First Published Feb 24, 2024, 5:43 PM IST

ಓಟಿಟಿ ಫ್ಲಾಟ್‌ಫಾರ್ಮ್‌ನ ಜನಪ್ರಿಯ ಶೋ ವೆಬ್‌ ಸೀರಿಸ್‌ಗಳಾಗಿದೆ. ಈ ವೆಬ್‌ ಸರಣಿಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ವೆಬ್‌ ಸರಣಿ ಪ್ರಿಯರಿಗಾಗಿ ಈ ವರ್ಷದಲ್ಲಿ ಹೊರ ಬರಲಿರುವ ಕೆಲವು ಪ್ರಮುಖ ವೆಬ್‌ ಸರಣಿಗಳ ಮಾಹಿತಿ ಇಲ್ಲಿದೆ.

ಮಹಾರಾಣಿ  3: ಹುಮಾ ಖುರೇಷಿ ಮತ್ತು ಇತರರು ಮುಖ್ಯ ಪಾತ್ರದಲ್ಲಿ  ನಟಿಸಲಿರುವ ಮಹಾರಾಣಿ ಸೀಸನ್ 3  ಮಾರ್ಚ್ 7 ರಂದು ಬಿಡುಗಡೆಯಾಗಲಿದೆ.
 

web series farzi.

ಫರ್ಜಿ 2: ಶಾಹಿದ್ ಕಪೂರ್ ಮತ್ತುವಿಜಯ್‌ ಸೇತುಪತಿ ಅವರ ಹೆಚ್ಚು ಜನಮನ ಸೆಳೆದ ಫರ್ಜಿ ವೆಬ್‌ಸರಣಿಯ 2ನೇ ಸೀಸನ್‌ 2024 ರಲ್ಲಿ ಬಿಡುಗಡೆಯಾಗಲಿದೆ.

Latest Videos


ಮಿರ್ಜಾಪುರ್ 3: ಫೇಮಸ್‌ ವೆಬ್‌ ಸರಣಿಗಳಲ್ಲಿ ಒಂದಾದ ಮಿರ್ಜಾಪುರ್‌ದ ಮೂರನೇ ಆವೃತ್ತಿಯ ಮುಖ್ಯ ಪಾತ್ರಗಳಲ್ಲಿ ಪಂಕಜ್ ಪಂಕಜ್ ತ್ರಿಪಾಠಿ, ವಿಕ್ರಾಂತ್ ಮೆಸ್ಸಿ, ದಿವ್ಯೆಂದು ಶರ್ಮಾ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ.

ಫ್ಯಾಮಿಲಿ ಮ್ಯಾನ್ 3: ಫ್ಯಾಮಿಲಿ ಮ್ಯಾನ್  ಸೀಸನ್‌ 3ರ ಚಿತ್ರೀಕರಣ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ ಮತ್ತು 2024 ರ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಮನೋಜ್ ಬಾಜ್‌ಪೇಯ್ ಹಂಚಿಕೊಂಡಿದ್ದಾರೆ.

Panchayat 3

ಪಂಚಾಯತ್ 3: ಪಂಚಾಯತ್ ಸೀಸನ್ 3  2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊದಲಿನಂತೆಯೇ, ಪಂಚಾಯತ್ ಸೀಸನ್ 3 ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.

ಕಾಲಾ ಪಾನಿ 2: ಇತ್ತೀಚೆಗೆ ಸಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡ ನೆಟ್‌ಫ್ಲಿಕ್ಸ್ ಮೂಲ ಸರಣಿ ಕಾಲಾ ಪಾನಿ, ಸೀಸನ್ 2 2024ರಲ್ಲಿ ಬರಲಿದೆ.
 

ಪಾತಾಳ್‌ ಲೋಕ್‌ 2: ಜೈದೀಪ್ ಅಹ್ಲಾವತ್ ಅಭಿನಯದ ಪಾತಾಳ್‌ ಲೋಕ 2 2024 ರಲ್ಲಿ ಬಿಡುಗಡೆಯಾಗಲಿದೆ. ಇದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಸರಣಿಗಳಲ್ಲಿ ಒಂದಾಗಿದೆ.

ಬ್ರೀಥ್ 3: ಅಭಿಷೇಕ್ ಬಚ್ಚನ್, ನಿತ್ಯಾ ಮೆನನ್ ಮತ್ತು ಅಮಿತ್ ಸಾಧ್ ಮುಖ್ಯ ಭೂಮಿಕೆಯಲ್ಲಿರುವ ಬ್ರೀಥ್ 3 ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನವೆಂಬರ್ 9 ರಿಂದ ಸ್ಟ್ರೀಮಿಂಗ್ ಆಗಲಿದೆ.

ಆಶ್ರಮ್‌ 4: ಬಾಬಿ ಡಿಯೋಲ್ ಅಭಿನಯದ ಹೆಚ್ಚು ಚರ್ಚೆಗೆ ಗುರಿಯಾದ ವೆಬ್‌ ಸರಣಿ  ಆಶ್ರಮ್‌ 4  ಆವೃತ್ತಿ  2024 ಮತ್ತೊಮ್ಮೆ ತೆರೆಗೆ ಬೆಂಕಿ ಹಚ್ಚಲಿದೆ

ಸನ್‌ಫ್ಲವರ್‌ 2: ಸನ್‌ಫ್ಲವರ್‌ ವೆಬ್‌ ಸರಣಿಯ 2ನೇ ಆವೃತಿಯಲ್ಲಿ ಕಾಮಿಡಿಯನ್‌ ಸುನಿಲ್ ಗ್ರೋವರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಮಾರ್ಚ್ 1 ರಂದು ಬಿಡುಗಡೆಯಾಗಲಿದೆ.

click me!