ಸೆಲೆಬ್ರೆಟಿಗಳು ವರ್ಷದಿಂದ ವರ್ಷಕ್ಕೆ ಆದಾಯ ಡಬಲ್ ಮಾಡುತ್ತಾರೆ. ಅದು ಸಿನಿಮಾ, ಕ್ರಿಕೆಟ್ ಸೇರಿದಂತೆ ಇತರ ಯಾವುದೇ ಕ್ಷೇತ್ರ ಇರಬಹುದು. ನಟ ನಟಿಯರು ಸಿನಿಮಾ ಮೂಲಕ ಜಾಹೀರಾತು ಮೂಲಕ ಆದಾಯ ಪಡೆದರೆ, ಕ್ರಿಕೆಟ್ ಸೇರಿದಂತೆ ಇತರ ಕ್ಷೇತ್ರದ ಸೆಲೆಬ್ರೆಟಿಗಳು ತಮ್ಮ ವೃತ್ತಿಪರ ಕ್ಷೇತ್ರದ ಜೊತೆಗೆ ಇತರ ಮೂಲಗಳಿಂದಲೂ ಆದಾಯ ಪಡೆಯುತ್ತಾರೆ. ಇಷ್ಟೇ ಅಲ್ಲ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಆದಾಯಗಳಿಸುತ್ತಾರೆ. ಇದೀಗ ಫಾರ್ಚುನ್ ಇಂಡಿಯಾ 2024ರ ಸಾಲಿನಲ್ಲಿ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರೆಟಿಗಳ ಲಿಸ್ಟ್ ನೀಡಿದೆ.
ಫಾರ್ಚುನ್ ಇಂಡಿಯಾ ಪ್ರಕಾರ 2024ರ ಸಾಲಿನಲ್ಲಿ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರೆಟಿ ಬಾಲಿವುಡ್ ನಟ ಶಾರುಕ್ ಖಾನ್.ಜವಾನ್ ಸೇರಿದಂತೆ ಸೂಪರ್ ಹಿಟ್ ಚಿತ್ರದಿಂದ ಶಾರುಖ್ ಖಾನ್ ಆದಾಯ ಡಬಲ್ ಆಗಿದೆ. ಇದರ ಪರಿಣಾಮ ಶಾರುಖ್ ಈ ವರ್ಷ ಬರೋಬ್ಬರಿ 92 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಸೆಲೆಬ್ರೆಟಿ ಆದಾಯ ತೆರಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರೆಟಿಯಲ್ಲಿ 2ನೇ ಸ್ಥಾನ ತಮಿಳು ನಟ ವಿಜಯ್ ದಳಪತಿ ಪಾಲಾಗಿದೆ. ಗೋಟ್ ಸೇರಿದಂತೆ ಯಶಸ್ವಿ ಚಿತ್ರದ ಬಳಿಕ ಥಳಪತಿ 69 ಚಿತ್ರದ ತಯಾರಿ ನಡೆಯುತ್ತಿದೆ. ಈ ಚಿತ್ರಕ್ಕೆ ವಿಜಯ್ 275 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಯಶಸ್ವಿ ಚಿತ್ರ, ಮುಂದಿನ ಚಿತ್ರಗಳಿಂದ ವಿಜಯ್ ಆದಾಯ ಡಬಲ್ ಆಗಿದೆ. ಇದರ ಪರಿಣಾಮ 2024ರ ಸಾಲಿನಲ್ಲಿ ವಿಜಯ್ 80 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ವಿರಾಜಮಾನರಾಗಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚಿನ ಚಿತ್ರಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಆದರೆ ಆದಾಯ ಹೆಚ್ಚಾಗಿದೆ. ಕಾರಣ ಬಿಗ್ ಬಾಗ್ ನಿರೂಪಣೆ ಸೇರಿದಂತೆ ಹಲವು ಕ್ಷೇತ್ರದಲ್ಲಿನ ಹೂಡಿಕೆಯಿಂದ ಸಲ್ಮಾನ್ ಆದಾಯ ಗಳಿಸಿದ್ದಾರೆ. ಈ ವರ್ಷ ಸಲ್ಮಾನ್ ಖಾನ್ 75 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ಹೇಳಿದೆ.
ಅಮಿತಾಬ್ ಬಚ್ಚನ್ ಸೂಕ್ತ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಯುವ ನಟ ನಟಿಯರನ್ನೂ ನಾಚಿಸಿದ್ದಾರೆ. ಅಮಿತಾಬ್ ಬಚ್ಚನ್ ಈ ವರ್ಷ 71 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ. ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿ ನಿರೂಪಣೆಯಿಂದಲೂ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ.
ಸೆಲೆಬ್ರೆಟಿಗಳ ತೆರಿಗೆ ಪಟ್ಟಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್‌ನಿಂದ ಹೆಚ್ಚು ವಿರಾಟ್ ಕೊಹ್ಲಿ ಬ್ರಾಂಡ್ ಎಂಡೋರ್ಸಮೆಂಟ್, ಸೋಶಿಯಲ್ ಮೀಡಯಾ ಪೋಸ್ಟ್ ಸೇರಿದಂತೆ ಹಲವು ಮೂಲಗಳಿಂದ ಆದಾಯ ಪಡೆಯುತ್ತಿದ್ದಾರೆ. ಜೊತೆಗೆ ಫಿಟ್ನೆಸ್, ರೆಸ್ಟೋರೆಂಟ್ ಸೇರಿದಂತೆ ಹಲವು ಕ್ಷೇತ್ರದಲ್ಲೂ ಕೊಹ್ಲಿ ಹೂಡಿಕೆ ಮಾಡಿದ್ದಾರೆ. ಈ ವರ್ಷ ಕೊಹ್ಲಿ 66 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ವರದಿಯಲ್ಲಿ ಹೇಳಿದೆ.
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಹೇಳಿದರೂ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದೀಗ ಐಪಿಎಲ್‌ನಲ್ಲಿ ಧೋನಿ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷ ಧೋನಿ 38 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ. ಇನ್ನು ಬಾಲಿವುಡ್ ನಟ ರಣಬೀರ್ ಕಪೂರ್ ಆ್ಯನಿಮಲ್ ಚಿತ್ರದ ಯಶಸ್ಸಿನ ಬಳಿಕ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಈ ವರ್ಷ ರಣಬೀರ್ 36 ಕೋಟಿ ರೂಪಾಯಿ ಪಾವತಿಸಿದ್ದಾರೆ.