ಅನುಷ್ಕಾ ಶೆಟ್ಟಿಯಿಂದ ತ್ರಿಷಾ ವರೆಗೆ, ದಕ್ಷಿಣ ಭಾರತದ ನಟಿಯರ ರಿಲೇಷನಶಿಪ್ ಸೀಕ್ರೆಟ್

Published : Jan 25, 2025, 09:48 AM ISTUpdated : Jan 25, 2025, 09:59 AM IST

ದಕ್ಷಿಣ ಭಾರತದಲ್ಲಿ ಸೂಪರ್ ಹಿಟ್ ಚಿತ್ರದ ಮೂಲ ಅಭಿಮಾನಿಗಳ ಮನದಲ್ಲಿ ಖಾಯಂ ಸ್ಥಾನ ಪಡೆದಿರುವ ಹಲವು ನಟಿಯರು ವೈವಾಹಿಕ ಜೀವನದಿಂದ ದೂರ ಉಳಿದಿದ್ದಾರೆ. ಹೀಗೆ ಸಿಂಗಲ್ ಆಗಿರುವ ದಕ್ಷಿಣ ಭಾರತದ ನಟಿಯರು ಯಾರು? ಈ ನಿರ್ಧಾರಕ್ಕೆ ಕಾರಣವೇನು?  

PREV
19
ಅನುಷ್ಕಾ ಶೆಟ್ಟಿಯಿಂದ ತ್ರಿಷಾ ವರೆಗೆ, ದಕ್ಷಿಣ ಭಾರತದ ನಟಿಯರ ರಿಲೇಷನಶಿಪ್ ಸೀಕ್ರೆಟ್

ನಟರಿಗೆ ಹೋಲಿಸಿದರೆ ನಟಿಯರ ಸಿನಿಮಾ ಜೀವನ ತುಂಬಾ ಚಿಕ್ಕದು. 10-15 ವರ್ಷಗಳವರೆಗೆ ಮಾತ್ರ ಸಿನಿಮಾ ಅವಕಾಶಗಳು ಸಿಗುತ್ತವೆ. ಆ ನಂತರ ವಯಸ್ಸಿನ ಕಾರಣದಿಂದ ಅವರನ್ನು ಪಕ್ಕಕ್ಕೆ ಸರಿಸಲಾಗುತ್ತದೆ. 30 ವರ್ಷ ದಾಟಿದ ನಟಿಯರಿಗೆ ಸಿನಿಮಾ ಅವಕಾಶಗಳು ತುಂಬಾ ಕಡಿಮೆ. ಸಿಕ್ಕಿದರೂ ಅಕ್ಕ ಅಥವಾ ಅಮ್ಮನ ಪಾತ್ರಗಳೇ. ಅದಕ್ಕಾಗಿಯೇ ಹಲವು ನಟಿಯರು 30 ವರ್ಷ ದಾಟಿದ ನಂತರ ಮದುವೆಯಾಗಿ ನೆಲೆ ನಿಲ್ಲುತ್ತಾರೆ. ಆದರೆ 35 ವರ್ಷ ದಾಟಿದರೂ ಮದುವೆಯಾಗದೆ ಸಿಂಗಲ್ ಆಗಿರುವ ಹಲವು ನಟಿಯರಿದ್ದಾರೆ. ಇವರ ಈ ನಿರ್ಧಾರಕ್ಕೆ ಕಾರಣವೇನು? 

29
ಅನುಷ್ಕಾ ಶೆಟ್ಟಿ

ಕನ್ನಡದ ನಟಿ ಅನುಷ್ಕಾ ಶೆಟ್ಟಿ ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ. ಬಾಬುಬಲ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನೀಡಿದ ಅನುಷ್ಕಾ ಶೆಟ್ಟಿ ಮದುವೆ ವಿಚಾರದಲ್ಲಿ ಇನ್ನೂ ಮೌನವಾಗಿದ್ದಾರೆ.  ಅನುಷ್ಕಾ ಶೆಟ್ಟಿ ವಯಸ್ಸು 42 ವರ್ಷ. ಬಾಹುಬಲಿ ನಟ ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಹೆಸರು ಥಳಕು ಹಾಕಿಕೊಂಡಿತ್ತು. ಇತ್ತೀಚೆಗೆ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಯಾವುದು ಅಧಿಕೃತವಾಗಿಲ್ಲ. 

39
ಕಿರಣ್ ರಾಥೋಡ್

ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕಿರಣ್ ರಾಥೋಡ್ ವಯಸ್ಸು 43 ವರ್ಷ. ಅಜಿತ್, ವಿಜಯ್‌ರ ಜೊತೆ ನಟಿಸಿದರೂ ಅವರು ಇನ್ನೂ ಮದುವೆಯಾಗಿಲ್ಲ. ಕೆಲ ನಟರೊಂದಿಗೆ ಕಿರಣ್ ಹೆಸರು ಹೇಳಿಬಂದಿತ್ತು. ಮದುವೆಯಾಗುತ್ತಾರೆ, ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾತುಗಳು ಜೋರಾಗಿ ಹರಿದಾಡಿತ್ತು. ಆದರೆ ಇದ್ಯಾವುದು ಕೈಗೂಡಿಲ್ಲ.  

49
ತಬು

ಬಾಲಿವುಡ್ ಸಿನಿಮಾಗಳಲ್ಲಿ ಸದ್ದು ಮಾಡಿರುವ ದಕ್ಷಿಣ ಭಾರತದ ನಟಿ ತಬು ವಯಸ್ಸು 52. ಬಾಲಿವುಡ್ ಸ್ಟಾರ್ ನಟರ ಜೊತೆ ತಬು ಹೆಸರು ಕೇಳಿಬಂದಿತ್ತು. ಡೇಟಿಂಗ್, ರಿಲೇಶನ್‌ಶಿಪ್ ಕುರಿತು ಹಲವು ಗಾಸಿಪ್ ಹಾಗೂ ಕೆಲ ಸುದ್ದಿಗಳು ಹರಿದಾಡಿತ್ತು. ಸದ್ಯ ಬಾಲಿವುಡ್‌ನಲ್ಲಿ ಬ್ಯೂಸಿಯಾದಿರುವ ತಬು ಇನ್ನು ಸಿಂಗಲ್ ಆಗಿದ್ದಾರೆ.  

59
ಪೂನಮ್ ಬಜ್ವಾ

ಶಿಖಾರಿ, ಮಸ್ತ್ ಮೊಹಬ್ಬತ್, ತಂಗಿಗಾಗಿ ಸೇರಿದಂತೆ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ ಪೂನಮ್ ಬಾಜ್ವಾ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 39ರ ಹರೆಯದ ಪೂನಮ್ ಮದುವೆಯಾಗಿಲ್ಲ. ಆದರೆ ಪೂನಮ್ ಪ್ರೀತಿಯ ಬಲೆಯಲ್ಲಿದ್ದಾರೆ. ಸುದೀರ್ಘ ಪ್ರೀತಿಗೆ ಮದುವೆ ಅರ್ಥ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.  

69
ತ್ರಿಷ

20 ವರ್ಷಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ತ್ರಿಷ ವಯಸ್ಸು 41 ವರ್ಷ. ತಮಿಳಿನ ಕೆಲ ಪ್ರಮುಖ ನಟರ ಜೊತೆ ತ್ರಿಷಾ ಹೆಸರು ಕೇಳಿಬಂದಿತ್ತು. ಇನ್ನೇನು ತ್ರಿಷಾ ಮದುವೆಯಾಗಲಿದ್ದಾರೆ, ಪ್ರೀತಿಯಲ್ಲಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಆದರೆ ತ್ರಿಷಾ ಈ ಕುರಿತು ಅಧಿಕೃತ ಸಿಹಿ ಸುದ್ದಿ ನೀಡಿಲ್ಲ. ಈಗಲೂ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಜೊತೆ ತ್ರಿಷಾ ಹೆಸರು ಕೇಳಿಬರುತ್ತಿದೆ.

79
ಶೃತಿ ಹಾಸನ್

ಕಮಲ್ ಹಾಸನ್ ಪುತ್ರಿ ಶೃತಿ ವಯಸ್ಸು 38 ವರ್ಷ. ಡೂಡಲ್ ಆರ್ಟಿಸ್ಟ್ ಶಾಂತನು ಜೊತೆ ಪ್ರೀತಿಯಲ್ಲಿದ್ದ ಶೃತಿ, ಅವರನ್ನೇ ಮದುವೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮನಸ್ತಾಪದಿಂದ ಇಬ್ಬರೂ ಬೇರ್ಪಟ್ಟರು. ಮದುವೆ  ಕುರಿತು ಹಲವು ಬಾರಿ ನಿರಾಕಸ್ತಿ ತೋರಿದ್ದಾರೆ. ಮದುವೆ ತನಗೆ ಇಷ್ಟವಿಲ್ಲ, ಡೇಟಿಂಗ್, ರಿಲೇಷನ್‌ಶಿಪ್ ಮೂಲಕ ಬದುಕು ಕಟ್ಟಿಕೊಳ್ಳುತ್ತೇನೆ ಎಂದಿದ್ದರು. 

89
ನಗ್ಮಾ

ರಜನೀಕಾಂತ್ ಜೊತೆ ಬಾಷಾ ಚಿತ್ರದಲ್ಲಿ ನಟಿಸಿದ ನಗ್ಮಾ ವಯಸ್ಸು ಈಗ 50 ವರ್ಷ. ಜ್ಯೋತಿಕ ಅಕ್ಕನಾದ ನಗ್ಮಾ, ಸಿನಿಮಾ ಬಿಟ್ಟು ರಾಜಕೀಯದಲ್ಲಿದ್ದಾರೆ. 50 ದಾಟಿದರೂ ನಗ್ಮಾ ಮದುವೆಯಾಗಿಲ್ಲ. ಟೀಂ ಇಂಡಿಯಾ ಕ್ರಿಕೆಟಿಗನ ಜೊತೆಗೂ ನಗ್ಮಾ ಹೆಸರು ಕೇಳಿಬಂದಿತ್ತು. ಗಾಢವಾದ ಪ್ರೀತಿ ಮುರಿದು ಬಿದ್ದ ಕಾರಣದಿಂದ ನಗ್ಮಾ ಮದುವೆಯಾಗಿಲ್ಲ ಅನ್ನೋ ಮಾತುಗಳಿವೆ. 

99
ಆಂಡ್ರಿಯಾ

38 ವರ್ಷದ ಆಂಡ್ರಿಯಾ, ತನಗಿಂತ 6 ವರ್ಷ ಚಿಕ್ಕವರಾದ ಸಂಗೀತ ನಿರ್ದೇಶಕ ಅನಿರುದ್ಧ್‌ರನ್ನು ಪ್ರೀತಿಸಿದ್ದರು. ವಯಸ್ಸಿನ ಅಂತರದ ಕಾರಣ ಅವರ ಪ್ರೀತಿ ಮದುವೆಯವರೆಗೂ ಹೋಗಲಿಲ್ಲ. ಇಬ್ಬರೂ ಇನ್ನೂ ಸಿಂಗಲ್ ಆಗಿದ್ದಾರೆ.

Read more Photos on
click me!

Recommended Stories