Jai Bhim: ಮನಮುಟ್ಟಿದ ಸೆಂಗೆಣಿ ಪಾತ್ರ ಮಾಡಿದ ನಟಿ ಈಕೆ..!

Published : Nov 18, 2021, 09:06 AM ISTUpdated : Nov 18, 2021, 11:03 AM IST

Jai Bhim: ಮನ ಸೆಳೆದ ಸೆಂಗೆಣಿ ಪಾತ್ರ ಮಾಡಿದ ನಟಿ ಯಾರು ಗೊತ್ತಾ ? ಜೈಭೀಮ್‌ನಲ್ಲಿದ್ದಾರೆ ಇಬ್ಬರು ಮಾಲಿವುಡ್(Mollywood) ನಟಿಯರು ಸೆಂಗೆಣಿ ಮೂಲಕ ಅದ್ಭುತ ಅಭಿನಯ ಕೊಟ್ಟ ನಟಿ ಲಿಜೊ ಮೋಳ್ ಜೋಸ್(Lijomol Jose) ಈಕೆ

PREV
110
Jai Bhim: ಮನಮುಟ್ಟಿದ ಸೆಂಗೆಣಿ ಪಾತ್ರ ಮಾಡಿದ ನಟಿ ಈಕೆ..!

ವಿವಾಹಿತ ನಟಿಯರಿಗೆ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಹಿಂದೆ ಮದುವೆಯಾಗಿರುವುದನ್ನೇ ಅಡಗಿಸಿಡಬೇಕಾದ ಸ್ಥಿತಿ ಏನಿತ್ತೋ ಅದು ಇಂದು ಬದಲಾಗುತ್ತಿದೆ. ಬದಲಾಗಿ ಬಹಳಷ್ಟು ಜನ ನಟಿಯರು ಮದುವೆಯಾಗಿ ನಂತರವೂ ಸಿನಿಮಾ ಕೆರಿಯರ್ ಆರಂಭಿಸುತ್ತಿದೆ.

210

ಸ್ಯಾಂಡಲ್‌ವುಡ್‌ನ ಖುಷಿ ರವಿ ರೀತಿಯಲ್ಲೇ ಮಾಲಿವುಡ್ ನಟಿ ಲಿಜೊ ಮೋಳ್ ಜೋಸ್ ಕೂಡಾ ಅದೇ ರೀತಿ ನಟಿಯಾಗಿ ಮಿಂಚುತ್ತಿದ್ದಾರೆ. ಜೈ ಭೀಮ್ ಸಿನಿಮಾದಲ್ಲಿ ಪ್ರೇಕ್ಷಕರ ಮನ ಮುಟ್ಟಿದ ಸೆಂಗಣಿ ಪಾತ್ರ ಮಾಡಿದ್ದು ಈಕೆಯೇ

310

ನಟಿ ಲಿಜೊ ಮೋಳ್ ಜೋಸೆಫ್ ಮುಖ್ಯವಾಗಿ ಕಾಣಿಸಿಕೊಳ್ಳುವುದು ಮಲಯಾಳಂ ಸಿನಿಮಾಗಳಲ್ಲಿ. ಹೌದು. ಈಕೆ ಮಾಲಿವುಡ್ ನಟಿ. 29 ವರ್ಷದ ನಟಿ ಅರುಣ್ ಆಂಟೊನಿ ಒಣಿಸ್ಸೆರಿಲ್ ಅವರನ್ನು ವಿವಾಹವಾಗಿದ್ದಾರೆ.

410

2016ರ ಮಹೇಶಿಂಡೆ ಪ್ರತಿಕಾರಂ, 2016ರ ಕಟ್ಟಪನ ಹೃತಿಕ್ ರೋಷನ್, 2017ರ ಹನಿ ಬೀ 2.5, 2018ರ ಸ್ಟ್ರೀಟ್ ಲೈಟ್ಸ್, 2018ರ ಪ್ರೇಮ ಸೂತ್ರಂ, 2018 ಒಟ್ಟಕೊರು ಕಾಮುಗನ್, 218ರಲ್ಲಿ ರಿಲೀಸ್ ಆದ ಅನುರಾಗಂ ದಿ ಆರ್ಟ್ ಆಫ್ ತೆಪ್ಪೆ, 2019ರ ಶಿವಪ್ಪು ಮಂಜಲ್ ಪಚ್ಚೈ, 2021ರ ತೀತುಂ ನಂಡ್ರುಮ್ ನಂತರ ಲಿಜೊ ನಟಿಸಿದ್ದು ಜೈಭೀಮ್‌ನಲ್ಲಿ.

510

ಸೂರ್ಯನ ಬಹುತೇಕ ಸಿನಿಮಾಗಳಂತೆ ಈ ಸಿನಿಮಾ ಕೂಡಾ ಸೂಪರ್ ಹಿಟ್ ಆಗಿದ್ದು ಈ ಮೂಲಕ ಲಿಜೊ ಮತ್ತಷ್ಟು ಸಿನಿಪ್ರೇಮಿಗಳಿಗೆ ಪರಿಚಯಿಸಲ್ಪಟ್ಟಿದ್ದಾರೆ ಎನ್ನಬಹುದು.

610

ಇಲ್ಲಿಯವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ನಟಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿದ್ದು ಇದೇ ಸಿನಿಮಾ. ನಟಿ ಇದಕ್ಕೂ ಮೊದಲೇ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು

710

ನಟ ಸೂರ್ಯ ಅವರ ಇತ್ತೀಚಿನ ಸಿನಿಮಾಗಳನ್ನು ಗಮನಿಸಿದರೆ ನಟ ತಮ್ಮ ಸಿನಿಮಾಗಳಿಗೆ ಮಾಲಿವುಡ್ ನಟಿಯರನ್ನು ಕರೆತರುತ್ತಿರುವುದನ್ನು ಕಾಣಬಹುದು. ನಟನ ಇನ್ನೊಂದು ಹಿಟ್ ಸಿನಿಮಾ ಸೂರೈಪೊಟ್ರುನಲ್ಲಿ ಮಾಲಿವುಡ್ ನಟಿ ನಟಿಸಿದ್ದರು

810

ಮಾಲಿವುಡ್‌ನ ಯುವನಟಿ ಅಪರ್ಣಾ ಬಾಲಮುರಳಿ ಸೂರ್ಯನ ಪತ್ನಿಯಾಗಿ ಬೊಮ್ಮಿ ಪಾತ್ರದಲ್ಲಿ ನಟಿಸಿದ್ದರು. ಇದು ಯುವ ನಟಿಗೆ ಬ್ರೇಕ್ ಕೊಟ್ಟ ಸಿನಿಮಾ.

910

ಅದೇ ರೀತಿ ಈಗ ತಮ್ಮ ಮತ್ತೊಂದು ನೈಜ್ಯ ಘಟನೆಯಾಧಾರಿತ ಸಿನಿಮಾ ಜೈ ಭೀಮ್‌ನಲ್ಲಿಯೂ ನಟಿ ಮಾಲಿವುಡ್ ನಟಿಯರಿಗೆ ಅವಕಾಶ ಕೊಟ್ಟಿದ್ದಾರೆ. ಲಿಜೊ ಮೋಳ್ ಜೋಸ್ ಸೆಂಗೆಣಿಯಾಗಿ ನಟಿಸಿದರೆ, ಮತ್ತೊಬ್ಬ ಯುವನಟಿ ರಜೀಶಾ ವಿಜಯನ್ ಮೈತ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

1010

ತಮಿಳುನಾಡಿನ ಪಟ್ಟಾಚಿ ಮಕ್ಕಳ್ ಕಚ್ಚಿ (PMK) ಪದಾಧಿಕಾರಿಯು ಕಾಲಿವುಡ್(Kollywood) ಸೂಪರ್‌ಸ್ಟಾರ್ ಸೂರ್ಯ(Suriya) ಮೇಲೆ ದಾಳಿ ಮಾಡಿದರೆ ನಗದು ಬಹುಮಾನವನ್ನು ಘೋಷಿಸಿದ್ದಕ್ಕಾಗಿ ಪಿಎಂಕೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೈ ಭೀಮ್‌ನಲ್ಲಿ(Jai Bhim) ವನ್ನಿಯಾರ್ ಸಮುದಾಯದ ಪಾತ್ರವನ್ನು ಚಿತ್ರಿಸಿರುವ ರೀತಿಯ ಬಗ್ಗೆ ವಿವಾದಕ್ಕೆ ಹೆಚ್ಚಾಗಿದೆ.

Read more Photos on
click me!

Recommended Stories