Jai Bhima: ನಟ ಸೂರ್ಯನ ಮೇಲೆ ದಾಳಿ ಮಾಡಿದ್ರೆ 1 ಲಕ್ಷ ಘೋಷಿಸಿದ PMK, ಕೇಸ್ ದಾಖಲು

Published : Nov 18, 2021, 08:24 AM ISTUpdated : Nov 18, 2021, 04:04 PM IST

Jai Bhim: ನಟ ಸೂರ್ಯನ ಮೇಲೆ ದಾಳಿ ಮಾಡಿದ್ರೆ 1 ಲಕ್ಷ ರೂಪಾಯಿ ಹಣ ಘೋಷಿಸಿದ ಪಿಎಂಕೆ ವಿರುದ್ಧ ಕೇಸ್

PREV
111
Jai Bhima: ನಟ ಸೂರ್ಯನ ಮೇಲೆ ದಾಳಿ ಮಾಡಿದ್ರೆ 1 ಲಕ್ಷ ಘೋಷಿಸಿದ PMK, ಕೇಸ್ ದಾಖಲು

ತಮಿಳುನಾಡಿನ ಪಟ್ಟಾಚಿ ಮಕ್ಕಳ್ ಕಚ್ಚಿ (PMK) ಪದಾಧಿಕಾರಿಯು ಕಾಲಿವುಡ್(Kollywood) ಸೂಪರ್‌ಸ್ಟಾರ್ ಸೂರ್ಯ(Suriya) ಮೇಲೆ ದಾಳಿ ಮಾಡಿದರೆ ನಗದು ಬಹುಮಾನವನ್ನು ಘೋಷಿಸಿದ್ದಕ್ಕಾಗಿ ಪಿಎಂಕೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

211

ಅವರ ಸಿನಿಮಾ ಜೈ ಭೀಮ್‌ನಲ್ಲಿ(Jai Bhim) ವನ್ನಿಯಾರ್ ಸಮುದಾಯದ ಪಾತ್ರವನ್ನು ಚಿತ್ರಿಸಿರುವ ರೀತಿಯ ಬಗ್ಗೆ ವಿವಾದಕ್ಕೆ ಹೆಚ್ಚಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿನಿಮಾ(Cinema) ಮಾಡಿದ ನಟನಿಗೆ ಅವರ ಅಭಿಮಾನಿಗಳು, ಟ್ವಿಟ್ಟರ್, ಸಹ ಸಿನಿಮಾ ಗಣ್ಯರು ಮತ್ತು ಬಹಳಷ್ಟು ಜನರಿಂದ ಬೆಂಬಲವನ್ನು ಪಡೆದಿದ್ದಾರೆ.

311

ನಟನಿಗೆ ಬೆದರಿಕೆ ಹಾಕಿರುವ ಕುರಿತು ಮಾಧ್ಯಮಗಳ ವರದಿಯನ್ನು ಗಮನದಲ್ಲಿಟ್ಟುಕೊಂಡು, ಮೈಲಾಡುತುರೈ ಪಟ್ಟಣ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

411

ಸೂರ್ಯ ನಟಿಸಿರುವ 'ಜೈ ಭೀಮ್' ಸಿನಿಮಾ ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ. ಸ್ವತಃ ನಟ ಮತ್ತು ಅವರ ಪತ್ನಿ ಜ್ಯೋತಿಕಾ ನಿರ್ಮಿಸಿದ್ದಾರೆ. ಇದನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

511

ಚಿತ್ರವು ಪಿಎಂಕೆಯಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಚಿತ್ರವು ಪಕ್ಷಕ್ಕೆ(Party) ಮಾನಹಾನಿ ಮಾಡಿದೆ ಎಂದು ಆರೋಪಿಸಿ ತೀವ್ರವಾಗಿ ಸಿನಿಮಾವನ್ನು ವಿರೋಧಿಸಿದೆ.

611

ಅಧಿಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತುವ ಮತ್ತು ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುವ ಚಿತ್ರವನ್ನು ರಾಜಕೀಯಗೊಳಿಸಬೇಡಿ ಎಂದು ಪಿಎಂಕೆಗೆ ಈ ಹಿಂದೆ ಕೇಳಿಕೊಂಡಿದ್ದರು.

711

ಬುಧವಾರ ನಟ ಸೂರ್ಯ ಅವರು ಟ್ವಿಟರ್‌ನಲ್ಲಿ ವಿವಿಧ ವಲಯಗಳಿಂದ ತನಗೆ ಸಿಗುತ್ತಿರುವ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ. ಜಾತಿ ವ್ಯವಸ್ಥೆಯನ್ನು(Casre System) ಸುಂದರವಾಗಿ ಕಟ್ಟಿಕೊಟ್ಟ ಉತ್ತಮ ಸಿನಿಮಾ ಎಂದು ಜೈ ಭೀಮ್ ಭಾರೀ ಪ್ರಶಂಸೆ ಪಡೆದಿದೆ.

811

ಆತ್ಮೀಯರೇ, ಜೈಭೀಮ್ ಮೇಲಿನ ನಿಮ್ಮ ಈ ಪ್ರೀತಿ ಅಗಾಧವಾಗಿದೆ. ನಾನು ಇದನ್ನು ಹಿಂದೆಂದೂ ನೋಡಿರಲಿಲ್ಲ! ನೀವೆಲ್ಲರೂ ನಮಗೆ ನೀಡಿದ ವಿಶ್ವಾಸ, ಭರವಸೆಗಾಗಿ ನಾನು ಎಷ್ಟು ಕೃತಜ್ಞನಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಮ್ಮೊಂದಿಗೆ ನಿಂತಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಸೂರ್ಯ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಇಲ್ಲಿನ ನಟನ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

911

ಈ ಹಿಂದೆ ವನ್ನಿಯಾರ್ ಸಂಗಮ್ 'ಜೈ ಭೀಮ್' ಸಿನಿಮಾ ತಮ್ಮ ಸಮುದಾಯದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಆರೋಪಿಸಿ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿತ್ತು. ನಿರ್ಮಾಪಕರು ಪಿಎಂಕೆಗೆ ಬೇಷರತ್ ಕ್ಷಮೆಯಾಚಿಸುವಂತೆ ಕೋರಿತ್ತು.

1011

ಸಮುದಾಯಕ್ಕೆ ಹಾನಿಕರ, ಕಳಂಕ ಮತ್ತು ಖ್ಯಾತಿಗೆ ಹಾನಿ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವುದು, ಇದೇ ರೀತಿಯ ದುರುದ್ದೇಶಪೂರಿತ ನಡೆಗಳಿಂದ ದೂರವಿಡುವುದು, 5 ಕೋಟಿ ರೂಪಾಯಿಗಳ ನಷ್ಟವನ್ನು ಪಾವತಿಸುವ ಬೇಡಿಕೆಗಳೊಂದಿಗೆ ಲೀಗಲ್ ನೋಟಿಸ್(Legal Notice) ಕಳುಹಿಸಲಾಗಿದೆ. 'ಜೈ ಭೀಮ್' ಇತ್ತೀಚೆಗೆ ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

1111

ತಮಿಳುನಾಡಿನಲ್ಲಿ 1995 ರಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಕೊಂದ ಸಾವಿನ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಕೆಲವು ಕಾಲ್ಪನಿಕ ಅಂಶಗಳನ್ನು ಹೊಂದಿದೆ.

Read more Photos on
click me!

Recommended Stories