ಕಾರ್ಮಿಕರಿಗೆ ವೇತನ ಪಾವತಿಸದ ರಾಮ್ ಗೋಪಾಲ್ ವರ್ಮಾಗೆ ಲೀಗಲ್‌ ನೋಟಿಸ್‌

First Published Jan 13, 2021, 8:42 PM IST

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೆ ವರ್ಮಾರ ವಿಷಯ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಬಾಕಿ ಹಣ ಪಾವತಿ ಮಾಡದ ರಾಮ್ ಗೋಪಾಲ್ ವರ್ಮಾಗೆ ಲೀಗಲ್‌ ನೋಟಿಸ್‌ ಕೊಡಲಾಗಿದೆ. ಇಲ್ಲಿದೆ ವಿವರ.

ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗೆ ವೇತನ ಪಾವತಿಸದ ಕಾರಣಬಾಲಿವುಡ್‌ ಫೇಮಸ್‌ ಡೈರೆಕ್ಟರ್‌ ರಾಮ್ ಗೋಪಾಲ್ ವರ್ಮಾರಿಗೆ ಲೀಗಲ್‌ ನೋಟಿಸ್ ನೀಡಲಾಗಿದೆ.
undefined
ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾತಮ್ಮ ಇತ್ತೀಚಿನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗೆ ಹಣ ನೀಡದ ಕಾರಣ ಸುದ್ದಿಯಲ್ಲಿದ್ದಾರೆ.
undefined
ಪಾವತಿಸಬೇಕಾದ ಬಾಕಿ ಮೊತ್ತದ ಬಗ್ಗೆ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ನೌಕರರು ಡೈರೆಕ್ಟರ್‌ಗೆ ಲೀಗಲ್‌ ನೋಟಿಸ್‌ ನೀಡಿದ್ದಾರೆ. ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗೆ ಆರ್‌ಜಿವಿ 1.25 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ದೂರು ಸಲ್ಲಿಸಿದ್ದಾರೆ.
undefined
ನೋಟಿಸ್‌ಗೆ ಆರ್‌ಜಿವಿ ಯಾವುದೇ ಉತ್ತರ ನೀಡದ ಕಾರಣ, ಎಫ್‌ವೈಐಸಿಇ ತನ್ನ 32 ಯೂನಿಯನ್ಸ್‌ ಇವರೊಂದಿಗೆ ಕೆಲಸ ಮಾಡದಿರಲು ನಿರ್ಧರಿಸಿದೆ.
undefined
'ಬಡ ತಂತ್ರಜ್ಞರು, ಕಲಾವಿದರು ಮತ್ತು ಕಾರ್ಮಿಕರ ಬಾಕಿ ಹಣವನ್ನು ರಾಮ್ ಗೋಪಾಲ್ ವರ್ಮಾ ಅವರು ಪಾವತಿಸಬೇಕೆಂದುಬಯಸಿದ್ದೆವು. ಆದರೆ, ಅವರು ಇನ್ನೂ ನೀಡಿಲ್ಲ. ಇದರಿಂದ ಬಡ ಕಾರ್ಮಿಕರಿಗೆ ಕಷ್ಟವಾಗಿದೆ.ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡದಿರಲು ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ (ಐಎಂಪಿಪಿಎ) ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಇತರ ಒಕ್ಕೂಟಗಳಿಗೂ ಈ ಬಗ್ಗೆ ನಾವು ಸೂಚಿಸಿದ್ದೇವೆ' ಎಂದು FWICE ಅಧ್ಯಕ್ಷ ಬಿ.ಎನ್ ತಿವಾರಿ ಹೇಳಿಕೆ ನೀಡಿದ್ದಾರೆ.
undefined
2020ರ ಸೆಪ್ಟೆಂಬರ್ 17 ರಂದು ನೋಟಿಸ್ ಕಳುಹಿಸಲಾಗಿದೆ ಮತ್ತು ಬಾಕಿ ಮೊತ್ತವನ್ನು ಪಾವತಿಸಲು ಆರ್‌ಜಿವಿಗೆ ಆದೇಶಿಸಲಾಗಿದೆ. ಆದರೆ ಅವರು ಹಾಗೇ ಮಾಡಲು ನಿರಾಕರಿಸಿದರು ಎಂದು ಅಧ್ಯಕ್ಷರು ಹೇಳಿದ್ದಾರೆ.
undefined
ಕೆಲವು ದಿನಗಳ ಹಿಂದೆ, ರಾಮ್ ಗೋಪಾಲ್ ವರ್ಮಾ ಮುಂಬಯಿಯಿಂದ ಗೋವಾಕ್ಕೆ ಶಾಶ್ವತವಾಗಿ ಶಿಫ್ಟ್‌ ಆಗಲಿರುವ ಕಾರಣಕ್ಕೆ ಸುದ್ದಿಯಾಗಿದ್ದರು.
undefined
click me!