ನನ್ನ ಮೇಲೆ ನಿರ್ದೇಶಕನಿಂದ ರೇ*ಪ್​ ಪ್ರಯತ್ನ- ಮನೆಯವ್ರೂ ಸುಮ್ಮನಿದ್ರು: ಮಕ್ಕಳನ್ನೂ ಬಿಡಲ್ಲ ಆತ, ಮೊನಾಲಿಸಾ ಕಣ್ಣೀರು

Published : Mar 25, 2026, 12:17 PM IST

ಕುಂಭಮೇಳದ ಮೂಲಕ ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕನೊಂದಿಗೆ ವಿವಾಹವಾಗಿ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ತಮಗೆ ಸಿನಿಮಾ ಅವಕಾಶ ನೀಡಿದ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧವೇ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದು, ಈ ಹಿಂದೆ ಇದೇ ನಿರ್ದೇಶಕನನ್ನು ಹೊಗಳಿದ್ದು ಚರ್ಚೆಗೆ ಕಾರಣವಾಗಿದೆ.

PREV
16
ಮೊನಾಲಿಸಾ ಮತ್ತೆ ಸದ್ದು

ಕುಂಭಮೇಳದ ವೈರಲ್​ ಗರ್ಲ್​ ಮೋನಾಲಿಸಾ (Kumbhamela Viral girl Monalisa) ಇದೀಗ ಮುಸ್ಲಿಂ ಯುವಕನನ್ನು ಮದುವೆಯಾಗುವ ಮೂಲಕ ಭಾರಿ ಸದ್ದು ಮಾಡುತ್ತಿದ್ದಾಳೆ. ಇದಾಗಲೇ ಅಂತರ್​ಧರ್ಮೀಯ ಮದುವೆಯಾಗಿರುವ ಹಿನ್ನೆಲೆಯಲ್ಲಿ ತಮಗಿಬ್ಬರಿಗೂ ಜೀವ ಬೆದರಿಕೆ ಬಂದಿರುವುದಾಗಿ ನೇರ ಪ್ರಸಾರದಲ್ಲಿ ಬಂದು ಮೋನಾಲಿಸಾ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

26
ಸಿನಿಮಾದಲ್ಲಿ ಛಾನ್ಸ್​

ಇದಾಗಲೇ ಕುಂಭಮೇಳದಲ್ಲಿ ವೈರಲ್​ ಆದ ಬಳಿಕ ನಿರ್ದೇಶಕ ಸನೋಜ್​ ಮಿಶ್ರಾ (Sanoj Mishra) ಮಣಿಪುರ ಫೈಲ್ಸ್​ ಸಿನಿಮಾದಲ್ಲಿ ಮೊನಾಲಿಸಾಗೆ ಛಾನ್ಸ್​ ಕೊಡುವುದಾಗಿ ಕರೆದುಕೊಂಡು ಹೋಗಿದ್ದರು. ಇವರ ಮೇಲೆ ಇದಾಗಲೇ ಕೆಲವು ಗಂಭೀರ ಆರೋಪಗಳೂ ಇವೆ.

36
ದಿ ಡೈರಿ ಆಫ್ ಮಣಿಪುರ

ಮೊನಾಲಿಸಾ ಶೀಘ್ರವೇ ದಿ ಡೈರಿ ಆಫ್ ಮಣಿಪುರ (The Diary of Manipur) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಮೋನಾಲಿಸ ಮನೆಗೆ ಬಂದಿದ್ದ ಸನೋಜ್ ಮಿಶ್ರಾ, ಬಾಲಿವುಡ್ ನಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಮೋನಾಲಿಸಾ ಒಪ್ಪಿಗೆ ನೀಡಿದ್ರು. ಮೋನಾಲಿಸಾ ಕಣ್ಣು ಸುಂದರವಾಗಿದೆ, ನ್ಯಾಚ್ಯುರಲ್ ಬ್ಯೂಟಿ ಅವರು ಆದ್ರೆ ನಟನೆ ತಿಳಿದಿಲ್ಲ, ಅವರಿಗೆ ನಟನೆ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದರು.

46
ನಿರ್ದೇಶಕನ ಬಗ್ಗೆ ಆರೋಪ

ಈಗ ಮೊನಾಲಿಸಾ ಸನೋಜ್​ ಮಿಶ್ರಾ ಬಗ್ಗೆ ಮಾತನಾಡಿದ್ದಾಳೆ. ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಿ ಇದೇ ರೀತಿ ಅನುಚಿತವಾಗಿ ನಡೆಸಿಕೊಳ್ಳುತ್ತಾರೆ ಅವರು. ನನಗೂ ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಂಡರು. ಎಲ್ಲೆಲ್ಲೋ ಮುಟ್ಟಿದರು. ನಾನು ಸಿನಿಮಾಕ್ಕೆ ಹೋಗಲ್ಲ, ಅದರಿಂದ ಮತ್ತಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಮೊನಾಲಿಸಾ ಕಣ್ಣೀರು ಹಾಕಿದ್ದಾರೆ.

56
ಮನೆಯವರೂ ಸುಮ್ಮನಿದ್ದರು

ಆತ ಸಿನಿಮಾ ಹೆಸರಿನಲ್ಲಿ ಕೆಟ್ಟದ್ದಾಗಿ ನಡೆಸಿಕೊಳ್ತಿದ್ದ ಬಗ್ಗೆ ಮನೆಯವರಿಗೆ ಹೇಳಿದರೂ ಅವರು ಕೇಳಲಿಲ್ಲ. ಸಿನಿಮಾ ಅಂದಮೇಲೆ ಎಲ್ಲಾ ಇರುತ್ತೆ, ಏನಾಗಲ್ಲ ಎಂದರು. ಸಿನಿಮಾ ಎಂದು ನಾನು ರೇ*ಪ್ ಮಾಡಿಸಿಕೊಳ್ಳಲು ಆಗತ್ತಾ ಎಂದು ಮೊನಾಲಿಸಾ ಕೇಳಿದ್ದಾಳೆ.

66
ಆಗ ಹೊಗಳಿದ್ದ ಮೊನಾಲಿಸಾ

ಅಷ್ಟಕ್ಕೂ ಸನೋಜ್​ ಮಿಶ್ರಾ ವಿರುದ್ಧ ಇದಾಗಲೇ ಅ*ತ್ಯಾಚಾರದಂತಹ ಗಂಭೀರ ಆರೋಪಗಳಿವೆ. ಕೆಲ ದಿನಗಳ ಹಿಂದೆ ಅವರನ್ನು ಪೊಲೀಸರು ಬಂಧಿಸಿದ್ದರು. ಇದರ ನಡುವೆಯೇ ಮೊನಾಲಿಸಾ ಸಂದರ್ಶನವೊಂದರಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದರು. ಸನೋಜ್ ಮಿಶ್ರಾ ಅವರೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದಾಗಿ ಒಪ್ಪಿಕೊಂಡಿದ್ದರು. ಆಗ ಮೊನಾಲಿಸಾ ಸನೋಜ್ ಸರ್ ತುಂಬಾ ಒಳ್ಳೆಯ ವ್ಯಕ್ತಿ. ಅವರಿಗೆ ಕೆಟ್ಟದಾಗುತ್ತಿದೆ.. ನನಗೆ ಅವರು ಯಾವುದೇ ಕೆಟ್ಟದ್ದನ್ನು ಮಾಡಿಲ್ಲ ಎಂದು ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories