ಕೃತಿ ಸನನ್ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಹೇಶ್ ಬಾಬು ಜೊತೆ ಮೊದಲ ಚಿತ್ರದಲ್ಲೇ ನಟಿಸುವ ಅವಕಾಶ ಪಡೆದರು. '1 ನೇನೊಕ್ಕಡಿನೆ' ಚಿತ್ರದಲ್ಲಿ ಮಹೇಶ್ ಮತ್ತು ಕೃತಿ ಜೋಡಿಯಾಗಿ ನಟಿಸಿದರು. ತಾಂತ್ರಿಕವಾಗಿ, ಮಹೇಶ್ ಅಭಿನಯ, ಸುಕುಮಾರ್ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಸೋತಿತು.