ಪ್ರಭಾಸ್‌ಗೆ ಸ್ವೀಟ್‌ಹಾರ್ಟ್ ಎಂದ ಕೃತಿ: ಇಬ್ಬರೂ ಹಗ್ ಮಾಡಿರುವ ಕ್ಯೂಟ್ ಫೋಟೋ ವೈರಲ್

Published : Jun 07, 2023, 01:35 PM ISTUpdated : Jun 07, 2023, 01:37 PM IST

'ಪ್ರಭಾಸ್ ಸ್ವೀಟ್‌ಹಾರ್ಟ್' ಎಂದ ಕೃತಿ ಸನೊನ್ ಹಾಡಿಹೊಗಳಿದ್ದಾರೆ. ಇಬ್ಬರೂ ಹಗ್ ಮಾಡಿರುವ ಕ್ಯೂಟ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.  

PREV
17
ಪ್ರಭಾಸ್‌ಗೆ ಸ್ವೀಟ್‌ಹಾರ್ಟ್ ಎಂದ ಕೃತಿ: ಇಬ್ಬರೂ ಹಗ್ ಮಾಡಿರುವ ಕ್ಯೂಟ್ ಫೋಟೋ ವೈರಲ್

ಪ್ರಭಾಸ್ ಮತ್ತು ಕೃತಿ ಸನೋನ್ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರು ಆದಿಪುರುಷ್ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇದೇ ತಿಂಗಳು 16ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಸಿನಿಮಾತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. 

27

ಇತ್ತೀಚೆಗಷ್ಟೆ ಆದಿಪುರುಷ್ ತಂಡ ತಿರುಪತಿಯಲ್ಲಿ ಅದ್ದೂರಿ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಈವೆಂಟ್‌ನಲ್ಲಿ ಪ್ರಭಾಸ್ ಮತ್ತು ಕೃತಿ ಸನೋನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 

37

ಕೃತಿ ಸೀರೆಯಲ್ಲಿ ಕಂಗೊಳಿಸಿದ್ರೆ ಪ್ರಭಾಸ್ ಬಿಳಿ ಕುರ್ತಾ ಪೈಜಾಮ ಧರಿಸಿದ್ದರು. ಇಬ್ಬರ ಸುಂದರ ಫೋಟೋಗಳು ಅಭಿಮಾನಿಗಳ ಹೃದಯ ಗೆದ್ದಿವೆ. ಅಭಿಮಾನಿಗಳು ಫೋಟೋ ಶೇರ್ ಮಾಡಿ ಜೋಡಿ ಸೂಪರ್ ಎಂದು ಹೇಳುತ್ತಿದ್ದಾರೆ. 
 

47

ಪ್ರಭಾಸ್ ಮತ್ತು ಕೃತಿ ಇಬ್ಬರೂ ಹಗ್ ಮಾಡಿ ಮಾತನಾಡುತ್ತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಫೋಟೋ ಶೇರ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರೂ ತಮ್ಮ ನಡುವೆ ಏನು ಇಲ್ಲ ಎಂದು ಸ್ಪಷ್ಟಪಡಿಸಿದ್ರೂ ಸಹ ಜೋಡಿ ಮುದ್ದಾಗಿದೆ ಎಂದು ಹೇಳುತ್ತಿದ್ದಾರೆ ಅಭಿಮಾನಿಗಳು. 

57

ವೇದಿಕೆಯಲ್ಲಿ ಮಾತನಾಡಿದ ಕೃತಿ, ಪ್ರಭಾಸ್ ಅವರನ್ನು ಹಾಡಿಹೊಗಳಿದರು. ಸ್ವೀಟ್ ಹಾರ್ಟ್ ಎಂದು ಕರೆದರು. ಪ್ರಭಾಸ್ ಜಾಸ್ತಿ ಮಾತನಾಡಲ್ಲ ಎಂದು ಹೇಳಿದ್ದೆ. ಆದರೆ ಅದು ಸುಳ್ಳು. ತುಂಬಾ ಮಾತನಾಡುತ್ತಾರೆ. ಅವರು ನಿಜಕ್ಕೂ ಡಾರ್ಲಿಂಗ್, ಸ್ವೀಟ್ ಹಾರ್ಟ್, ತುಂಬಾ ಸ್ವೀಟ್, ಹಾರ್ಡ್ ವರ್ಕರ್ಮತ್ತು ಜಾಸ್ತಿ ತಿನ್ನುತ್ತಾರೆ' ಎಂದು ಹೇಳಿದ್ದಾರೆ. 

67

'ಪ್ರಭಾಸ್ ಬಿಟ್ಟು ಬೇರೆಯವರು ರಾಘವನ ಪಾತ್ರ ಮಾಡುವುದನ್ನು ಊಹಿಸಲು ಸಾಧ್ಯವಾಗಲಿಲ್ಲ' ಎಂದು ಪ್ರಭಾಸ್ ಅವರನ್ನು ಕೃತಿ ಹೊಗಳಿದ್ದಾರೆ. ಕೃತಿಯ ಮಾತುಗಳು ಪ್ರಭಾಸ್ ಅಭಿಮಾನಿಗಳ ಮೆಚ್ಚುಗೆ ಕಾರಣವಾಗಿದೆ. 
 

77

ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಇದೇ ತಿಂಗಳು ಜೂನ್ 16ರಂದು ರಿಲೀಸ್‌ಗೆ ಸಿದ್ಧವಾಗಿದೆ. 

Read more Photos on
click me!

Recommended Stories