ನಟನೆ ಜೊತೆ ಬ್ಯುಸಿನೆಸ್ ಶುರು ಮಾಡಿದ ಕೀರ್ತಿ ಸುರೇಶ್

Published : Aug 21, 2021, 12:59 PM ISTUpdated : Aug 21, 2021, 02:56 PM IST

ಸ್ಕಿನ್ ಕೇರ್ ಪ್ರಾಡಕ್ಟ್ ಬ್ರಾಂಡ್ ಲಾಂಚ್ ಮಾಡಿದ ಕೀರ್ತಿ ಸುರೇಶ್ ನಟನೆಯ ಜೊತೆ ಬ್ಯುಸಿನೆಸ್ ಶುರು ಮಾಡಿದ ನಟಿ

PREV
110
ನಟನೆ ಜೊತೆ ಬ್ಯುಸಿನೆಸ್ ಶುರು ಮಾಡಿದ ಕೀರ್ತಿ ಸುರೇಶ್
keerthy Suresh

ಸಿನಿಮಾ ನಟಿಯರು ಉದ್ಯಮಕ್ಕೆ ಕಾಲಿಡುತ್ತಿರುವುದು ಹೊಸದೇನಲ್ಲ. ನಟಿ ಪ್ರಿಯಾಂಕ ಚೋಪ್ರಾ, ಸನ್ನಿ ಲಿಯೋನ್, ಸಮಂತಾ ಸೇರಿದಂತೆ ಬಹಳಷ್ಟು ನಟಿಯರು ಬ್ಯುಸಿನೆಸ್ ಮಾಡುತ್ತಿದ್ದಾರೆ. ಈಗ ಇವರ ಸಾಲಿಗೆ ಸೌತ್ ಸುಂದರಿ ಕೀರ್ತಿ ಸುರೇಶ್ ಕೂಡಾ ಸೇರಿಕೊಂಡಿದ್ದಾರೆ.

210
keerthy Suresh

ನಟಿಯಾಗಿ ಹಲವು ವರ್ಷಗಳ ಯಶಸ್ಸನ್ನು ಸಂಭ್ರಮಿಸುತ್ತಿರುವ ಕೀರ್ತಿ ಸುರೇಶ್ ಈಗ ತನ್ನ ಹೊಸ ಪೂರ್ಣ ಪ್ರಮಾಣದ ಸೌಂದರ್ಯ ಉದ್ಯಮದ ಮೂಲಕ ಉದ್ಯಮಿಯಾಗಿದ್ದಾರೆ.

310
keerthy Suresh

ಕೀರ್ತಿ ಕಳೆದೆರಡು ದಿನಗಳಿಂದ ನಮಗೆ ಕುತೂಹಲ ಮೂಡಿಸಿದ್ದು ಈ ವಾರ ದೊಡ್ಡ ಘೋಷಣೆಗಾಗಿ ಕಾಯುವಂತೆ ತನ್ನ ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಅಂತಿಮವಾಗಿ ತನ್ನದೇ ಆದ ಸ್ಕಿನ್ ಕೇರ್ ಬ್ರಾಂಡ್ ಅನ್ನು ಪ್ರಾರಂಭಿಸುವ ರೋಮಾಂಚಕಾರಿ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

410
keerthy Suresh

ಸಿನಿಮಾ ನಟಿಯರು ಉದ್ಯಮಕ್ಕೆ ಕಾಲಿಡುತ್ತಿರುವುದು ಹೊಸದೇನಲ್ಲ. ನಟಿ ಪ್ರಿಯಾಂಕ ಚೋಪ್ರಾ, ಸನ್ನಿ ಲಿಯೋನ್, ಸಮಂತಾ ಸೇರಿದಂತೆ ಬಹಳಷ್ಟು ನಟಿಯರು ಬ್ಯುಸಿನೆಸ್ ಮಾಡುತ್ತಿದ್ದಾರೆ. ಈಗ ಇವರ ಸಾಲಿಗೆ ಸೌತ್ ಸುಂದರಿ ಕೀರ್ತಿ ಸುರೇಶ್ ಕೂಡಾ ಸೇರಿಕೊಂಡಿದ್ದಾರೆ.

510
keerthy Suresh

ಕಾಯುವಿಕೆ ಹೆಚ್ಚಾಗಿದೆ. ನನ್ನ ತ್ವಚೆ ಬ್ರಾಂಡ್ ಭೂಮಿತ್ರ ಈಗ ಲೈವ್ ಆಗಿದೆ ಎಂದು ಘೋಷಿಸಲು ಖುಷಿಯಾಗಿದೆ! ನನ್ನ ಸಂತೋಷವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ! ಎಂದು ಕೀರ್ತಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಡಿಸೈನರ್ ಶಿಲ್ಪಾ ರೆಡ್ಡಿ ಮತ್ತು ಉದ್ಯಮಿ ಕಂಠಿ ದತ್ ಸಹಭಾಗಿತ್ವದಲ್ಲಿ ಅವರು ಈ ಹೊಸ ಉದ್ಯಮ ಆರಂಭಿಸಿದ್ದಾರೆ.

610
keerthy Suresh

ಕೀರ್ತಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಸುಮಾರು 4 ತಿಂಗಳಿನಿಂದ ತನ್ನ ಸ್ಕಿನ್ ಬ್ರಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಉತ್ಪನ್ನಗಳು ಶುದ್ಧ ಮತ್ತು ಸಾವಯವವಾಗಿದೆ ಎಂದು ಹೇಳಿದ್ದಾರೆ.

710
keerthy Suresh

ಕೀರ್ತಿಯ ಪ್ರಕಾರ ಭೂಮಿತ್ರ ಉತ್ಪನ್ನಗಳು ಕೇಸರಿ, ಗುಲಾಬಿ, ಕರ್ಪೂರ, ಕಿತ್ತಳೆ ಸಿಪ್ಪೆ ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಮಾತ್ರ ಒಳಗೊಂಡಿರುತ್ತವೆ.

810
keerthy Suresh

ನಟಿಯ ಉತ್ಪನ್ನಗಳು ಚರ್ಮದ ಆರೋಗ್ಯ ಮತ್ತು ಕಾಂತಿಗೆ ಅತ್ಯಂತ ಸುರಕ್ಷಿತವೆಂದು ಹೇಳಿದ್ದಾರೆ. ನೀವು ಮಾತ್ರವಲ್ಲ, ನಿಮ್ಮ ಚರ್ಮವು ನಮ್ಮ ಉತ್ಪನ್ನಗಳನ್ನು ಪ್ರೀತಿಸುತ್ತದೆ ಎಂದು ಹೇಳಿದ್ದಾರೆ ಕೀರ್ತಿ

910
keerthy Suresh

ಕೀರ್ತಿ ತನ್ನ ವೆಬ್‌ಸೈಟ್ ಲಿಂಕ್ ಅನ್ನು ಹಂಚಿಕೊಂಡಿದ್ದು, ಪ್ರತಿಯೊಬ್ಬರೂ ಹೊಸ ಉದ್ಯ,ಮಕ್ಕೆ ತನ್ನನ್ನು ಬೆಂಬಲಿಸುವಂತೆ ಕೇಳಿಕೊಂಡರು.

1010
keerthy Suresh

ಎಲ್ಲಾ ನೈಸರ್ಗಿಕ ಮತ್ತು ವೈದ್ಯಕೀಯವಾಗಿ ಮೌಲ್ಯೀಕರಿಸಿದ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಹೆಚ್ಚು ಅಗತ್ಯವಿರುವ ತ್ವಚೆಯ ಉತ್ಪನ್ನಗಳನ್ನು ಪ್ರಾರಂಭಿಸಿದ್ದಾರೆ ನಟಿ. ತನ್ನ ಬ್ಯುಸಿನೆಸ್ ಪಾಲುದಾರರೊಂದಿಗೆ ಕೀರ್ತಿ

click me!

Recommended Stories