ಕರಣ್ ಜೋಹರ್ ಮಕ್ಕಳ ಬರ್ತ್‌ಡೇ ಪಾರ್ಟಿಯಲ್ಲಿ ಮಕ್ಕಳೊಂದಿಗೆ ಕಂಡ ಸೆಲೆಬ್ರೆಟಿಗಳು!
First Published | Feb 10, 2021, 3:15 PM ISTಬಾಲಿವುಡ್‌ನ ಫೇಮಸ್ ಫಿಲ್ಮ್ ಮೇಕರ್ ಕರಣ್ ಜೋಹರ್ ಅವಳಿ ಮಕ್ಕಳಾದ ಯಶ್ ಮತ್ತು ರೂಹಿಗೆ 4 ವರ್ಷಗಳು ತುಂಬಿವೆ. 7 ಫೆಬ್ರವರಿ 2018ರಂದು ಜನಿಸಿರುವ ಈ ಮಕ್ಕಳಿಗಾಗಿ ಕರಣ್ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ತಮ್ಮ ಮಕ್ಕಳೊಂದಿಗೆ ಕರಣ್ ಮಕ್ಕಳ ಬರ್ತ್‌ಡೇ ಪಾರ್ಟಿಗೆ ಹಾಜರಿದ್ದರು. ಕರೀನಾ ಕಪೂರ್, ತೈಮೂರ್ ಅಲಿ ಖಾನ್, ನೇಹಾ ಧೂಪಿಯಾ, ಅಂಗದ್ ಬೇಡಿ, ನತಾಶಾ ಪೂನವಾಲಾ, ತುಷಾರ್ ಕಪೂರ್, ಏಕ್ತಾ ಕಪೂರ್, ರವಿ ಕಪೂರ್, ಗೌರಿ ಖಾನ್, ಅಬ್ರಾಮ್ ಖಾನ್ ಯಶ್-ರೂಹಿಯ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸೆಲೆಬ್ರೆಷನ್‌ನ ಅನೇಕ ಫೋಟೋಗಳನ್ನು ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.