ಲಂಗ ದಾವಣಿಯಲ್ಲಿ‌ ಬಿಂದಾಸ್ ಬೆಡಗಿ... ಬಬ್ಲಿ ಆಗಿರೋವಾಗ್ಲೇ ಚೆನ್ನಾಗಿದ್ರಿ ಎಂದ ಫ್ಯಾನ್ಸ್

First Published | Nov 13, 2024, 10:24 PM IST

ಬಿಂದಾಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿದ್ದ ನಟಿ ಹನ್ಸಿಕಾ ಮೋಟ್ವಾನಿ ಈವಾಗ ತುಂಬಾನೆ ಸ್ಲಿಮ್ ಆಗಿ, ಸಖತ್ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. 
 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಬಿಂದಾಸ್ ಚಿತ್ರದ ಮೂಲಕ ಕನ್ನದ ಪ್ರೇಕ್ಷಕರಿಗೆ ಪರಿಚಯವಾದ ಹನ್ಸಿಕಾ ಮೋಟ್ವಾನಿ... ತನ್ನ ಸೌಂದರ್ಯ, ಬಬ್ಲಿ ಲುಕ್ ಅಭಿನಯದಿಂದ ಕನ್ನಡ ಅಭಿಮಾಗಳನ್ನು ಸಹ ಹೊಂದಿದ್ದಾರೆ. 
 

ಬಾಲನಟಿಯಾಗಿ ಸಿನಿಮಾ, ಸೀರಿಯಲ್ ಗಳಲ್ಲಿ ಮಿಂಚಿದ ಹನ್ಸಿಕಾ ಮೋಟ್ವಾನಿ (Hansika Motwani), ಅಲ್ಲು ಅರ್ಜುನ್ ಗೆ ದೇಶಮುದುರು ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಅಪಾರ ಪ್ರೇಕ್ಷಕರ ಮನ ಗೆದ್ದಿದ್ದರು. ಮೊದಲ ಸಿನಿಮಾಕ್ಕೆ ಫಿಲಂ ಫೇರ್ ಕೂಡ ಪಡೆದಿದ್ದರು. 
 

Tap to resize

ಇದಾದ ನಂತರ ಒಂದು ಕನ್ನಡ, ಒಂದು ಮಲಯಾಲಂ ಸೇರಿ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾ ಇಂಡಷ್ಟ್ರಿಯಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹನ್ಸಿಕಾ. 
 

ತಮ್ಮ ಬೆಸ್ಟ್ ಫ್ರೆಂಡ್ ಡಿವೋರ್ಸ್ ಬಳಿಕ ಆಕೆಯ ಗಂಡನನ್ನೆ ಮದುವೆಯಾಗುವ ಮೂಲಕ ಭಾರಿ ಕಾಂಟ್ರವರ್ಸಿಗೂ ಗುರಿಯಾಗಿದ್ದ ಹನ್ಸಿಕಾ ಮೋಟ್ವಾನಿ, ಸದ್ಯ ಸಿನಿಮಾ, ಫ್ಯಾಮಿಲಿ ಎನ್ನುತ್ತಾ ಬಿಂದಾಸ್ ಜೀವನ ನಡೆಸುತ್ತಿದ್ದಾರೆ. 
 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್, ಟ್ರೆಡಿಶನಲ್ ಫೋಟೊಗಳನ್ನು ಹಾಗೂ ತಮ್ಮ ಪರ್ಸನಲ್ ಲೈಫ್ ಫೋಟೊಗಳನ್ನು ಶೇರ್ ಮಾಡೋ ಮೂಲಕ ಫ್ಯಾನ್ಸ್ ಜೊತೆ ಕನೆಕ್ಟ್ ಆಗಿರುತ್ತಾರೆ ಬೆಡಗಿ. 
 

ಇದೀಗ ಹನ್ಸಿಕಾ ಹಳದಿ ಬಣ್ಣದ ಲಂಗ, ಕೆಂಪು ಬಣ್ಣದ ದಾವಣಿ, ಬ್ಲೌಸ್ ಧರಿಸಿ, ಟ್ರೆಡಿಶನಲ್ ಆಗಿ ಫೋಟೊ ಶೂಟ್ ಮಾಡಿಸಿದ್ದು, ನಟಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಜನ ಬ್ಯೂಟಿಫುಲ್, ಗಾರ್ಜಿಯಸ್, ಸುಂದರಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಅಷ್ಟೇ ಅಲ್ಲ ಹನ್ಸಿಕಾ ಇದೀಗ ತುಂಬಾನೆ ಸ್ಲಿಮ್ ಹಾಗೂ ಸ್ಟೈಲಿಶ್ ಆಗಿದು, ಮೊದಲಿನ ಚಬ್ಬಿ ಲುಕ್ ಈಗ ಇಲ್ಲ. ಹಾಗಾಗಿ ಫ್ಯಾನ್ಸ್ ಕೂಡ, ಮೇಡಂ ನೀವು ಮೊದಲು ಗುಂಡು ಗುಂಡಾಗಿ ಇರೋವಾಗ್ಲೇ ಚೆನ್ನಾಗಿದ್ರಿ, ಈವಾಗ ಸ್ಲಿಮ್ ಆಗಿ ಚೆನ್ನಾಗಿ ಕಾಣಿಸ್ತಿಲ್ಲ ಅಂತಾನೂ ಹೇಳಿದ್ದಾರೆ. 
 

Latest Videos

click me!