ಕಂಗುವಾದಿಂದ ಕಂಗಾಲಾದ ಬೆನ್ನಲ್ಲೇ ಮೂಕಾಂಬಿಕಾ ಮೊರೆ ಹೋದ ನಟ ಸೂರ್ಯ ದಂಪತಿ!

Published : Nov 26, 2024, 05:12 PM IST

ತಮಿಳು ನಟ ಸೂರ್ಯ ಮತ್ತು ಅವರ ಪತ್ನಿ ಜ್ಯೋತಿಕಾ ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಕಂಗುವಾ ಸಿನಿಮಾ ಸೋಲಿನ ನಂತರ ಈ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

PREV
15
ಕಂಗುವಾದಿಂದ ಕಂಗಾಲಾದ ಬೆನ್ನಲ್ಲೇ ಮೂಕಾಂಬಿಕಾ ಮೊರೆ ಹೋದ ನಟ ಸೂರ್ಯ ದಂಪತಿ!

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅವರು ಕಂಗುವಾ ಸಿನಿಮಾ ಸೋಲಿನ ಬೆನ್ನಲ್ಲಿಯೇ ಕನ್ನಡ ನಾಡಿನ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನಕ್ಕೆ ಬಂದಿದ್ದಾರೆ.

25

ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ನಟ-ನಟಿಯರು ಕೂಡ ಕರ್ನಾಕದ ಪ್ರಸಿದ್ಧ ಶಕ್ತಿ ಪೀಠಗಳಿಗೆ ಬಂದು ಪೂಜೆ, ಪುನಸ್ಕಾರ ನೆರವೇರಿಸಿ ಹೋಗುತ್ತಾರೆ. ಅಂತಹ ಶಕ್ತಿ ಪೀಠಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದಾಗಿದೆ.

35

ತಮಿಳು ಸ್ಟಾರ್ ನಟ ಸೂರ್ಯ ಅವರ ನಟನೆಯ ಬಹುನಿರೀಕ್ಷಿತ ದೊಡ್ಡ ಬಜೆಟ್‌ನ ಸಿನಿಮಾ ಕಂಗುವಾ ಸೋತು ಸುಣ್ಣವಾಗಿದೆ. ಇದರ ಬೆನ್ನಲ್ಲಿಯೇ ನಟ ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ ಇಬ್ಬರೂ ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕಾ ದೇವಿದರ್ಶನಕ್ಕೆ ಬಂದು ಪೂಜೆ ನೆರವೇರಿಸಿ ಹೋಗಿದ್ದಾರೆ.

45

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಬಗ್ಗೆ ಅಭಿಮಾನಿಗಳಿಗಾಗಲೀ ದೇವಸ್ಥಾನ ಆಡಳಿತ ಮಂಡಳಿಗಾಗಲೀ ಪೂರ್ವ ಮಾಹಿತಿ ನೀಡದೇ ದಿಢೀರನೇ ಸಾಮಾನ್ಯ ಭಕ್ತರಂತೆ ಭೇಟಿ ನೀಡಿದ್ದಾರೆ. ನಂತರ, ದೇವಸ್ಥಾನಕ್ಕೆ ತೆರಳಿದಾಗ ಅಲ್ಲಿನ ಆಡಳಿತ ಮಂಡಳಿಯ ಸಿಬ್ಬಂದಿ ವಿಶೇಷ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

55

ಕರ್ನಾಟಕದಲ್ಲಿ ಕೊಲ್ಲೂರು ಮೂಕಾಂಬಿ, ಶೃಂಗೇರಿ ಶಾರದಾಂಬಾ, ಉಡುಪಿ ಕೃಷ್ಣ, ಧರ್ಮಸ್ಥಳ ಮಂಜುನಾಥಸ್ವಾಮಿ, ಗೋಕರ್ಣ ಮಹಬಲೇಶ್ವರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಸೇರಿ ಮಂಗಳೂರಿನ ವಿವಿಧ ದೇವಾಲಯಗಳಿಗೆ ಭಾರತೀಯ ಚಿತ್ರರಂಗದ ಅನೇಕ ನಟ-ನಟಿಯರು ಬಂದು ಭೇಟಿ ಮಾಡಿ ಹೋಗುತ್ತಿದ್ದಾರೆ. ಇದಕ್ಕೆ ಕ್ರಿಕೆಟಿಗರು ಸೇರಿದಂತೆ ರಾಜಕೀಯ ಗಣ್ಯ ವ್ಯಕ್ತಿಗಳೂ ಹೊರತಾಗಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories