ಫಸ್ಟ್‌ ಲವ್‌ ಹಾಗೂ ಫಸ್ಟ್‌ ಕಿಸ್‌ ಅನುಭವ ರಿವೀಲ್‌ ಮಾಡಿದ ಕಂಗನಾ!

First Published | Feb 8, 2021, 3:18 PM IST

ಬಾಲಿವುಡ್‌ನ ಕ್ವೀನ್‌ ಕಂಗನಾ ರಣಾವತ್‌ ಸದಾ ತಮ್ಮ ಹೇಳಿಕೆಗಳಿಂದ ಚರ್ಚೆಯಲ್ಲಿರುತ್ತಾರೆ. ಈ ದಿನಗಳಲ್ಲಿ ರೈತ ಚಳುವಳಿಗಳಿಗೆ ಸಂಬಂಧಿಸಿದ ಅವರ ಟ್ವೀಟ್‌ಗಳ ಕಾರಣದಿಂದ ಮುಖ್ಯಾಂಶದಲ್ಲಿದ್ದಾರೆ. ಈ ನಡುವೆ ಕಂಗನಾರ ಹಳೆ ಇಂಟರ್‌ವ್ಯೂವ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದರಲ್ಲಿ ನಟಿ ತಮ್ಮ ಫಸ್ಟ್‌ ಕಿಸ್‌ ಹಾಗೂ ಫಸ್ಟ್‌ ಲವ್‌ ಬಗ್ಗೆ ರಿವೀಲ್‌ ಮಾಡಿದ್ದಾರೆ. ವಿವರ ಇಲ್ಲಿದೆ.

ಬಾಲಿವುಡ್‌ ನಟಿ ತಮ್ಮ ಸುಂದರ ಕವನ ಹಾಗೂ ಜೀವನಸ ಪುಟಗಳಿಗೆ ಸಂಬಂಧಿಸಿದ ಶಾಯಿರಿಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.
ಒಮ್ಮೆ ಇಂಟರ್‌ವ್ಯೂವ್‌ವೊಂದರಲ್ಲಿ ತಮ್ಮ ಫಸ್ಟ್‌ ಕಿಸ್‌ ಬಗ್ಗೆ ಮಾತಾನಾಡುತ್ತಾ, ಅದು ತುಂಬಾ ತಮಾಷೆಯ ಘಟನೆ ಎಂದು ಹೇಳಿದ್ದರು.
Tap to resize

ಅವರಿಗೆ ಕಿಸ್‌ ಮಾಡಲು ಸಾಧ್ಯವಾಗಲಿಲ್ಲ. ಅದ್ದರಿಂದ ಮೊದಲು ಅವರ ಅಂಗೈ ಮೇಲೆ ಕಿಸ್‌ ಮಾಡುವ ಮೂಲಕ ಪ್ರಾಕ್ಟೀಸ್‌ ಮಾಡುತ್ತಿದ್ದರು ಎಂದಿದ್ದಾರೆ!
ಆ ಮೊದಲ ಕಿಸ್‌ ಖಂಡಿತವಾಗಿಯೂ ಮ್ಯಾಜಿಕಲ್‌ ಆಗಿರಲಿಲ್ಲ, ಎಂದಿದ್ದಾರೆ ಬಾಲಿವುಡ್ ಕ್ವೀನ್.
ಆ ಚುಂಬನ ತುಂಬಾ ವಿಚಿತ್ರವಾಗಿತ್ತು. ಅವರ ತುಟಿ ಫ್ರೀಜ್ ಆಗಿತ್ತು ಮತ್ತು ಅವರಿಗೆ ಅಲುಗಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
9ನೇ ತರಗತಿಯಲ್ಲಿರುವಾಗ ಸ್ಕೂಲ್ ಟೀಚರ್‌ ಅನ್ನೇ ಇಷ್ಟಪಡಲು ಪ್ರಾರಂಭಿಸಿದ್ದರಂತೆ ಈ ನಟಿ. ಆ ಸಮಯದಲ್ಲಿ ಚಾಂದ್‌ ಚುಪಾ ಹಾಡು ಬಿಡುಗಡೆಯಾಗಿತ್ತು. ನಾನು ದುಪ್ಪಟ್ಟ ಹಿಡಿದು ಕೇವಲ ಆ ಟೀಚರ್‌ ಬಗ್ಗೆಯೇ ಯೋಚಿಸುತ್ತಿದ್ದೆ ಎಂದಿದ್ದಾರೆ ಮಣಿಕರ್ಣೀಕಾ ನಟಿ.
ನಂತರ ಸಿನಿಮಾರಂಗಕ್ಕೆ ಕಾಲಿಟ್ಟ ಮೇಲೆ ಕಂಗನಾರ ಲವ್‌ ಲೈಫ್‌ ಸಾಕಷ್ಟು ಚರ್ಚೆಯಾಗಿದೆ. ಇವರ ಹೆಸರು ಅದಿತ್ಯ ಪಾಂಚೋಲಿ ಮತ್ತು ಹೃತಿಕ್‌ ರೋಷನ್‌ ಅಂತಹ ಸ್ಟಾರ್ಸ್‌ ಜೊತೆ ಲಿಂಕ್‌ ಆಗಿತ್ತು.
ಆದರೆ ಇವರ ಲವ್‌ಸ್ಟೋರಿಗಳು ಯಾವಾಗಲೂ ತೊಂದರೆಗೆ ಕಾರಣವಾಗಿದೆ. ಇವರ ಮತ್ತು ಹೃತಿಕ್‌ ರಿಲೆಷನ್‌ಶಿಪ್‌ ಇನ್ನೂ ಚರ್ಚೆಯಲ್ಲಿದೆ.
ಪ್ರಸ್ತುತಕಂಗನಾ ರಣಾವತ್ ಧಾಕಡ್‌ ಮತ್ತು ತೇಜಸ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.

Latest Videos

click me!