ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಕಾಜಲ್ ಅಗರ್‌ವಾಲ್ ಮದುವೆಯಾಗುತ್ತಿದ್ದಾರೆ. ಹೌದು ಅವರೇ ಈ ಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಕಾಜಲ್ ಮನಗೆದ್ದ ಹುಡುಗ ಯಾರು? ಕಾಜಲ್ 35 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಮದುವೆ ಮಾತುಕತೆ ಆಡಿದ್ದಾರೆ. ಕಳೆದ ವರ್ಷವೂ ಕಾಜಲ್ ಅಗರ್‌ವಾಲ್ ಮದುವೆ ಆಗೆ ಬಿಟ್ಟರು ಎಂಬ ಸುದ್ದಿ ಹರಿದಾಡಿತ್ತು. ಕೊರಟಾಲ ಶಿವ ನಿರ್ದೇಶನದ ಚಿರಂಜೀವಿ ಜತೆ ಆಚಾರ್ಯದಲ್ಲಿಯೂ ಕಾಜಲ್ ಕಾಣಿಸಿಕೊಳ್ಳುತ್ತಿದ್ದಾರೆ. ಔರಂಗಾಬಾದ್ ಮೂಲದ ಉದ್ಯಮಿಯೊಬ್ಬರ ಜತೆ ಕಾಜಲ್ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಚಾಟ್ ಶೋ ಒಂದರಲ್ಲಿ ಮದುವೆ ಕುರಿತು ಎದುದಾರ ಪ್ರಶ್ನೆಗೆ ಉತ್ತರಿಸಿದ ಕಾಜಲ್ ಸದ್ಯವೇ ಎಲ್ಲವೂ ಆಗಲಿದೆ ಎಂದಿದ್ದಾರೆ. ನಿಮ್ಮ ಹುಡುಗ ಹೇಗಿರಬೇಕು ಎಂದಿದ್ದಕ್ಕೆ, ಪೊಸೆಸಿವ್, ಕೇರಿಂಗ್ ಮತ್ತು ಆಧ್ಯಾತ್ಮದ ಒಲವು ಇರಬೇಕು ಎಂದು ಹೇಳಿದ್ದಾರೆ. ಮಗಧೀರ ಚಿತ್ರ ಕಾಜಲ್ ಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. Actress Kajal Aggarwal had confirmed she indeed plans to get married soon ದಕ್ಷಿಣ ಭಾರತದ ತಾರೆ ಕಾಜಲ್ ಅಗರ್‌ವಾಲ್ ಔರಂಗಾಬಾದ್ ಉದ್ಯಮಿ ಒಬ್ಬರನ್ನು ವರಿಸಲಿದ್ದಾರೆ.