ಯಂಗ್ ಟೈಗರ್ ಜೂ.ಎನ್‌ಟಿಆರ್ ನಟನಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ. ದೇವರ, ವಾರ್ 2 ನಂತಹ ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಕೂಡ ಆರಂಭವಾಗಿದೆ. ಆದರೆ ಹಿಂದೆ ಜೂ.ಎನ್‌ಟಿಆರ್ ಅನೇಕ ಫ್ಲಾಪ್ ಸಿನಿಮಾಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಕಂಡಿದ್ದಾರೆ. ಸಿಂಹಾದ್ರಿ ನಂತರ ಜೂ.ಎನ್‌ಟಿಆರ್ ಬಹಳ ಕುಗ್ಗುವಿಕೆಯನ್ನು ಕಂಡರು. ಮತ್ತೆ ಯಮದೊಂಗ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದರು.