ಜ್ಯೂನಿಯರ್ ಎನ್‌ಟಿಆರ್‌ಗೆ ಕ್ವಾಟ್ಲೆ ಕೊಡ್ತಿದ್ದ ಕಾಮಿಡಿ ಕಿಲಾಡಿಗಳು; ಸಿನಿಮಾದಲ್ಲಿ ನಟಿಸೋಕೂ ಬಿಡ್ತಿರಲಿಲ್ಲ!

Published : Feb 13, 2025, 03:44 PM ISTUpdated : Feb 13, 2025, 03:49 PM IST

ಜೂನಿಯರ್ ಎನ್ಟಿಆರ್‌ಗೆ ಕೆಲವೊಮ್ಮೆ ನಟಿಸೋದೇ ಕಷ್ಟ ಅಂತೆ. ಈ ವಿಷ್ಯವನ್ನ ಅವರೇ ಹೇಳಿಕೊಂಡಿದ್ದಾರೆ. ಕೆಲವು ಜನ ಪಕ್ಕದಲ್ಲಿ ಇದ್ರೆ ನಟನೆ ಮಾಡೋಕೆ ಆಗಲ್ಲ ಅಂತ ಎನ್ಟಿಆರ್ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

PREV
15
ಜ್ಯೂನಿಯರ್ ಎನ್‌ಟಿಆರ್‌ಗೆ ಕ್ವಾಟ್ಲೆ ಕೊಡ್ತಿದ್ದ ಕಾಮಿಡಿ ಕಿಲಾಡಿಗಳು; ಸಿನಿಮಾದಲ್ಲಿ ನಟಿಸೋಕೂ ಬಿಡ್ತಿರಲಿಲ್ಲ!

ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್‌ ಅವರ ನಟನೆ, ಡೈಲಾಗ್ ಡೆಲಿವರಿಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಜ್ಯೂ.ಎನ್‌ಟಿಆರ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ 'ದೇವರ' ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿತು. ಈಗ ವಾರ್ 2 ಸಿನಿಮಾದಲ್ಲಿ ನಟಿಸ್ತಿದ್ದಾರೆ. ಶೀಘ್ರದಲ್ಲೇ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಶುರುವಾಗಲಿದೆ.

25

ಜೂನಿಯರ್ ಎನ್‌ಟಿಆರ್‌ ನಟನೆ ಬಗ್ಗೆ ರಾಜಮೌಳಿ ಅವರಿಗಿಂತ ಚೆನ್ನಾಗಿ ಯಾರು ಹೇಳೋಕೆ ಆಗಲ್ಲ. ಯಾವ ರೀತಿಯ ಎಕ್ಸ್‌ಪ್ರೆಶನ್ ಬೇಕು ಅಂದ್ರೂ ಎನ್‌ಟಿಆರ್ ಕೊಡ್ತಾರೆ ಅಂತ ರಾಜಮೌಳಿ ಹಲವು ಬಾರಿ ಹೊಗಳಿದ್ದಾರೆ. ಆದರೆ ಜೂನಿಯರ್ ಎನ್‌ಟಿಆರ್‌ಗೆ ಕೆಲವೊಮ್ಮೆ ನಟಿಸೋದೇ ಕಷ್ಟ ಅಂತೆ. ಈ ವಿಷ್ಯವನ್ನ ಅವರೇ ಹೇಳಿಕೊಂಡಿದ್ದಾರೆ.

35

ಕೆಲವು ಜನ ಪಕ್ಕದಲ್ಲಿ ಇದ್ದರೆ ನಟನೆ ಮಾಡೋಕೆ ಆಗಲ್ಲ ಅಂತ ಜೂನಿಯರ್ ಎನ್‌ಟಿಆರ್‌ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಆ ಜನ ಯಾರು ಎಂದರೆ, ಮೂರು ಜನ ಕಾಮಿಡಿ ಕಿಂಗ್ಸ್ - ಬ್ರಹ್ಮಾನಂದಂ, ವೇಣು ಮಾಧವ್ ಮತ್ತು ಅಲಿ. ವೇಣು ಮಾಧವ್ ಇದೀಗ ನಮ್ಮ ನಡುವೆ ಇಲ್ಲ. ಜೂನಿಯರ್ ಎನ್‌ಟಿಆರ್‌ ಮತ್ತು ವೇಣು ಮಾಧವ್ ಜೊತೆಯಾಗಿ 'ಸಿಂಹಾದ್ರಿ', 'ಬೃಂದಾವನಂ' ಸಿನಿಮಾಗಳಲ್ಲಿ ಸೂಪರ್ ಕಾಮಿಡಿ ಸೀನ್ಸ್ ಇವೆ.

45

ಕನ್ನಡ ಚಿತ್ರಂಗದಲ್ಲಿಯೂ ಚಿರಪರಿಚಿತ ಆಗಿರುವ ಬ್ರಹ್ಮಾನಂದಂ ಅವರು ಪಕ್ಕದಲ್ಲಿ ಇದ್ದರೂ ನನಗೆ ನಟಿಸೋಕೆ ಕಷ್ಟ. ಏಕೆಂದರೆನ ಅವರು ಮಾಡುವ ಆಂಗಿಕ ನಟನೆಗೆ ನಗು ತಡೆಯೋಕೆ ಆಗಲ್ಲ. ಹಲವು ಟೇಕ್ಸ್ ವೇಸ್ಟ್ ಆಗಿವೆ ಅಂತ ಜೂನಿಯರ್ ಎನ್‌ಟಿಆರ್‌ ತಮಾಷೆಯಾಗಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

55

ಕೆಲವೊಮ್ಮೆ 15 ಟೇಕ್ಸ್ ಕೂಡ ತೆಗೆದುಕೊಳ್ಳಬೇಕಾಗಿ ಬಂದಿದೆ ಅಂತ ಜೂನಿಯರ್ ಎನ್‌ಟಿಆರ್‌ ಹೇಳಿದ್ದಾರೆ. ಈ ಮಾತನ್ನ ಜೂನಿಯರ್ ಎನ್‌ಟಿಆರ್‌ ವೇಣು ಮಾಧವ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದರು. ವೇಣು ಮಾಧವ್ ಅನಾರೋಗ್ಯದಿಂದ ನಿಧನರಾದರು. ಸೀನಿಯರ್ ಹಾಸ್ಯನಟರಾದ ಬ್ರಹ್ಮಾನಂದಂ ಮತ್ತು ಅಲಿ ಈಗ ಟಾಲಿವುಡ್‌ನಲ್ಲಿ ಹೆಚ್ಚಾಗಿ ಕಾಣಿಸ್ತಿಲ್ಲ.

Read more Photos on
click me!

Recommended Stories