ಬಾಲಿವುಡ್‌ನಲ್ಲಿ ವಾರ್ 2 ಕಥೆ ಹೀಗಿದೆ ಎನ್ನಲಾಗುತ್ತಿದೆ: ಕಬೀರ್ ಸಿಂಗ್ (ಹೃತಿಕ್ ರೋಷನ್) ಅಂತಾರಾಷ್ಟ್ರೀಯ ಕಾರ್ಯಪಡೆಯ ನಾಯಕ. ಭಾರತಕ್ಕೆ ವೀರೇಂದ್ರ ರಘುನಾಥ್ (ಜೂ.ಎನ್‌ಟಿಆರ್) ನಿಂದ ದೊಡ್ಡ ಅಪಾಯವಿದೆ. ವೀರೇಂದ್ರ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲವನ್ನು ಸೃಷ್ಟಿಸುತ್ತಾನೆ. ಮೊದಲಿಗೆ, ವೀರೇಂದ್ರ ಭಾರತಕ್ಕಾಗಿ ಪ್ರಾಣ ಕೊಡಲು ಸಿದ್ಧನಾದ ಏಜೆಂಟ್. ಆದರೆ ಕಬೀರ್ ಸಿಂಗ್ ನೇತೃತ್ವದ ತಂಡದ ಭಾಗವಾಗಿ ವೀರೇಂದ್ರ ಶತ್ರು ದೇಶದ ಭಯೋತ್ಪಾದಕರನ್ನು ಹೊಡೆದುರುಳಿಸಲು ಹೋದಾಗ, ಕಬೀರ್ ವೀರೇಂದ್ರನಿಗೆ ಮೋಸ ಮಾಡಿ ಶತ್ರುಗಳಿಗೆ ಬಿಟ್ಟು ಹೋಗುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡ ವೀರೇಂದ್ರನಿಗೆ ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧನಾಗಿದ್ದ ತನ್ನ ಮೇಲೆ ಮೋಸ ಮಾಡಿದ್ದಾರೆ ಎಂಬ ಕೋಪ ಬರುತ್ತದೆ. ಹೀಗೆ ಕಬೀರ್ ಮೇಲೆ ಸೇಡು ತೀರಿಸಿಕೊಳ್ಳಲು ವೀರೇಂದ್ರ ಭಯೋತ್ಪಾದಕನಾಗುತ್ತಾನೆ. ಇವರಿಬ್ಬರ ನಡುವೆ ಯುದ್ಧ ಆರಂಭವಾಗುತ್ತದೆ.