ಲೆಜೆಂಡ್, ಶ್ರೀಮಂತ, ನಾನ್ನಕು ಪ್ರೇಮತೋ, ಅರವಿಂದ ಸಮೇತ, ರಂಗಸ್ಥಳಂ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳಲ್ಲಿ ನಟಿಸಿದ ಜಗಪತಿ ಬಾಬು ಒಂದು ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರಂತೆ.
ಜಗಪತಿ ಬಾಬು ಒಂದು ಕಾಲದಲ್ಲಿ ಫ್ಯಾಮಿಲಿ ಹೀರೋ ಆಗಿ ಗೆದ್ದಿದ್ರು. ಹಲವು ದಶಕಗಳ ಕಾಲ ಹೀರೋ ಆಗಿ ಮೆರೆದ ಜಗಪತಿ ಬಾಬು, ಲೆಜೆಂಡ್ ಸಿನಿಮಾದಲ್ಲಿ ವಿಲನ್ ಆಗಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ರು. ಅದು ಸಕ್ಸಸ್ ಆಯ್ತು. ಆಮೇಲೆ ವಿಲನ್, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಅವಕಾಶಗಳು ಹರಿದು ಬಂದವು.
25
ಲೆಜೆಂಡ್, ಶ್ರೀಮಂತ, ನಾನ್ನಕು ಪ್ರೇಮತೋ, ಅರವಿಂದ ಸಮೇತ, ರಂಗಸ್ಥಳಂ ಸಿನಿಮಾಗಳಲ್ಲಿ ಜಗಪತಿ ಬಾಬು ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ಜಯಮ್ಮು ನಿಶ್ಚಯಮ್ಮುರಾ ಟಿವಿ ಶೋನಲ್ಲಿ ಹೋಸ್ಟ್ ಆಗಿ ಮೂರನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ.
35
ಈ ಶೋಗೆ ಶ್ರೀಲೀಲಾ, ನಾಗಾರ್ಜುನ ಬಂದಿದ್ರು. ಈಗ ನಾನಿ ಬಂದಿದ್ದಾರೆ. ನಾನಿ ಮತ್ತು ಜಗಪತಿ ಬಾಬು ನಡುವೆ ಆಸಕ್ತಿಕರ ವಿಷಯ ಚರ್ಚೆಗೆ ಬಂತು. ಫ್ಯಾನ್ಸ್ ಶಾಕ್ ಆಗೋ ವಿಷ್ಯವನ್ನ ಜಗಪತಿ ಬಾಬು ರಿವೀಲ್ ಮಾಡಿದ್ರು.
ನಾನಿ ಮತ್ತು ಗೌತಮ್ ತಿನ್ನನೂರಿ ಕಾಂಬಿನೇಷನ್‌ನ ಜೆರ್ಸಿ ಸೂಪರ್ ಹಿಟ್ ಆಗಿತ್ತು. ಬಾಲಿವುಡ್‌ನಲ್ಲೂ ರಿಮೇಕ್ ಆಯ್ತು. ಆ ಸಿನಿಮಾದಲ್ಲಿ ನಟಿಸೋ ಚಾನ್ಸ್‌ನ್ನ ಜಗಪತಿ ಬಾಬು ಬಿಟ್ಟಿದ್ರಂತೆ.
55
ಜೆರ್ಸಿ ಫ್ಲಾಪ್ ಆಗುತ್ತೆ ಅಂತ ಅಂದುಕೊಂಡಿದ್ದೆ. ಸತ್ಯರಾಜ್ ಪಾತ್ರಕ್ಕೆ ಮೊದಲು ನನ್ನನ್ನ ಕೇಳಿದ್ರು. ನನಗೆ ಕಥೆ ಮೇಲೆ ನಂಬಿಕೆ ಇರಲಿಲ್ಲ. ಆದ್ರೆ ಸಿನಿಮಾ ನೋಡಿ ಶಾಕ್ ಆದೆ. ಈಗ ನಾನಿ ಸಿನಿಮಾ ಅಂದ್ರೆ ಬಿಡಲ್ಲ ಅಂತಿದ್ದಾರೆ ಜಗಪತಿ ಬಾಬು.