Jagame Sangeetham OTT: ಪ್ರಕಾಶ್ ರಾಜ್, ಶ್ರೀಕಾಂತ್ ಮತ್ತು ಮಧುಬಾಲಾ ಮುಖ್ಯಭೂಮಿಕೆಯಲ್ಲಿರುವ 'ಜಗಮೇ ಸಂಗೀತಂ' ಸೀರೀಸ್, ಸೆಪ್ಟೆಂಬರ್ 4 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕರ್ನಾಟಕ ಸಂಗೀತದ ಹಿನ್ನೆಲೆಯಲ್ಲಿ ಸಿದ್ಧವಾಗಿರುವ ಈ ಮ್ಯೂಸಿಕಲ್ ಡ್ರಾಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಭಾರತದಲ್ಲಿ ವಿಶೇಷ ಒರಿಜಿನಲ್ ಕಂಟೆಂಟ್ ನೀಡುವ ಪ್ರೈಮ್ ವಿಡಿಯೋ, ಇದೀಗ 'ಜಗಮೇ ಸಂಗೀತಂ' ಎಂಬ ಹೊಸ ತೆಲುಗು ಸೀರೀಸ್‌ನ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ ಹೊಚ್ಚಹೊಸ ಸೀರೀಸ್ ಸೆಪ್ಟೆಂಬರ್ 4 ರಿಂದ ವಿಶ್ವಾದ್ಯಂತ ಸ್ಟ್ರೀಮ್ ಆಗಲಿದೆ ಎಂದು ಪ್ರೈಮ್ ವಿಡಿಯೋ ಘೋಷಿಸಿದೆ. ಹಿಂದಿಯ ಜನಪ್ರಿಯ 'ಬಂದಿಶ್ ಬ್ಯಾಂಡಿಟ್ಸ್' ಸೀರೀಸ್‌ನಿಂದ ಸ್ಫೂರ್ತಿ ಪಡೆದು 'ಜಗಮೇ ಸಂಗೀತಂ' ಸೀರೀಸ್ ಅನ್ನು ಪಲ್ನಾಟಿ ಸೂರ್ಯ ಪ್ರತಾಪ್ ನಿರ್ದೇಶಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿದೆಲಾ ಇದನ್ನು ನಿರ್ಮಿಸಿದ್ದಾರೆ. ವಂಗಾಲ ಸೂರ್ಯ ಮನೋಜ್, ಶ್ರಾವಣಿ ಸಮುದ್ರಾಲ ಮತ್ತು ಎ.ಆರ್. ಪ್ರಭಾವ್ ಈ ಸೀರೀಸ್‌ಗೆ ಕಥೆ ಬರೆದಿದ್ದಾರೆ.
24
ವಿಶಾಲ್ ಸಂಗೀತ 'ಜಗಮೇ ಸಂಗೀತಂ'ಗೆ ಪ್ಲಸ್ ಪಾಯಿಂಟ್
ವಿಶಾಲ್ ಚಂದ್ರಶೇಖರ್ ಅವರ ಸಂಗೀತ ಈ ಸೀರೀಸ್‌ನ ಬೆನ್ನೆಲುಬು. ಕರ್ನಾಟಕ ಸಂಗೀತ ಸಂಪ್ರದಾಯವನ್ನು ಆಧುನಿಕ ಶೈಲಿಯೊಂದಿಗೆ ಬೆರೆಸಿ, ಅವರು ಅದ್ಭುತ ರಾಗಸಂಯೋಜನೆ ಮಾಡಿದ್ದಾರೆ. ಪ್ರಕಾಶ್ ರಾಜ್, ಶ್ರೀಕಾಂತ್, ಮಧುಬಾಲಾ, ಅಕ್ಷಯ್ ಲಗುಸಾನಿ ಮತ್ತು ಸುಸ್ಮಿತಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸುಮನ್, ಸಿಜ್ಜು ಮೆನನ್, ಶಫಿ, ರಘು ಬಾಬು ಯೆರ್ರಾ, ರಾಕೆಟ್ ರಾಘವ, ನಾಗಿ ಜಬರ್ದಸ್ತ್, ಮಿರ್ಚಿ ಕಿರಣ್, ಪ್ರಕಾಶ್ ರೆಡ್ಡಿ, ರೂಪಾ ಲಕ್ಷ್ಮಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. 'ಜಗಮೇ ಸಂಗೀತಂ' ಸೀರೀಸ್ ಪ್ರೈಮ್ ವಿಡಿಯೋದಲ್ಲಿ ತೆಲುಗಿನಲ್ಲಿ ಇಂಗ್ಲಿಷ್ ಸಬ್‌ಟೈಟಲ್ಸ್‌ನೊಂದಿಗೆ ಹಾಗೂ ತಮಿಳು ಡಬ್ಬಿಂಗ್‌ನೊಂದಿಗೆ ವಿಶ್ವದಾದ್ಯಂತ 240 ದೇಶಗಳಲ್ಲಿ ಲಭ್ಯವಾಗಲಿದೆ.
34
ಜಗಮೇ ಸಂಗೀತಂ: ಕರ್ನಾಟಕಕ್ಕೂ ಇದೆ ನಂಟು!
ಈ ಕಥೆ ಕರ್ನಾಟಕ ಸಂಗೀತದ ಹಿನ್ನೆಲೆಯಲ್ಲಿ ಸಾಗುತ್ತದೆ. ತನ್ನ ತಾತ ಶಾಸ್ತ್ರಿ ಅವರ ಸಂಗೀತ ಪರಂಪರೆಯ ಉತ್ತರಾಧಿಕಾರಿಯಾದ 'ಬಾಲು' ಎಂಬ ಯುವಕನ ಸುತ್ತ ಕಥೆ ಹೆಣೆಯಲಾಗಿದೆ. ಸಂಪ್ರದಾಯದ ಹೊರೆ, ಹಳಸಿದ ಕೌಟುಂಬಿಕ ಸಂಬಂಧಗಳು ಮತ್ತು ಮುಚ್ಚಿಟ್ಟ ರಹಸ್ಯಗಳಿಂದ ಅವನು ಬಳಲುತ್ತಿರುತ್ತಾನೆ. ಹಳೆಯ ವೈಷಮ್ಯಗಳು ಮತ್ತೆ ಶುರುವಾಗಿ, ತಲೆಮಾರುಗಳ ಪರಂಪರೆಯನ್ನು ನಾಶಮಾಡುವ ಅಪಾಯ ಎದುರಾದಾಗ, ಬಾಲು ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಮತ್ತು ತನ್ನದೇ ಆದ ಸಂಗೀತದ ದನಿಯನ್ನು ಕಂಡುಕೊಳ್ಳಲು ಹೋರಾಡುತ್ತಾನೆ. ಈ ಕಥೆಗೆ ಸಂಗೀತವೇ ಜೀವ. ಇಲ್ಲಿ ಹಾಡು ಆ ಕುಟುಂಬದ ಎರಡನೇ ಭಾಷೆಯಾಗಿದೆ. ಕಲೆಯ ಮೇಲಿನ ಅವರ ಭಕ್ತಿ, ಅಸಮಾಧಾನ, ಹಂಬಲ ಮತ್ತು ಭಾವನೆಗಳನ್ನು ಸಂಗೀತದ ಮೂಲಕವೇ ವ್ಯಕ್ತಪಡಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿದ ಪ್ರೈಮ್ ವಿಡಿಯೋ ಇಂಡಿಯಾದ SVOD ಒರಿಜಿನಲ್ಸ್ ನಿರ್ದೇಶಕರು, 'ಕುಟುಂಬ, ಪರಂಪರೆ ಮತ್ತು ಆತ್ಮಶೋಧನೆಯಂತಹ ವಿಷಯಗಳನ್ನು ಈ ಕಥೆ ಹೇಳುತ್ತದೆ. 'ಜಗಮೇ ಸಂಗೀತಂ' ಸಂಗೀತದ ಭಾವನಾತ್ಮಕ ಶಕ್ತಿಯನ್ನು ಸಾರುವ ಒಂದು ಅದ್ಭುತ ಕಥೆ. ಸಂಪ್ರದಾಯ ಮತ್ತು ಮಹತ್ವಾಕಾಂಕ್ಷೆಯ ನಡುವಿನ ಪ್ರಶ್ನೆಗಳನ್ನು ಇದು ಎತ್ತುತ್ತದೆ. ಪಲ್ನಾಟಿ ಸೂರ್ಯ ಪ್ರತಾಪ್ ಅವರ ಸೃಜನಶೀಲ ದೃಷ್ಟಿ, ಸುಶ್ಮಿತಾ ಕೊನಿದೆಲಾ ಅವರ ನಿರ್ಮಾಣ ಮತ್ತು ವಿಶಾಲ್ ಚಂದ್ರಶೇಖರ್ ಅವರ ಸಂಗೀತದಿಂದಾಗಿ ಈ ಸೀರೀಸ್ ಎಲ್ಲರಿಗೂ ಇಷ್ಟವಾಗಲಿದೆ' ಎಂದರು.
ನಿರ್ಮಾಪಕಿ ಸುಶ್ಮಿತಾ ಕೊನಿದೆಲಾ ಮಾತನಾಡಿ, 'ಸಂಗೀತವೇ ಒಂದು ಕುಟುಂಬದ ಪ್ರೀತಿ, ಸಂಘರ್ಷ, ಹಂಬಲ, ಹೆಮ್ಮೆ ಮತ್ತು ಭರವಸೆಯನ್ನು ವ್ಯಕ್ತಪಡಿಸುವ ಭಾಷೆಯಾದರೆ ಹೇಗಿರುತ್ತೆ? ಆ ಕಥೆಯನ್ನೇ ನಾವು ಹೇಳಲು ಹೊರಟಿದ್ದೇವೆ. ಈ ಸೀರೀಸ್ ಕರ್ನಾಟಕ ಸಂಗೀತದ ಹಿನ್ನೆಲೆಯಲ್ಲಿ ಸಾಗಿದರೂ, ಪರಂಪರೆ, ಸಂಬಂಧ ಮತ್ತು ನಮ್ಮದೇ ದನಿಯನ್ನು ಕಂಡುಕೊಳ್ಳುವಂತಹ ವಿಷಯಗಳು ಎಲ್ಲರಿಗೂ ಹತ್ತಿರವಾಗುತ್ತವೆ. ಇಂತಹ ಅದ್ಭುತ ನಟರು ಮತ್ತು ತಾಂತ್ರಿಕ ತಂಡವನ್ನು ಒಟ್ಟುಗೂಡಿಸಿದ್ದು ನಮಗೆ ಖುಷಿ ಕೊಟ್ಟಿದೆ. ಪ್ರೈಮ್ ವಿಡಿಯೋದಲ್ಲಿ 'ಜಗಮೇ ಸಂಗೀತಂ' ಜಗತ್ತನ್ನು ನೀವೂ ಅನುಭವಿಸಿ ಎಂದು ವೀಕ್ಷಕರನ್ನು ಆಹ್ವಾನಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.