ಭಾರತದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಎಲ್ಲರನ್ನೂ ಆತಂಕಕ್ಕೆ ದೂಡಿದೆ.
ಇದರ ನಡುವೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ಅವರ ಪೋಷಕರು ನಟಿಗೆ ಭಾರತ ಬಿಟ್ಟು ಬಹ್ರೇನ್‌ಗೆ ಹೋಗಲು ಒತ್ತಾಯಿಸುತ್ತಿದ್ದಾರೆ.
ಶ್ರೀಲಂಕಾ ಮೂಲದ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಅವರ ಪೋಷಕರು ಬಹ್ರೇನ್‌ನಲ್ಲಿದ್ದಾರೆ.
ಭಾರತದಲ್ಲಿ ನಟಿಯ ಸುರಕ್ಷತೆಯ ಬಗ್ಗೆ ಅವರ ಕುಟುಂಬವು ಚಿಂತಿತರಾಗಿದ್ದಾರೆ ಮತ್ತು ಅವರು ದೇಶದಿಂದ ಹೊರ ಹೋಗಲು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಜಾಕ್ವೆಲಿನ್.
'ಶ್ರೀಲಂಕಾದ ನನ್ನ ಸ್ನೇಹಿತರು ಮತ್ತು ಬಹ್ರೇನ್‌ನಲ್ಲಿರುವ ಹೆತ್ತವರು ಭಾರತದ ಪರಿಸ್ಥಿತಿಯ ನ್ಯೂಸ್ ನೋಡಿ ಭಯಗೊಂಡಿದ್ದಾರೆ. ನಾನು ಅವರೊಂದಿಗೆ ಬಹ್ರೇನ್‌ನಲ್ಲಿ ವಾಸಿಸಬೇಕೆಂದು ನನ್ನ ಪೋಷಕರು ತೀವ್ರವಾಗಿ ಬಯಸುತ್ತಾರೆ. ಶ್ರೀಲಂಕಾದ ನನ್ನ ಚಿಕ್ಕಪ್ಪ ಮತ್ತು ಕಸಿನ್ಸ್ ಸಹ ಅವರೊಂದಿಗೆ ಬಂದು ಇರಲು ನನ್ನನ್ನು ಕೇಳುತ್ತಿದ್ದಾರೆ' ಎಂದು ಜಾಕ್ವೆಲಿನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
'ಆದರೆ, ನಾನು ಇಲ್ಲಿ ಉಳಿಯಲು ಮತ್ತು ನಾನು ಮಾಡುತ್ತಿರುವ ಕೆಲಸವನ್ನು ಮುಂದುವರೆಸುವ ಉದ್ದೇಶ ಹೊಂದಿದ್ದೇನೆ' ಎಂದು ಅವರು ಪ್ರಮುಖ ದಿನಪತ್ರಿಕೆಯೊಂದಕ್ಕೆ ತಿಳಿಸಿದರು.
ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ನಟಿ ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿದ್ದರು.
ಆ ಸಮಯದಲ್ಲಿ, ಅವರು ಸಲ್ಮಾನ್ ಜೊತೆ ಮ್ಯೂಸಿಕ್ ವಿಡಿಯೋಕ್ಕಾಗಿ ಶೂಟ್ ಮಾಡಿದರು ಮತ್ತು ಹತ್ತಿರದ ಹಳ್ಳಿಯವರಿಗೆ ಅಗತ್ಯ ವಸ್ತುಗಳನ್ನು ವಿತರಿಸಲು ಸಲ್ಮಾನ್ ಮತ್ತು ತಂಡಕ್ಕೆ ಸಹಾಯ ಮಾಡಿದರು.