ತೆಲುಗು ಸ್ಟಾರ್ ನಟ Mahesh Babu ಐಷಾರಾಮಿ ಬಂಗಲೆಯ ಒಳನೋಟ

Published : Feb 12, 2026, 04:33 PM IST

Mahesh Babu: ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಹೈದರಾಬಾದಿನ ಬುಬ್ಲಿ ಹಿಲ್ಸ್ ನಲ್ಲಿ ನೆಲೆಸಿದ್ದಾರೆ. ಇವರು ಐಷಾರಾಮಿ ಬಂಗಲೆಯ ಒಂದಿಷ್ಟು ಒಳನೋಟದ ಫೋಟೊಗಳು ವೈರಲ್ ಆಗಿದ್ದು, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮನೆಯ ಒಳಗೆ ಏನೇನಿದೆ ನೋಡಿ. 

PREV
18
ಮಹೇಶ್ ಬಾಬು

ಮಹೇಶ್ ಬಾಬು ದಕ್ಷಿಣ ಚಿತ್ರರಂಗದ ಅತ್ಯಂತ ದುಬಾರಿ ಮತ್ತು ಯಶಸ್ವಿ ತಾರೆಗಳಲ್ಲಿ ಒಬ್ಬರು. ಈ ನಟನಿಗೆ ದೇಶ ಮತ್ತು ವಿದೇಶಗಳಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಇಂದು, ನಾವು ನಿಮ್ಮನ್ನು ಅವರ ಐಷಾರಾಮಿ ಮನೆಯ ಟೂರ್ ಮಾಡಿಸ್ತೀವಿ. ಮಹೇಶ್ ಬಾಬು ಅವರ ಐಷಾರಾಮಿ ಮನೆ ಹೇಗಿದೆ ನೋಡಿ.

28
ಐಷಾರಾಮಿ ಬಂಗಲೆ

ಮಹೇಶ್ ಬಾಬು ಅವರ ಮನೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿದೆ. ಇದು ತುಂಬಾ ಲಕ್ಸುರಿ ಬಂಗಲೆಯಾಗಿದ್ದು ಮತ್ತು ಐಷಾರಾಮಿ ಸೌಲಭ್ಯಗಳಿಂದ ತುಂಬಿದೆ. ಸ್ಟಾರ್ ನಟ ಮಹೇಶ್ ಬಾಬು ಮನೆಯಲ್ಲಿ ಏನೆಲ್ಲಾ ಇದೆ ಅನ್ನೋದನ್ನು ನೋಡೋಣ.

38
ಪತ್ನಿ ಮಕ್ಕಳೊಂದಿಗೆ ವಾಸ

ಮಹೇಶ್ ಬಾಬು ಈ ಮನೆಯಲ್ಲಿ ತಮ್ಮ ಪತ್ನಿ ಮತ್ತು ನಟಿ ನಮ್ರತಾ ಶಿರೋಡ್ಕರ್ ಮತ್ತು ಇಬ್ಬರು ಮಕ್ಕಳಾದ ಸಿತಾರ ಮತ್ತು ಗೌತಮ್ ಜೊತೆ ವಾಸಿಸುತ್ತಿದ್ದಾರೆ. ಮನೆ ಲಕ್ಸುರಿ ಜೊತೆ ಮಿನಿಮಲ್ ಡೆಕೊರೇಶನ್ ಹೊಂದಿದ್ದು, ಇದು ಮನೆಗೆ ಆಸ್ತೆಟಿಕ್ ಲುಕ್ ನೀಡುತ್ತದೆ.

48
ಇನ್ ಡೋರ್ ಸ್ವಿಮ್ಮಿಂಗ್ ಪೂಲ್

ಮಹೇಶ್ ಅವರ ಈ ಐಷಾರಾಮಿ ಮನೆಯಲ್ಲಿ, ಒಳಾಂಗಣ ಈಜುಕೊಳದಿಂದ ಹಿಡಿದು ಓದುವ ಕೋಣೆಯವರೆಗೆ ಎಲ್ಲವನ್ನೂ ನೀವು ನೋಡಬಹುದು. ಮನೆಯ ಬೆಡ್ ಆಫ್ ವೈಟ್ ಬಣ್ಣದಲ್ಲಿವೆ. ಮೆಟ್ಟಿಲುಗಳನ್ನು ಮರಗಳಿಂದ ಮಾಡಲಾಗಿತ್ತು, ಮನೆಗೆ ಆಸ್ತೆಟಿಕ್ ಲುಕ್ ನೀಡುತ್ತಿದೆ.

58
ದೊಡ್ಡದಾದ ಲಿವಿಂಗ್ ರೂಮ್

ಮಹೇಶ್ ಮತ್ತು ನಮ್ರತಾ ಅವರ ಈ ಅರಮನೆಯಂತಹ ಈ ಮನೆಯಲ್ಲಿ ಒಂದು ದೊಡ್ಡ ಲಿವಿಂಗ್ ರೂಮ್ ಇದೆ. ಅದರಲ್ಲಿ ಕಂದು ಬಣ್ಣದ ಸೋಫಾ ಇದೆ. ಅದರ ಹಿಂದಿನ ಗೋಡೆಗೆ ಹಸಿರು ಬಣ್ಣ ಬಳಿಯಲಾಗಿದೆ. ಮನೆ ತುಂಬಾ ಸುಂದರವಾದ ಪೈಂಟಿಂಗ್ ಗಳನ್ನು ಇಡಲಾಗಿದೆ.

68
ಹೋಮ್ ಥಿಯೇಟರ್

ಇದಲ್ಲದೆ, ಮನೆಯಲ್ಲಿ ಹೋಮ್ ಥಿಯೇಟರ್ ಕೂಡ ಇದೆ. ಕೆಳಗೆ ಕಂದು ಬಣ್ಣದ ಕ್ಯಾಬಿನೆಟ್‌ಗಳಿವೆ. ಮನೆಯ ಡೈನಿಂಗ್ ಏರಿಯಾ ಬೂದು ಬಣ್ಣದ ಸೋಫಾ ಸೆಟ್ ಜೊತೆಗೆ ದೊಡ್ಡ ಟೇಬಲ್ ಇದೆ. ಇಲ್ಲಿನ ಗೋಡೆಯನ್ನು ಕೆಂಪು ಇಟ್ಟಿಗೆಗಳಿಂದ ಅಲಂಕರಿಸಲಾಗಿದೆ.

78
ಅದ್ದೂರಿ ದೇವರ ಕೋಣೆ

ಇವೆಲ್ಲದರ ಹೊರತಾಗಿ, ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಇಲ್ಲಿನ ದೇವಾಲಯ. ಮಹೇಶ್ ಮತ್ತು ನಮ್ರತಾ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೇವರ ಕೋಣೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಹೆಚ್ಚಾಗಿ ಪೂಜೆಯನ್ನು ಮಾಡುತ್ತಿರುತ್ತಾರೆ ಈ ಜೋಡಿ.

88
ಬಂಗಲೆಯ ಬೆಲೆ ಎಷ್ಟು ಗೊತ್ತಾ?

ವರದಿಗಳ ಪ್ರಕಾರ, ಮಹೇಶ್ ಬಾಬು ಅವರ ಹೈದರಾಬಾದ್ ಮನೆಯ ಬೆಲೆ 28 ಕೋಟಿ ರೂ ಎನ್ನಲಾಗಿದೆ. ಈ ಮನೆಯಲ್ಲಿ ಪರ್ಸನಲ್ ಜಿಮ್, ಲೈಬ್ರೆರಿ, ಪೂಲ್ ಎಲ್ಲವೂ ಇದೆ. ಅಂದ ಹಾಗೆ ಮಹೇಶ್ ಬಾಬು ಚೆನ್ನೈನಲ್ಲೂ ಮನೆಯನ್ನು ಹೊಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories