ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ನಟಿ ಬಿಳಿ ಕ್ರೋಚೆಟ್ ಬಿಕಿನಿಯನ್ನು ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಲಿಯಾನಾ ಆಗಾಗ್ಗೆ ಫ್ಯಾನ್ಸ್‌ಗೆ ಹೊಸ ಪೋಸ್ಟ್‌ಗಳ ಮೂಲಕ ತಮ್ಮ ಲೈಫ್‌ನ ಅಪ್‌ಡೇಟ್ಸ್ ನೀಡುತ್ತಿರುತ್ತಾರೆ.
ಇಲಿಯಾನಾ ಬಳೆಗಳು ಮತ್ತು ಕಿವಿಯೋಲೆಗಳ ಜೊತೆ ಪೇರ್ ಮಾಡುವ ಮೂಲಕ ತಮ್ಮ ಬಿಕಿನಿ ಲುಕ್ ಪೂರ್ಣಗೊಳಿಸಿದರು. ಇದು ಅವರ ಮಾಲ್ಡೀವ್ಸ್ ವೇಕೆಷನ್‌ನ ಥ್ರೋಬ್ಯಾಕ್ ಫೋಟೋವಾಗಿದೆ ಮತ್ತು ಇದನ್ನು 14 ಮಿಲಿಯನ್ ಫಾಲೋವರ್ಸ್ ಪಡೆದ ಖುಷಿಯಲ್ಲಿ ಹಂಚಿಕೊಂಡಿದ್ದರು.
ಇಲಿಯಾನಾ ಡಿ'ಕ್ರೂಜ್ ಇತ್ತೀಚೆಗಷ್ಟೇ ದಿ ಬಿಗ್ ಬುಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಇಲಿಯಾನಾ ಡಿ'ಕ್ರೂಜ್ ಅವರು ಅಭಿಷೇಕ್ ಬಚ್ಚನ್ ಜೊತೆ ನಟಿಸಿದ್ದರು.
ನಟಿ ಶೀಘ್ರದಲ್ಲೇ ರಣದೀಪ್ ಹೂಡಾ ಅವರ ಅನ್‌ಫೇರ್ ಅಂಡ್ ಲವ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಜಂಜುವಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.
ಇದಲ್ಲದೆ ವಿದ್ಯಾ ಬಾಲನ್, ಪ್ರತೀಕ್ ಗಾಂಧಿ ಮತ್ತು ಸೆಂಧಿಲ್ ರಾಮಮೂರ್ತಿ ಅವರ ಜೊತೆ ನಟಿ ಇಲಿಯಾನಾ ಕಾಮಿಡಿ ಡ್ರಾಮಾದಲ್ಲಿ ಸಹ ಕೆಲಸ ಮಾಡುತ್ತಿದ್ದಾರೆ.
ಇಲಿಯಾನಾ ಡಿಕ್ರೂಜ್ ಕೆಂಪು ಬಿಕಿನಿಯಲ್ಲಿ ತನ್ನ ಪರ್ಫೇಕ್ಟ್ ಫಿಗರ್ ಹಾಗೂ ಕರ್ವ್‌ಗಳನ್ನು ಪ್ರದರ್ಶಿಸಿದ್ದಾರೆ. ಆಕೆಯ ಫ್ಯಾನ್ಸ್ ಮತ್ತು ಫಾಲೋವರ್ಸ್ ಈ ಫೋಟೋಕ್ಕೆ ಖಂಡಿತವಾಗಿಯೂ ಫುಲ್ ಫಿದಾ ಆಗಿದ್ದಾರೆ.
ಬಿಳಿ ಬಣ್ಣದ ಟು ಪೀಸ್ ನಲ್ಲಿ ಇಲಿಯಾನಾ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಮಾಲ್ಡೀವ್ಸ್ ಹಾಲಿಡೇ ಸಮಯದಲ್ಲಿ ತೆಗೆದ ಫೋಟೋವಿದು.