ಇದೇ ನೋಡಿ ಇಳಯರಾಜಾ ಮ್ಯಾಜಿಕ್: ಸಿನಿಮಾ ಫ್ಲಾಪ್.. ಆದ್ರೆ ಒಂದೇ ಹಾಡಿನಿಂದ 1 ಕೋಟಿ ಲಾಭ ಮಾಡಿದ ನಿರ್ಮಾಪಕ

Published : Oct 29, 2025, 09:51 AM IST

ಇಸೈಜ್ಞಾನಿ ಇಳಯರಾಜಾ ಸಂಗೀತದಲ್ಲಿ ಅಸಂಖ್ಯಾತ ಹಿಟ್ ಹಾಡುಗಳು ಬಂದಿವೆ. ಅದರಲ್ಲಿ ಅವತಾರಂ ಚಿತ್ರದ ಒಂದೇ ಒಂದು ಹಾಡು ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ಲಾಭ ತಂದುಕೊಟ್ಟಿದೆ. ಅದರ ಬಗ್ಗೆ ನೋಡೋಣ.

PREV
14
ಇಳಯರಾಜಾ ಸಂಗೀತಕ್ಕೆ ಬೇಡಿಕೆ

'ಅನ್ನಕ್ಕಿಳಿ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಇಳಯರಾಜಾ, 50 ವರ್ಷಗಳ ನಂತರವೂ ತಮ್ಮ ಸಂಗೀತ ಸಾಮ್ರಾಜ್ಯವನ್ನು ಮುಂದುವರಿಸುತ್ತಿದ್ದಾರೆ. ಅವರ ಸಂಗೀತವನ್ನು ಇಷ್ಟಪಡದವರೇ ಇಲ್ಲ. ಅಷ್ಟರಮಟ್ಟಿಗೆ ಆತ್ಮೀಯ ಹಾಡುಗಳ ಮೂಲಕ ಜನರ ಮನಸ್ಸಿನಲ್ಲಿ ಅಳಿಸಲಾಗದ ಸ್ಥಾನ ಪಡೆದಿದ್ದಾರೆ. 1980ರ ದಶಕದಲ್ಲಿ ಇಳಯರಾಜಾ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕಾಯುತ್ತಿದ್ದರು. ಯಾಕಂದ್ರೆ ಇಳಯರಾಜಾ ಸಂಗೀತ ನೀಡಿದರೆ, ವಿತರಕರು ಕಣ್ಮುಚ್ಚಿ ಸಿನಿಮಾ ಖರೀದಿಸುತ್ತಿದ್ದರಂತೆ. ಅಷ್ಟರಮಟ್ಟಿಗೆ ಇಳಯರಾಜಾ ಸಂಗೀತಕ್ಕೆ ಬೇಡಿಕೆ ಇತ್ತು.

24
ಟ್ಯೂನ್ ನಾಸರ್‌ಗೆ ಇಷ್ಟವಾಗಲಿಲ್ಲ

ಇಳಯರಾಜಾ ಹಾಡುಗಳಿಂದಲೇ ಫೇಮಸ್ ಆದ ಚಿತ್ರಗಳು ಸಾಕಷ್ಟಿವೆ. ಅದರಲ್ಲಿ ನಾಸರ್ ನಾಯಕರಾಗಿ ನಟಿಸಿದ 'ಅವತಾರಂ' ಚಿತ್ರವೂ ಒಂದು. 1995ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ರೇವತಿ ನಾಯಕಿಯಾಗಿದ್ದರು. ಈ ಚಿತ್ರದ ಮೂಲಕ ನಾಸರ್ ನಿರ್ದೇಶಕರಾಗಿಯೂ ಪಾದಾರ್ಪಣೆ ಮಾಡಿದ್ದರು. ಇದು ಕಲಾತ್ಮಕ ಚಿತ್ರವಾದ್ದರಿಂದ, ಇಳಯರಾಜಾ ಸಂಗೀತವೇ ಬೇಕೆಂದು ಹಠ ಹಿಡಿದು ಅವರನ್ನು ಬುಕ್ ಮಾಡಿದ್ದರಂತೆ. ಆಗ ಹಾಡಿನ ಕಂಪೋಸಿಂಗ್‌ಗೆಂದು ಒಂದು ದಿನ ನಾಸರ್‌ರನ್ನು ಕರೆದಿದ್ದಾರೆ. ಆಗ ಇಳಯರಾಜಾ ಹಾಕಿದ ಟ್ಯೂನ್ ನಾಸರ್‌ಗೆ ಇಷ್ಟವಾಗಲಿಲ್ಲವಂತೆ.

34
ಚಿತ್ರದ ಮೇಲೆ ನಿರೀಕ್ಷೆ

ಇದನ್ನು ಹೇಗೆ ಹೇಳುವುದೆಂದು ತಿಳಿಯದೆ ಗೊಂದಲಕ್ಕೊಳಗಾದ ನಾಸರ್, ಸ್ವಲ್ಪ ಸಮಯದ ನಂತರ ಬರುವುದಾಗಿ ಹೇಳಿ ಹೋದರಂತೆ. ಅವರು ಹಿಂತಿರುಗಿ ಬರುವಷ್ಟರಲ್ಲಿ ಇಳಯರಾಜಾ ಹಾಡಿನ ರೆಕಾರ್ಡಿಂಗ್ ಮುಗಿಸಿದ್ದರಂತೆ. ಆ ಹಾಡನ್ನು ಕೇಳಿದ ನಾಸರ್‌ಗೆ ಮೈ ರೋಮಾಂಚನವಾಯಿತಂತೆ. ಅವರು ಬೇಡವೆಂದಿದ್ದ ಟ್ಯೂನ್‌ನಲ್ಲೇ 'ತೆಂಡ್ರಲ್ ವಂದು ತೀಂಡುಂ ಪೋದು' ಎಂಬ ಸೂಪರ್ ಹಿಟ್ ಹಾಡು ಸಿದ್ಧವಾಗಿತ್ತು. ಈ ಹಾಡೇ 'ಅವತಾರಂ' ಚಿತ್ರಕ್ಕೆ ಜೀವ ತುಂಬಿತ್ತು. ಈ ಹಾಡಿನಿಂದಲೇ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿತ್ತಂತೆ.

44
1 ಕೋಟಿಗೂ ಹೆಚ್ಚು ಲಾಭ

ಹಾಡು ಹಿಟ್ ಆದರೂ ಸಿನಿಮಾ ಬಿಡುಗಡೆಯಾಗಿ ಹೀನಾಯ ಸೋಲು ಕಂಡಿತು. ನಿರ್ಮಾಪಕರಿಗೆ 46 ಲಕ್ಷ ನಷ್ಟವಾಯಿತಂತೆ. ಆ ಕಾಲದಲ್ಲಿ ಇದು ದೊಡ್ಡ ಮೊತ್ತ. ಆದರೂ ನಿರ್ಮಾಪಕರು ಸಂತೋಷವಾಗಿದ್ದರು. ಅದಕ್ಕೆ ಕಾರಣ ಇಳಯರಾಜಾ ಹಾಡು. 'ತೆಂಡ್ರಲ್ ವಂದು ತೀಂಡುಂ ಪೋದು' ಹಾಡಿಗಾಗಿ ಆಡಿಯೋ ಕ್ಯಾಸೆಟ್‌ಗಳನ್ನು ಲಕ್ಷಾಂತರ ಜನ ಖರೀದಿಸಿದ್ದರು. 20 ಲಕ್ಷಕ್ಕೂ ಹೆಚ್ಚು ಕ್ಯಾಸೆಟ್‌ಗಳು ಮಾರಾಟವಾಗಿದ್ದವು. ಇದರಿಂದ ನಿರ್ಮಾಪಕರಿಗೆ 1.6 ಕೋಟಿ ಪಾಲು ಸಿಕ್ಕಿತ್ತು. ಸಿನಿಮಾದ ನಷ್ಟವನ್ನು ಕಳೆದರೂ, ಅವರಿಗೆ 1 ಕೋಟಿಗೂ ಹೆಚ್ಚು ಲಾಭ ಬಂದಿತ್ತಂತೆ.

Read more Photos on
click me!

Recommended Stories