'ಅಮರ ಪ್ರೇಮಿಗಳು', ಐಶೂ, ಸಲ್ಮಾನ್ ಬಗ್ಗೆ ಹಿರಿಯ ನಟ ಹೇಳಿದ್ದಿಷ್ಟು..!

First Published | Apr 1, 2020, 4:20 PM IST

ಐಶ್ವರ್ಯಾ ರೈ, ಹಾಗೂ ಸಲ್ಮಾನ್ ಖಾನ್ ಎಂಬ ಚಿತ್ರಣ ನಮ್ಮ ಮನಸಲ್ಲಿ ಮೂಡಿದ ಕೂಡಲೇ ನೆನಪಾಗುವುದು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಹಮ್‌ ದಿಲ್ ದೇ ಚುಕೇ ಸನಮ್‌' ಸಿನಿಮಾ. ಆ ಸಿನಿಮಾದಲ್ಲಿ ಈ ಟಾಪ್ ಸೆಲೆಬ್ರಿಟಿಗಳ ರೊಮ್ಯಾನ್ಸ್, ಲವ್‌ ಕೆಮೆಸ್ಟ್ರಿ ಎಂದೂ ಮರೆಯಲಾಗದು. ಕ್ಲೋಸ್ ಆಗಿದ್ದ ಕಪಲ್ ನಡುವೆ ಬಿರುಕು ಬಂದಿದ್ದೇಕೆ..? ಹೇಗೆ..? ಹಿರಿಯ ನಟ ಈ ಜೋಡಿ ಎಲ್ಲದರೂ ತೀರಿಕೊಂಡರೆ ಅಮರ ಪ್ರೇಮಿಗಳಾಗಿ ಉಳಿಯುವರು ಅಂತ ಹೇಳಿದ್ದೇಕೆ..? ಇಲ್ಲಿ ನೋಡಿ ಫೋಟೋಸ್

1990ರ ಕೊನೆ ಮತ್ತು 2000ದ ಆರಂಭದಲ್ಲಿ ಸಲ್ಮಾನ್‌ ಖಾನ್ ಹಾಗು ಐಶ್ವರ್ಯಾ ರೈ ಲವ್‌ಸ್ಟೋರಿ ಬಗ್ಗೆ ಬಾಲಿವುಡ್‌ನಲ್ಲಿ ಹೆಚ್ಚು ಗಾಸಿಪ್‌ಗಳಿದ್ದವು.
ಇವರಿಬ್ಬರದ್ದೂ ಬರೀ ಹುಶ್‌ ಹುಶ್ ಗಾಸಿಪ್ ಸಂಬಂಧವಾಗಿರಲಿಲ್ಲ.
Tap to resize

ಇಬ್ಬರೂ ಜೋಡಿಯಾಗಿ ನಟಿಸಿದ ಸಿನಿಮಾಗಳ ರೊಮ್ಯಾನ್ಸ್, ಇಬ್ಬರ ನಡುವಿನ ತೆರೆಯ ಮೇಲಿನ ಸ್ಪೆಷಲ್ ಕೆಮೆಸ್ಟ್ರಿಯನ್ನು ಯಾರೂ ಮರೆಯಲಾಗದು.
ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಪ್ರೇಮಕ್ಕೆ ಸಲ್ಮಾನ್ ತಂದೆ ಸಲೀಂ ಖಾನ್ ಅವರೂ ಒಪ್ಪಿಗೆ ಕೊಟ್ಟಿದ್ರು.
ಹಳೆಯದೊಂದು ಇಂಟರ್‌ವ್ಯೂನಲ್ಲಿ ಐಶೂ ಹಾಗೂ ಸಲ್ಮಾನ್ ಪ್ರೀತಿ ಬಗ್ಗೆ ಬರೆದಿದ್ದ ಸಲೀಂ ಖಾನ್ ಅವರ ನಡುವೆ ಬ್ರೇಕ್ ಅಪ್ ಆಗೋ ಸಾಧ್ಯತೆಗಳ ಬಗ್ಗೆಯೂ ಬರೆದಿದ್ದರು.
ಸಂಗೀತಾ ಜೊತೆ ಸಲ್ಮಾನ್‌ ಖಾನ್ 7 ವರ್ಷ ರಿಲೇಷನ್‌ಶಿಪ್‌ನಲ್ಲಿದ್ದರೂ ಅದು ಮುರಿದುಬಿತ್ತು. ಸೋಮಿಯ ಜೊತೆಗೂ ರಿಲೇಷನ್‌ಶಿಪ್ ಹೆಚ್ಚು ಸಮಯ ಉಳಿಯಲಿಲ್ಲ ಎಂದು ಸಲ್ಮಾನ್ ತಂದೆ ಹೇಳಿದ್ದರು.
ಐಶ್ವರ್ಯ ಹಾಗೂ ಸಲ್ಮಾನ್ ಪ್ರೀತಿಯ ಸಂಬಂಧ ಗಟ್ಟಿಯಾಗಿರದಿದ್ದರೆ ಅದೂ ಹೆಚ್ಚು ಸಮಯ ಉಳಿಯಲಾರದು ಎಂದು ಸಲ್ಮಾನ್ ತಂದೆ ಹೇಳಿದ್ದರು.
Salman aishu
ಈ ಜೋಡಿಯ ಆನ್‌ಸ್ಟ್ರೀನ್ ಕೆಮೆಸ್ಟ್ರಿ ಸಿನಿಪ್ರಿಯರಿಗೆ ಫೇವರೇಟ್ ಆಗಿತ್ತು.
ಬ್ರೇಕ್ಅಪ್ ಆದಮೇಲೆ ಇಬ್ಬರೂ ಅಷ್ಟಾಗಿ ಮಾತನಾಡಿದ್ದಾಗಲೀ, ಪರಸ್ಪರ ಗ್ರೀಟ್ ಮಾಡಿದ್ದಾಗಲೀ ಮಾಡುವುದಿಲ್ಲ.
ಐಶ್ವರ್ಯಾ ರೈ ನಂತರದಲ್ಲಿ ಅಭಿಷೇಕ್ ಬಚ್ಚನ್‌ನನ್ನು ಮದುವೆಯಾಗಿ ಸಂಸಾರದಲ್ಲಿ ಬ್ಯುಸಿಯಾದ್ರೆ ಸಲ್ಮಾನ್ ತಮ್ಮ ಕೆರಿಯರ್‌ನಲ್ಲೇ ಬ್ಯುಸಿಯಾಗಿದ್ದಾರೆ.

Latest Videos

click me!