ಬಾಲಿವುಡ್‌ ನಟ ನಟಿಯರಿಗುಂಟು ಕರಾವಳಿ ಕರ್ನಾಟಕದ ನಂಟು

First Published | Mar 31, 2020, 4:59 PM IST

ಬಾಲಿವುಡ್‌ಗೂ ಕರ್ನಾಟಕದ ಕರಾವಳಿ ತೀರಕ್ಕೂ ಬಹಳ ನಂಟಿದೆ. ಹಿಂದಿ ಚಿತ್ರಗಳಲ್ಲಿ ಹೆಸರು ಮಾಡಿರುವ ಫೇಮಸ್‌ ನಟ-ನಟಿಯರಲ್ಲಿ ಮಂಗಳೂರು ಮೂಲದವರಿದ್ದಾರೆ. ವಿಶ್ವ ಸುಂದರಿ ನಟಿ  ಐಶ್ವರ್ಯ ರೈ ಮಾತ್ರವಲ್ಲದೆ, ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಕೂಡ ಕೋಸ್ಟಲ್‌ ಕನೆಕ್ಷನ್‌ ಹೊಂದಿದ್ದಾರೆ ಎಂದರೆ ಆಶ್ಚರ್ಯವಾಗುವುದು  ಖಂಡಿತ.

ಕರಾವಳಿ ಕರ್ನಾಟಕದ ಕನೆಕ್ಷನ್‌ ಹೊಂದಿರುವ ಬಾಲಿವುಡ್‌ ಸ್ಟಾರ್‌ಗಳು.
ಸುನೀಲ್‌ ಶೆಟ್ಟಿ ಮಂಗಳೂರು ಬಳಿಯ ಮೂಲ್ಕಿಯವರು.
Tap to resize

ಬಾಲಿವುಡ್‌ ಬಾದ್ ಶಾ ಶಾರುಖ್‌ ತಮ್ಮ ಬಾಲ್ಯದ ದಿನಗಳನ್ನು ಪಣಂಬೂರಿನ ಬಂಗ್ಲೆಯಲ್ಲಿ ಕಾಲ ಕಳೆದಿದ್ದರು ಎಂದು ಒಂದು ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು. ಶಾರುಖ್‌ ಅವರ ಅಜ್ಜ ಮಂಗಳೂರಿನ ಬಂದರಿನ ಚೀಫ್‌ ಇಂಜಿನಿಯರ್‌ ಆಗಿದ್ದರು.
ಕರಾವಳಿಯ ಬಂಟ್‌ ಸಮುದಾಯದ ಬಾಜಿಗರ್‌ ಬೆಡಗಿ ಶಿಲ್ಪಾಶೆಟ್ಟಿ.
ತನ್ನ ಸೌಂದರ್ಯದಿಂದ ಇಡೀ ಜಗತ್ತನೇ ಗೆದ್ದಿರುವ ನೀಲಿ ಕಂಗಳ ಸುಂದರಿ ಐಶ್ವರ್ಯಾ ರೈ ಕೋಸ್ಟಲ್‌ ಕರ್ನಾಟಕದವರು.
ಶಮಿತಾ ಶೆಟ್ಟಿ ಕರಾವಳಿ ಮೂಲದ ಇನ್ನೊಬ್ಬ ಬಾಲಿವುಡ್‌ ನಟಿ.
ಅಭಿಷೇಕ್ ಬಚ್ಚನ್‌ ಜೊತೆ ಮದುವೆಯಾಗಿ ಒಬ್ಬ ಮಗಳಿರುವ ಐಶ್ವರ್ಯಾ ಇನ್ನೂ ಬಾಲಿವುಡ್‌ನ ಎವರ್‌ಗ್ರೀನ್‌ ನಟಿ.
ಶಿಲ್ಪಾ ಮತ್ತು ಶಮಿತಾ ಶೆಟ್ಟಿ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕರ್ನಾಟಕ ಕೋಸ್ಟಲ್‌ ಸಿಸ್ಟರ್ಸ್‌.

Latest Videos

click me!