ಒಂದು ಸಿನಿಮಾದಲ್ಲಿ ಹೀರೋ ಎಷ್ಟು ಪವರ್‌ಫುಲ್ ಆಗಿರುತ್ತಾನೋ, ಆತನನ್ನು ಎದುರಿಸುವ ವಿಲನ್ ಕೂಡ ಅಷ್ಟೇ ಸ್ಟ್ರಾಂಗ್ ಆಗಿರಬೇಕು. ಕೆಲವು ಚಿತ್ರಗಳಲ್ಲಿ ಖಳನಾಯಕರೇ ತಮ್ಮ ನಟನೆಯಿಂದ ಹೀರೋಗಳನ್ನು ಮೀರಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.
ಸಿನಿಮಾ ಅಂದ್ರೆ ಕೇವಲ ಹೀರೋ ಮಾತ್ರವಲ್ಲ, ಆ ಹೀರೋಗೆ ಟಕ್ಕರ್ ಕೊಡುವ ಖಳನಾಯಕನೂ ಅಷ್ಟೇ ಗಟ್ಟಿಯಾಗಿರಬೇಕು. ವಿಲನ್ ಪಾತ್ರ ಎಷ್ಟು ಬಲವಾಗಿರುತ್ತದೋ, ನಾಯಕನ ಗೆಲುವು ಅಷ್ಟು ದೊಡ್ಡದಾಗಿ ಕಾಣಿಸುತ್ತದೆ. ಆದರೆ ಕೆಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ಮತ್ತು ಅವರ ನಟನೆ ಎಷ್ಟೊಂದು ಅದ್ಭುತವಾಗಿರುತ್ತೆ ಅಂದ್ರೆ, ಕೆಲವೊಮ್ಮೆ ಹೀರೋಗಳಿಗಿಂತ ಅವರೇ ಹೆಚ್ಚು ನೆನಪಿನಲ್ಲಿ ಉಳಿದುಬಿಡುತ್ತಾರೆ.
25
ರಮ್ಯಾ ಕೃಷ್ಣನ್ - ನರಸಿಂಹ ಚಿತ್ರ
ರಮ್ಯಾ ಕೃಷ್ಣನ್ ಅವರ ವೃತ್ತಿಜೀವನದಲ್ಲಿ 'ನರಸಿಂಹ' ಚಿತ್ರದ ನೀಲಾಂಬರಿ ಪಾತ್ರ ಒಂದು ಮೈಲಿಗಲ್ಲು. ನರಸಿಂಹನ ಮೇಲಿನ ಆಕೆಯ ವ್ಯಾಮೋಹ, ಅಹಂಕಾರ ಕೊನೆಗೆ ಆಕೆಯ ಸಾವಿಗೆ ಕಾರಣವಾಗುತ್ತದೆ. ಈ ಪಾತ್ರದಲ್ಲಿ ರಮ್ಯಾ ಕೃಷ್ಣನ್ ತೋರಿದ ನಟನೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಖಳನಾಯಕಿ ಪಾತ್ರಗಳಲ್ಲಿ ಒಂದಾಗಿ ಉಳಿದಿದೆ.
35
ಗಬ್ಬರ್ ಸಿಂಗ್ - 'ಶೋಲೆ' ಚಿತ್ರ
'ಶೋಲೆ' ಚಿತ್ರದಲ್ಲಿ ಅಮ್ಜದ್ ಖಾನ್ ನಿರ್ವಹಿಸಿದ ಗಬ್ಬರ್ ಸಿಂಗ್ ಪಾತ್ರ ಒಂದು ಟ್ರೆಂಡ್‌ಸೆಟರ್. "ಅರೆ ಓ ಸಾಂಬಾ... ಕಿತ್ನೆ ಆದ್ಮಿ ಥೇ?" ಎಂಬ ಡೈಲಾಗ್ ಕೇಳಿದಾಗಲೆಲ್ಲಾ ಆ ಖಳನಾಯಕನ ಅಹಂಕಾರ, ಬಂಡೆಯ ಮೇಲೆ ನಿಂತಿರುವ ದೃಶ್ಯ ಕಣ್ಣಮುಂದೆ ಬರುತ್ತದೆ. ಡೈಲಾಗ್ ಚಿಕ್ಕದಾದರೂ, ಅದನ್ನು ಹೇಳಿದ ರೀತಿ ಆ ಪಾತ್ರಕ್ಕೆ ವಿಶೇಷ ಮನ್ನಣೆ ತಂದುಕೊಟ್ಟಿತು.
ಟಾಲಿವುಡ್‌ಗೆ ಬಂದರೆ, ನಟ ಗೋಪಿಚಂದ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ವಿಲನ್ ಪಾತ್ರಗಳಿಂದಲೇ ಸಂಚಲನ ಸೃಷ್ಟಿಸಿದ್ದರು. 'ಜಯಂ', 'ನಿಜಂ' ಮತ್ತು 'ವರ್ಷಂ' ನಂತಹ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಖಳನಾಯಕನ ಪಾತ್ರಗಳು ಹೀರೋಗಳಿಗೆ ಭರ್ಜರಿ ಪೈಪೋಟಿ ನೀಡಿದ್ದವು.
55
ಸೋನು ಸೂದ್ - 'ಅರುಂಧತಿ' ಚಿತ್ರ
ಅದೇ ರೀತಿ, ಸೋನು ಸೂದ್ 'ಅರುಂಧತಿ' ಚಿತ್ರದಲ್ಲಿ ನಿರ್ವಹಿಸಿದ ಪಶುಪತಿ ಪಾತ್ರವೂ ಒಂದು ವಿಶೇಷ. ಆ ಪಾತ್ರದ ಕ್ರೌರ್ಯ, ಮಾಟ-ಮಂತ್ರದ ಹಿನ್ನೆಲೆ ಪ್ರೇಕ್ಷಕರನ್ನು ಹೆದರಿಸಿದ್ದಲ್ಲದೆ, ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಒಟ್ಟಿನಲ್ಲಿ, ಅವಕಾಶ ಸಿಕ್ಕರೆ ಖಳನಾಯಕನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಹೀರೋಗಳನ್ನು ಮೀರಿಸುವ ನಟರು ಚಿತ್ರರಂಗದಲ್ಲಿ ಅನೇಕರಿದ್ದಾರೆ. ಇವರು ಕೇವಲ ವಿಲನ್‌ಗಳಾಗಿ ಮಾತ್ರವಲ್ಲ, ಸಿನಿಮಾದ ಮಟ್ಟವನ್ನು ಹೆಚ್ಚಿಸುವ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.