ಮುಂಬೈ(ಡಿ. 25) ಕೊರೋನಾ ಕಾರೆಣಕ್ಕೆ ಆನ್ ಲೈನ್ ಫ್ಲಾಟ್ ಫಾರ್ಮ್ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದೆಷ್ಟೋ ವೆಬ್ ಸೀರಿಸ್ ಗಳು ಯಾವ ಸ್ಟಾರ್ ಸಿನಿಮಾಕ್ಕೂ ಕಡಿಮೆ ಇಲ್ಲದೆ ಜನಪ್ರಿಯತೆ ಪಡೆದುಕೊಂಡಿವೆ. ಅದಕ್ಕೆ ಸಂಬಂಧಿಸಿದ ಒಂದು ಸುದ್ದಿ ಇಲ್ಲಿದೆ. ಒಟಿಟಿ ಮನರಂಜನೆ ಫ್ಲಾಟ್ ಫಾರ್ಮ್ ಬಗ್ಗೆ ನಟಿ ಅದಾ ಖಾನ್ ಮಾತನಾಡಿದ್ದಾರೆ. ಸಿಕ್ಕಾಪಟ್ಟೆ ಏಕ್ಸಪೋಸ್ ಮಾಡಿ, ಬಟ್ಟೆ ಬಿಚ್ಚಿ ಜನರನ್ನು ಸೆಳೆಯುವುದು ನನಗೆ ಬೇಕಿಲ್ಲ ಎಂದಿದ್ದಾರೆ. ನನಗೆ ಕತೆ ಮುಖ್ಯ, ಪಾತ್ರ ಮುಖ್ಯ ಎಂದಿರುವ ಖಾನ್ ಭಿನ್ನ ಹೇಳಿಕೆ ನೀಡಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಒಟಿಟಿ ಫ್ಲಾಟ್ ಫಾರ್ಮ್ ನ ಅನೇಕ ಪ್ರಾಜೆಕ್ಟ್ ಗಳು ಬಂದಿದ್ದನ್ನು ಬಿಟ್ಟಿದ್ದೇನೆ ಎಂದಿದ್ದಾರೆ. ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಟ್ಯಾಲೆಂಟ್ ತೋರಿಸಲು ಬೇರೆ ಎಲ್ಲಿಯೂ ಹೋಗಬೇಕಿಲ್ಲ. ನಿಮ್ಮ ತನ ಉಳಿಸಿಕೊಂಡೇ ಜನಪ್ರಿಯತೆ ಗಳಿಸಿಕೊಳ್ಳಬಹುದು ಎಂದಿದ್ದಾರೆ. ಒಟಿಟಿಯಿಂದಲೇ ಅಭಿಮಾನಿಗಳನ್ನು ಗಳಿಸಿಕೊಳ್ಳಬೇಕು ಅಂತೇನೂ ಇಲ್ಲ ಭಿನ್ನವಾಗಿಯೂ ಯೋಚನೆ ಮಾಡಬಹುದು ಎಂದು ಸಲಹೆ ಕೊಟ್ಟಿದ್ದಾರೆ. I can’t do bold characters onscreen just to get instant views and attention, the story needs to justify the part says Adaa Khan ನಿಮ್ಮ ತನ ಜಗತ್ತಿಗೆ ತೋರಿಸಲು ಬಟ್ಟೆ ಬಿಚ್ಚಬೇಕು ಎಂದೇನೂ ಇಲ್ಲ