ಬಾಲಿವುಡ್‌ ಸ್ಟಾರ್ಸ್‌ ಮದುವೆಗಳಲ್ಲಿ ಪರ್ಫಾಮ್‌ ಮಾಡಲು ಎಷ್ಟು ಚಾರ್ಜ್‌ ಮಾಡ್ತಾರೆ?

Suvarna News   | Asianet News
Published : Sep 17, 2021, 04:22 PM IST

ಕತ್ರಿನಾ ಕೈಫ್‌ನಿಂದ ಹಿಡಿದು ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾವರೆಗೂ ಹಲವು ಸಿನಿಮಾ ತಾರೆಗಳನ್ನು ಮದುವೆಯಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಲಾಗುತ್ತದೆ. ನಿಮ್ಮ ಫೇವರೇಟ್‌ ಬಾಲಿವುಡ್ ಸ್ಟಾರ್‌ ಎಷ್ಟು  ಚಾರ್ಜ್‌ ಮಾಡ್ತಾರೆ ಗೊತ್ತಾ? ಪಡೆಯುತ್ತಾರೆ ಎಂದು ತಿಳಿಯಿರಿ .

PREV
18
ಬಾಲಿವುಡ್‌ ಸ್ಟಾರ್ಸ್‌ ಮದುವೆಗಳಲ್ಲಿ  ಪರ್ಫಾಮ್‌ ಮಾಡಲು ಎಷ್ಟು ಚಾರ್ಜ್‌ ಮಾಡ್ತಾರೆ?

ಡೊಡ್ಡ ಮನೆತನದವರು ಬಾಲಿವುಡ್ ಸೆಲೆಬ್ರಿಟಿಗಳನ್ನು ತಮ್ಮ ಮದುವೆಗೆ ಹಾಜರಾಗಲು ಅಥವಾ ಪರ್ಫಾಮ್‌ ಮಾಡಲು ಆಹ್ವಾನಿಸುವುದು ಸಾಮಾನ್ಯ. ಇಂತಹ ಗ್ರ್ಯಾಂಡ್‌ ಮದುವೆಗಳಲ್ಲಿ ಭಾಗವಹಿಸಲು ಬಾಲಿವುಡ್ ಸೆಲೆಬ್ರಿಟಿಗಳು ಎಷ್ಟು ಶುಲ್ಕ ಪಡೆಯುತ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ.

28

ಸಲ್ಮಾನ್ ಖಾನ್:
ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಡ್ಯಾನ್ಸ್‌  ಅನ್ನು ಜನರು ಸಕತ್ ಇಷ್ಟಪಡುತ್ತಾರೆ. ಸಲ್ಮಾನ್ ಖಾನ್ ಮದುವೆಗಳಲ್ಲಿ ಹಾಜರಾಗಲು ಅಥವಾ ಪರ್ಫಾಮ್‌ ಮಾಡಲು  2 ಕೋಟಿ ರೂ. ಭಾರೀ ಬೆಲೆಯನ್ನು ವಿಧಿಸುತ್ತಾರಂದೆ. ಸಲ್ಮಾನ್ ಡ್ಯಾನ್ಸ್‌ ಯಾವಾಗಲೂ ಹಿಟ್ ಲಿಸ್ಟ್‌ನಲ್ಲಿರುತ್ತದೆ.

 
 

38

ರಣವೀರ್ ಸಿಂಗ್:
ನಟ ರಣವೀರ್ ಸಿಂಗ್ ತುಂಬಾ ಒಳ್ಳೆಯ ಡ್ಯಾನ್ಸರ್‌ ಹಾಗೂ ಇವರು ತಮ್ಮ ಕಿಲ್ಲರ್‌ ಡ್ಯಾನ್ಸ್‌ ಮೂವ್‌ಗಳಿಂದ ಜನರನ್ನು ಮನೋರಂಜಿಸುತ್ತಾರೆ. ತಮ್ಮ ನೃತ್ಯ ಪ್ರದರ್ಶನಕ್ಕಾಗಿ ರಣವೀರ್‌ 1 ಕೋಟಿ ರೂ ಹಣ ಪಡೆಯುತ್ತಾರೆ.

 
 

48

ದೀಪಿಕಾ ಪಡುಕೋಣೆ:
ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಸಕತ್‌ ಫೇಮಸ್‌. ಅನೇಕ ಬಾರಿ ಅವರನ್ನು ಗ್ರ್ಯಾಂಡ್‌ ಮದುವೆ ಸಮಾರಂಭಗಳಿಗೆ ಆಮಂತ್ರಿಸಲಾಗುತ್ತದೆ. ದೀಪಿಕಾ ಮದುವೆಯಲ್ಲಿ ಪರ್ಫಾಮ್‌ ಮಾಡಲು 1 ಕೋಟಿ ಚಾರ್ಜ್‌ ಮಾಡುತ್ತಾರೆ.

58

ಕತ್ರಿನಾ ಕೈಫ್:
ಕಿಕ್‌ ಸಿನಿಮಾ ಫೇಮ್‌ನ ಕತ್ರಿನಾ ಕೈಫ್‌ ಅವರ ಚಿಕಿನಿ ಚಮೇಲಿ, ಶೀಲಾ ಕಿ ಜವಾನಿ, ಕಮ್ಲಿ ಮುಂತಾದ ಡ್ಯಾನ್ಸ್‌ ನಂಬರ್‌ಗಳಿಂದ ಫ್ಯಾನ್ಸ್‌ ನಿದ್ರೆ ಗೆಡಿಸಿದ್ದಾರೆ. ಮದುವೆಗಳಲ್ಲಿ ನೃತ್ಯ ಪ್ರದರ್ಶನಕ್ಕಾಗಿ ಕತ್ರಿನಾ ಸುಮಾರು 3 ಕೋಟಿ ರೂ. ಪಡೆಯುತ್ತಾರೆ.

68

ಶಾರುಖ್ ಖಾನ್:
ಶಾರುಖ್ ಖಾನ್ ಅವರ ಡ್ಯಾನ್ಸ್‌ ಪರ್ಫಾಮ್ಸ್‌ ಸಿಕ್ಕಾಪಟ್ಟೆ ಫೇಮಸ್. ಬಾಲಿವುಡ್‌ನ ಕಿಂಗ್‌ ಖಾನ್‌ ಮದುವೆಗಳಲ್ಲಿ ಪ್ರದರ್ಶನ ನೀಡಲು  3 ಕೋಟಿ ರೂ ಡಿಮ್ಯಾಂಡ್‌ ಮಾಡುತ್ತಾರೆ ಎನ್ನಲಾಗಿದೆ.

78

ಹೃತಿಕ್ ರೋಷನ್:
ಗ್ರೀಕ್ ಗಾಡ್‌  ಎಂದೇ ಫೇಮಸ್‌ ಆಗಿರುವ ನಟ  ಹೃತಿಕ್ ರೋಷನ್ ಬಾಲಿವುಡ್‌ನ  ಬೆಸ್ಟ್  ಡ್ಯಾನ್ಸರ್‌ಗಳಲ್ಲಿ ಒಬ್ಬರು. ಇವರ ಡ್ಯಾನ್ಸ್‌ ಸ್ಟೆಪ್ಸ್‌ ಹಾಗೂ ಮೂವ್ಸ್‌ ಅಭಿಮಾನಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಹೃತಿಕ್‌  2.5 ಕೋಟಿ ರೂ ಮಾಡುತ್ತಾರೆ.
 

88

ಪ್ರಿಯಾಂಕಾ ಚೋಪ್ರಾ:
ಗ್ಲೋಬಲ್‌ ಸೆನ್ಸೆಷನ್‌ ಆಗಿರುವ ಪ್ರಿಯಾಂಕಾ ಚೋಪ್ರಾ ಸುಮಾರು ಮದುವೆಗಳಲ್ಲಿ ಪರ್ಫಾಮ್‌ ಮಾಡಲು ಸುಮಾರು  2.5 ಕೋಟಿ ರೂ ಪಡೆಯುತ್ತಾರೆ.  ದೇಸಿ ಗರ್ಲ್‌ ಪ್ರಿಯಾಂಕಾರ ಮೂಮ್‌ಗಳಿಂದ ಸಮಾರಂಭದ ಕಳೆ ಹೆಚ್ಚುತ್ತದೆ. 
 

click me!

Recommended Stories