Happy Birthday ತಲೈವಾ: ತನ್ನ ಸಂದರ್ಶನ ಮಾಡಿದಾಕೆಯನ್ನೇ ವರಿಸಿದ ನಟ

First Published Dec 12, 2020, 4:49 PM IST

ಸೌತ್‌ನ ಸೂಪರ್‌ಸ್ಟಾರ್ ರಜನಿಕಾಂತ್‌ಗೆ  70 ನೇ ಹುಟ್ಟುಹಬ್ಬದ ಸಂಭ್ರಮ. ಹಲವು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ ರಜನಿ ಕಾಂತ್‌.ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಜೊತೆಗೆ ಸಾಕಷ್ಟು ಆವಾರ್ಡ್‌ಗಳನ್ನು ಗಳಿಸಿರುವ ಈ ನಟ ನೀಡಿರುವ ಹಿಟ್‌ ಸಿನಿಮಾಗಳು ಲೆಖ್ಖವಿಲ್ಲದಷ್ಟು. ಈ ಸೂಪರ್‌ ಸ್ಟಾರ್‌ ಬಗ್ಗೆ ಕೆಲವು ಫ್ಯಾಕ್ಟ್ಸ್  ಇಲ್ಲಿವೆ.

1975 ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಕೂಡಲೇ ಸೂಪರ್‌ಸ್ಟಾರ್ ಆದ ನಟ ರಜನಿಕಾಂತ್.
undefined
ಕೇವಲ ದಕ್ಷಿಣದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ರಜಿನಿ ಅವರನ್ನು ಥಲೈವಾ ಎಂದು ಕರೆಯುತ್ತಾರೆ.
undefined
ಮರಾಠಿ ಮತ್ತು ಕನ್ನಡ ಮಾತನಾಡುತ್ತಾ ಬೆಳೆದ ನಟ ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗೈಕ್ವಾಡ್.
undefined
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಕೂಲಿ, ಕಾರ್ಪೆಂಟರ್ ಮತ್ತು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಈ ಸೂಪರ್‌ಸ್ಟಾರ್‌.
undefined
ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್‌ನಿಂದ ನಟನಾ ಕೋರ್ಸ್‌ ಮಾಡುವಾಗ ತಮಿಳು ಕಲಿತ ರಜಿನಿ.
undefined
ತನ್ನ ಕಾಲೇಜು ನಿಯತಕಾಲಿಕೆಗಾಗಿ ರಜಿನಿ ಅವರನ್ನು ಸಂದರ್ಶಿಸಲು ಬಂದಾಗ ಭೇಟಿಯಾದ ಲತಾ ರಂಗಾಚಾರಿಯನ್ನು 1981 ರಲ್ಲಿ ವಿವಾಹವಾದರು.
undefined
ವೃತ್ತಿಜೀವನದ ಮೊದಲ ಎರಡು ವರ್ಷಗಳಲ್ಲಿ, ಕೇವಲ ನೆಗಟಿವ್‌ ಪಾತ್ರಗಳನ್ನು ಮಾತ್ರ ಪಡೆದಿದ್ದರು. 1977 ರಲ್ಲಿ ಭುವನಾ ಒರು ಕೆಲ್ವಿಕ್ಕುರಿ ಸಿನಿಮಾದಲ್ಲಿ ಮೊದಲ ಬಾರಿಗೆ ಸಕಾರಾತ್ಮಕ ಪಾತ್ರವನ್ನು ಪಡೆದರು.
undefined
1995 ರ ಭಾಗ್ಯ ದೇಬಾಟ ಎಂಬ ಬಂಗಾಳಿ ಚಿತ್ರದಲ್ಲಿ ಅವರು ವಿಶೇಷ ಪಾತ್ರ ವಹಿಸಿದರು.
undefined
ಪಿ ವಾಸು ನಿರ್ದೇಶನದ ರಜನಿಕಾಂತ್‌ರ ಚಂದ್ರಮುಖಿ 2007 ರಲ್ಲಿ ಅತಿ ಹೆಚ್ಚು ಕಾಲ ಓಡಿದ ತಮಿಳು ಚಿತ್ರ. ಈ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಟರ್ಕಿಶ್ ಮತ್ತು ಜರ್ಮನ್ ಭಾಷೆಗಳಲ್ಲಿಯೂ ಡಬ್ ಮಾಡಲ್ಪಟ್ಟಿದೆ.
undefined
ಅಮರ್ ಅಕ್ಬರ್ ಆಂಥೋನಿ, ಲಾವರಿಸ್, ಡಾನ್ ಸೇರಿದಂತೆ ಒಟ್ಟು 11 ಅಮಿತಾಭ್ ಬಚ್ಚನ್ ಚಿತ್ರಗಳ ತಮಿಳು ರೀಮೇಕ್‌ಗಳಲ್ಲಿ ನಟಿಸಿದ್ದಾರೆ ರಜನಿಕಾಂತ್ .
undefined
ಅವರ 2007 ರ ಬ್ಲಾಕ್ಬಸ್ಟರ್ ಚಿತ್ರ ಶಿವಾಜಿಗೆ ರಜನಿಕಾಂತ್ ಪಡೆದ ಸಂಭಾವನೆ 26 ಕೋಟಿ ರೂ.ಜಾಕಿ ಚಾನ್ ನಂತರ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಎರಡನೇ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಯಿ
undefined
ಟ್ವಿಟ್ಟರ್‌ಗೆ ಜಾಯಿನ್‌ ಆಗಿ ಏಳು ವರ್ಷಗಳ ಅವಧಿಯಲ್ಲಿ 5.8 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ ತಲೈವಾ‌.
undefined
ಹಿಂದೂ ಧರ್ಮದ ಅನುಯಾಯಿ ಮತ್ತು ಆಧ್ಯಾತ್ಮಿಕತೆಯಲ್ಲಿ ನಂಬಿಕೆಯುಳ್ಳ ಈ ನಟ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ.
undefined
click me!