ಪುನೀತ್ ರಾಜ್ ಕುಮಾರ್ ಜೊತೆಗೆ ಬಿಂದಾಸ್ ಸಿನಿಮಾದಲ್ಲಿ ನಟಿಸುವ ಮೂಲಕ ಜನಮನ ಗೆದ್ದ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ತಮ್ಮ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಪತಿ ಸೊಹೈಲ್ ಕಥುರಿಯಾ ಜೊತೆ ಅತ್ಯಂತ ರೋಮ್ಯಾಂಟಿಕ್ ಆಗಿ ಆಚರಿಸಿದರು.
ಮಾಲ್ಡೀವ್ಸ್ ಗೆ ತಮ್ಮ ಡ್ರೀಮ್ ಟ್ರಾವೆಲ್ ಮಾಡಿರುವ ನಟಿ, ಬೀಚ್ ನಲ್ಲಿ ಎಂಜಾಯ್ ಮಾಡುತ್ತಾ, ತಮ್ಮ ಸಂಗಾತಿ ಜೊತೆಗಿನ ಮುದ್ದಾದ ಫೋಟೊಗಳನ್ನು ಹಾಗೂ ವಿಡೀಯೋಗಳನ್ನು ಶೇರ್ ಮಾಡಿದ್ದಾರೆ, ಅಲ್ಲಿಯೇ ತಮ್ಮ ಆನಿವರ್ಸರಿ ಸೆಲೆಬ್ರೇಟ್ (Anniversary) ಮಾಡಿದ್ದಾರೆ. .
ಹನ್ಸಿಕಾ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪ್ರವಾಸದ ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಪೋಸ್ಟ್ನಲ್ಲಿ ಸೊಹೈಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇಬ್ಬರು ಕೈ ಕೈ ಹಿಡಿದು ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ನಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮುದ್ದು ಮುದ್ದಾದ ಫೋಟೊಗಳನ್ನು ಶೇರ್ ಮಾಡಿ The island life ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಬಿಂದಾಸ್ ಬೆಡಗಿಯ ಫೋಟೊಗಳು ಸಹ ಬಿಂದಾಸ್ ಆಗಿವೆ.
ಈ ರೊಮ್ಯಾಂಟಿಕ್ ಐಲ್ಯಾಂಡಲ್ಲಿ ನಟಿ ಸ್ಕರ್ಟ್ ಮತ್ತು ಕ್ರಾಪ್ ಟಾಪ್, ಪ್ಯಾಂಟ್, ಲೆಪಡ್ ಪ್ರಿಂಟ್ ಬ್ರೇಸರ್, ಶ್ರಗ್, ಗೌನ್, ಡೆನಿಮ್ ಶಾರ್ಟ್ಸ್ ಹಾಗೂ ಬ್ಲ್ಯಾಕ್ ಕ್ರಾಪ್ ಟಾಪ್ ಧರಿಸಿದ್ದು ಎಲ್ಲಾ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಬಾಲ ನಟಿಯಾಗಿ ಸೀರಿಯಲ್ ಎಂಟ್ರಿ ಕೊಟ್ಟ ನಟಿ, ನಂತರ ಬಾಲಿವುಡ್ ನಲ್ಲೂ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದರು. ಬಳಿಕ ಅಲ್ಲು ಅರ್ಜುನ್ ನಟನೆಯ ದೇಶಮುದುರು ಸಿನಿಮಾ ಮೂಲಕ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಲ್ಲಿವರೆಗೆ ಬಹುಬೇಡಿಕೆಯ ನಟಿಯಾಗಿ ಮುಂದುವರೆದಿದ್ದಾರೆ.
ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಹನ್ಸಿಕಾ ಮೋಟ್ವಾನಿ ಕೈಯಲ್ಲಿ ಸದ್ಯ ಮೂರು ತಮಿಳು ಸಿನಿಮಾಗಳಿವೆ. ರೌಡಿ ಬೇಬಿ, ಮ್ಯಾನ್, ಗಾಂಧಾರಿ ಸಿನಿಮಾಗಳಲ್ಲಿ ಹನ್ಸಿಕಾ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.