ಗೋವಿಂದ ಅವರ ಸೋದರ ಸೊಸೆ ಮತ್ತು ಜನಪ್ರಿಯ ಕಿರುತೆರೆ ನಟಿ ರಾಗಿಣಿ ಖನ್ನಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ಕ್ಷಮೆ ಯಾಚಿಸಿದ ಪೋಸ್ಟ್ ವೈರಲ್ ಆಗುತ್ತಿದೆ. ನಟಿ ಈಗ ತಮ್ಮ ಮೂಲಕ್ಕೆ ಮರಳಿದ್ದಾಗಿ ಹೇಳಿಕೊಂಡಿದ್ದಾರೆ.
ಗೋವಿಂದ ಅವರ ಸೋದರ ಸೊಸೆ ಮತ್ತು ಜನಪ್ರಿಯ ಕಿರುತೆರೆ ನಟಿ ರಾಗಿಣಿ ಖನ್ನಾ ಒಂದು ದಿನದ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಪೋಸ್ಟ್‌ನಿಂದ ಅನೇಕರು ಹುಬ್ಬೇರಿಸುವಂತೆ ಮಾಡಿದ್ದರು.
ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮತಾಂತರದ ಪೋಸ್ಟ್ ಅನ್ನು ಹಂಚಿಕೊಂಡು ಇನ್ನು ಮುಂದೆ ಕ್ರಿಶ್ಚಿಯನ್ ಸಂಪ್ರದಾಯವನ್ನು ಅನುಸರಿಸುವುದಾಗಿ ಘೋಷಿಸಿದ್ದರು.
ಆದರೆ, ಕೇವಲ 24 ಗಂಟೆಗಳ ಒಳಗೆ, ರಾಗಿಣಿ ತನ್ನ ಕಾರ್ಯಕ್ಕಾಗಿ ಕ್ಷಮೆ ಯಾಚಿಸಿದ್ದಾರೆ ಮತ್ತು ಜನಪ್ರಿಯ ಹಿಂದೂ ವ್ಯಕ್ತಿಯ ಭಾಷಣದ ವೀಡಿಯೊವನ್ನು ಅದರ ಮೇಲೆ ತನ್ನ ಚಿತ್ರಗಳೊಂದಿಗೆ ಹಂಚಿಕೊಂಡಿದ್ದಾರೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಕುರಿತು ತಾವು ಮೊದಲು ಹಾಕಿದ್ದ ಇನ್ಸ್ಟಾ ಪೋಸ್ಟ್ ಅನ್ನು ರಾಗಿಣಿ ಖನ್ನಾ ಅಳಿಸಿದ್ದಾರೆ.
ಅವರ ಹೊಸ ಪೋಸ್ಟ್‌ನಲ್ಲಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ, 'ಹಾಯ್, ನಾನು ರಾಗಿಣಿ ಖನ್ನಾ. ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡ ನನ್ನ ಹಿಂದಿನ ರೀಲ್‌ಗಳಿಗಾಗಿ ಕ್ಷಮೆ ಯಾಚಿಸಲು ಬಯಸುತ್ತೇನೆ. ನಾನು ನನ್ನ ಬೇರುಗಳಿಗೆ ಮರಳಿದ್ದೇನೆ ಮತ್ತು ಈಗ ಕಟ್ಟರ್ ಹಿಂದೂ ಸನಾತನಿಯ ಮಾರ್ಗವನ್ನು ಅಳವಡಿಸಿಕೊಂಡಿದ್ದೇನೆ.'
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ರಾಗಿಣಿ ಖನ್ನಾ ಖಾತೆ ಹ್ಯಾಕ್ ಆಗಿದೆಯೇ ಎಂಬ ಅನುಮಾನ ಹಲವರನ್ನು ಕಾಡಿದೆ. ನಟಿಯ ಖಾತೆಯನ್ನು ಚುಕಿದಾರ್ ಬಹದ್ದೂರ್ ಎಂಬ ವ್ಯಕ್ತಿ ಬಳಸುತ್ತಿರುವಂತೆ ತೋರುತ್ತಿದೆ.
ಇದೀಗ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು ಅಸಲಿಯೇ, ಹಿಂದೂ ಧರ್ಮಕ್ಕೆ ಮರಳಿದ್ದು ಅಸಲಿಯೇ ಎಂಬ ಗೊಂದಲ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದಕ್ಕೆ ಸ್ವತಃ ನಟಿ ಸ್ಪಷ್ಟೀಕರಣ ನೀಡಬೇಕಿದೆ.
ರಾಗಿಣಿ ಖನ್ನಾ ಇತ್ತೀಚೆಗೆ ಸಹೋದರಿ ಆರ್ತಿ ಸಿಂಗ್ ಅವರ ಮದುವೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಕ್ಕಾಗಿ ಸುದ್ದಿಯಲ್ಲಿದ್ದರು.