ಕಂಗನಾ To ದೀಪಿಕಾ: ಕಾಲೇಜು ಮೆಟ್ಟಿಲು ಹತ್ತದ ಬಾಲಿವುಡ್‌ನ ಸ್ಟಾರ್‌ಗಳಿವರು

Suvarna News   | Asianet News
Published : Aug 09, 2020, 05:52 PM ISTUpdated : Aug 09, 2020, 06:16 PM IST

ನಟನೆಗೂ ಶಿಕ್ಷಣಕ್ಕೂ ದೂರ ಎಂಬ ಮಾತು ಕಾಮನ್‌. ಆದರೆ ಇದು ಕೆಲವು ನಟ ನಟಿಯರ ವಿಷಯದಲ್ಲಿ ನಿಜ. ಕೆಲವು ಬಾಲಿವುಡ್ ನಟರು ಹನ್ನೆರಡನೇ ತರಗತಿಯನ್ನು ಸಹ ಮುಗಿಸಿಲ್ಲ. ಇಲ್ಲಿದ್ದಾರೆ ನೋಡಿ ಬಾಲಿವುಡ್‌ನ ಕೆಲವು ಸ್ಟಾರ್‌ಗಳು. ಕಂಗನಾ ರಣಾವತ್‌ to ದೀಪಿಕಾ ಪಡುಕೋಣೆವರೆಗೆ ಈ ಕೆಲವು ನಟರು ಕಾಲೇಜು ಮೆಟ್ಟಿಲನ್ನೂ ತುಳಿದಿಲ್ಲ.

PREV
19
ಕಂಗನಾ To ದೀಪಿಕಾ: ಕಾಲೇಜು ಮೆಟ್ಟಿಲು ಹತ್ತದ ಬಾಲಿವುಡ್‌ನ ಸ್ಟಾರ್‌ಗಳಿವರು

ಈ ಸ್ಟಾರ್‌ಗಳಿಗೆ ಹೆಚ್ಚಿನ ಶಿಕ್ಷಣವಿಲ್ಲದಿದ್ದರೂ ಸಹ, ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಸಾಕಷ್ಟು ಸಾಧಿಸಿದ್ದಾರೆ. ನಟನಾಗಬೇಕೆಂಬ ಮಹತ್ವಾಕಾಂಕ್ಷೆಗೆ ಅವರ ಕುಟುಂಬಗಳು ವಿರುದ್ಧವಾಗಿತ್ತು. ಆದರೂ  ಅವರ ಕನಸುಗಳನ್ನು ನನಸಾಗಿಸಿದರು. 

29

ಆಮೀರ್ ಖಾನ್:  'ನನ್ನ ಶಿಕ್ಷಣವು 12 ನೇ ತರಗತಿಯವರೆಗೆ ಮಾತ್ರ. ಏಕೆಂದರೆ ಅದರ ನಂತರ ನಾನು ಸಿನಿಮಾ ಕ್ಷೇತ್ರಕ್ಕೆ ಬಂದೆ' ಎಂದು  2009 ರಲ್ಲಿ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ 2009 ರಲ್ಲಿ ಹೇಳಿದ್ದರು. 

39

ಕಂಗನಾ ರಣಾವತ್:  ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜನಿಸಿದ ಕಂಗನಾ ಹಠಮಾರಿ ಹುಡುಗಿ. ನಟನೆಯನ್ನು ಕೆರಿಯರ್‌ ಆಗಿ ಮುಂದುವರಿಸಲು ಕುಟುಂಬದ ನಿಯಮಗಳಿಗೆ ವಿರುದ್ಧವಾಗಿ ಹೋದರು. 12 ನೇ ತರಗತಿಯಲ್ಲಿ ಕೆಮಿಸ್ಟ್ರಿ ಪರೀಕ್ಷೆಯಲ್ಲಿ ಫೇಲ್‌ ಆದಾಗ ತನ್ನ ಗುರಿ ಬೇರೆ ಯಾವುದೋ ಎಂದು ಅರಿತುಕೊಂಡರು. ಅವರು ಡಾಕ್ಟರ್‌ ಆಗಲು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (ಎಐಪಿಎಂಟಿ)ಗೆ  ಸಹ ಅರ್ಜಿ ಸಲ್ಲಿಸಿದ್ದರು. ಆದರೆ ಎಂದೂ ಪರೀಕ್ಷೆ ಅಟೆಂಡ್‌ ಆಗಲಿಲ್ಲ. ಮಾಡೆಲಿಂಗ್ ಕೆಲಸ ಹುಡುಕಲು ದೆಹಲಿಗೆ ಹೋದರು. ಅಂತಿಮವಾಗಿ ಮುಂಬೈಗೆ ತೆರಳಿದರು.

49

ದೀಪಿಕಾ ಪಡುಕೋಣೆ: 'ನಾನು ಕಾಲೇಜಿಗೆ ಹೋಗಿಲ್ಲ. ನನ್ನ 11ನೇ ತರಗತಿಯನ್ನು ಯಶಸ್ವಿಯಾಗಿ ಮುಗಿಸಿದ್ದೇನೆ' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

59

ಕತ್ರಿನಾ ಕೈಫ್: ಹಾಂಗ್ ಕಾಂಗ್‌ನಲ್ಲಿ ಜನಿಸಿದ ಕತ್ರಿನಾ ಕೈಫ್‌ಗೆ ಏಳು ಒಡಹುಟ್ಟಿದವರು. 14 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಇವರ ಪೋಷಕರು ವಿಚ್ಛೇದನ ಪಡೆದ ಕಾರಣದಿಂದ ಎಲ್ಲಾ ಸಹೋದರರನ್ನು ತಾಯಿ ಬೆಳೆಸಿದರು. ತಾಯಿ ತನ್ನ ಜೀವನವನ್ನು ಸಾಮಾಜಿಕ ಕಾರಣಗಳಿಗಾಗಿ ಅರ್ಪಿಸಿದ್ದರಿಂದ ಅವಳು ಆಗಾಗ್ಗೆ ಸ್ಥಳಾಂತರಗೊಳ್ಳುತ್ತಿದ್ದಳು. ಹೀಗಾಗಿ, ಕತ್ರಿನಾ ಎಂದಿಗೂ ಶಾಲೆಗೆ ಹೋಗಲಿಲ್ಲ. ಅವಳು ಮನೆಯಲ್ಲೇ ಟ್ಯೂಷನ್‌ ಪಡೆದಳು. 

69

ಕಾಜೋಲ್: ಬಂಗಾಳಿ-ಮರಾಠಿ ಕುಟುಂಬದಲ್ಲಿ ಜನಿಸಿದ ತುಂಟ ಮಗು ಕಾಜೋಲ್‌ ಚಿಕ್ಕ ವಯಸ್ಸಿನಲ್ಲೇ ಪೋಷಕರ ವಿಚ್ಛೇದನದ ಕಾರಣ ಅಜ್ಜಿ ಮನೆಯಲ್ಲಿ ಬೆಳೆದರು. ಕೇವಲ 16 ವರ್ಷದವಳಿದ್ದಾಗ ಸಿನಿಮಾದ ಆಫರ್‌ಗಳು ಬರಲಾರಂಭಿಸಿತು. ರಾಹುಲ್ ರಾವೈಲ್ ಅವರ ಚಿತ್ರ ಬೆಖುದಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದರು. ನಂತರ, ಶಾಲೆಗೆ ಮರಳಲು ಮತ್ತು ಶಿಕ್ಷಣ ಮುಗಿಸಲು ಬಯಸಿದ್ದರು. ಆದರೆ ಅದು ಸಾಧ್ಯವಾಗದೇ ಅಂತಿಮವಾಗಿ ಶಾಲೆಯಿಂದ ಹೊರಗುಳಿದು ನಟನೆಯಲ್ಲಿ ತೊಡಗಿಸಿ ಕೊಂಡರು.

79

ಪ್ರಿಯಾಂಕಾ ಚೋಪ್ರಾ: 2000 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಪ್ರಿಯಾಂಕಾ ಚೋಪ್ರಾ ವರದಿಗಳ ಪ್ರಕಾರ, 12 ನೇ ತರಗತಿಯಲ್ಲಿ ಫೇಲ್‌ ಆಗಿದ್ದಳು. ನಂತರ ಅವಳ ಮಾಡೆಲಿಂಗ್ ವೃತ್ತಿಜೀವನದ ಕಾರಣದಿಂದ ಕಾಲೇಜನ್ನು ಮಧ್ಯದಲ್ಲೇ ಬಿಡಬೇಕಾಯಿತು.

89

ಅರ್ಜುನ್‌ ಕಪೂರ್‌ - ಬಾಲಿವುಡ್‌ನ ಯುಂಗ್‌ ನಟ ಅರ್ಜುನ್‌ ಕಪೂರ್‌ ಸಹ ಕಾಲೇಜು ಮೆಟ್ಟಿಲ್ಲು ಹತ್ತಲಿಲ್ಲ. 11 ನೇ ತರಗತಿಯಲ್ಲಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ನಂತರ ವಿದ್ಯಾಭ್ಯಾಸವನ್ನು ತ್ಯಜಿಸಿದರು ಅರ್ಜುನ್‌.

99

ಕರಿಷ್ಮಾ ಕಪೂರ್: 90 ರ ದಶಕದ ಯಶಸ್ವಿ ಹಾಗೂ  ಪ್ರಸಿದ್ಧ  ನಟಿ ಕರಿಷ್ಮಾ ಕಪೂರ್ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಶಾಲೆಯನ್ನು ತೊರೆದರು. 6 ನೇ ತರಗತಿಯಲ್ಲಿ ಓದು ನಿಲ್ಲಿಸಿದರು ಮತ್ತು ನಟಿಸಲು ಪ್ರಾರಂಭಿಸಿದಳು. 17 ನೇ ವಯಸ್ಸಿನಲ್ಲಿ, ತನ್ನ ಚೊಚ್ಚಲ ಚಿತ್ರ ಪ್ರೇಮ್ ಖೈದಿ ಮೂಲಕ ಫೇಮಸ್‌ ಆದರು. ಅವರು ಕಪೂರ್‌ ಕುಟುಂಬದ‌ ಕುಡಿ.

click me!

Recommended Stories