89ನೇ ವಸಂತಕ್ಕೆ ಕಾಲಿರಿಸಿದ ಧರ್ಮೇಂದ್ರ : ಮೊದಲ ಪತ್ನಿ ಮಕ್ಕಳಿಂದ ಅದ್ಧೂರಿ ಹುಟ್ಟುಹಬ್ಬ ಆಚರಣೆ

First Published | Dec 9, 2024, 6:33 PM IST

ಬಾಲಿವುಡ್‌ನ ಕನಸಿನ ಕನ್ಯೆಯ ಹೇಮಾ ಮಾಲಿನಿ ಪತಿ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ತಮ್ಮ 89ನೇ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದು, ಪುತ್ರರಾದ. ಸನ್ನಿ ಮತ್ತು ಬಾಬಿ ತಮ್ಮ ತಂದೆಯನ್ನು ಪ್ರೀತಿಯಿಂದ ಅಪ್ಪಿಕೊಂಡು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಇದರ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ತಮ್ಮ 89ನೇ ಹುಟ್ಟುಹಬ್ಬವನ್ನು ಪತ್ರಕರ್ತರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಧರ್ಮೇಂದ್ರ ಮೊದಲ ಪತ್ನಿಯ ಪುತ್ರರಾದ ಸನ್ನಿ ಹಾಗೂ ಬಾಬು ಡಿಯೋಲ್ ಅಪ್ಪನ ಜೊತೆಗಿದ್ದರು. 

ನಟ ಧರ್ಮೇಂದ್ರ ಅವರಿಗೆ ಎರಡು ಮದುವೆಯಾಗಿದ್ದು, ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಅವರು ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಪುತ್ರರಾಗಿದ್ದಾರೆ.

Tap to resize

ಧರ್ಮೇಂದ್ರ ಅವರ ಹುಟ್ಟುಹಬ್ಬದ ಆಚರಣೆಗಾಗಿ ಅಭಿಮಾನಿಗಳು 6 ಅಂತಸ್ತುಗಳ  ಕೇಕ್ ತಯಾರಿಸಿದ್ದರು.  ಕಸ್ಟಮೈಜ್ಡ್‌ ಕೇಕ್‌ ಮೇಲೆ ಮೇಲೆ ಧರ್ಮೇಂದ್ರ ಅವರ ಹಳೆಯ ಸಿನಿಮಾಗಳ ಫೋಟೋಗಳನ್ನು ಅಂಟಿಸಲಾಗಿತ್ತು. 

ಕೇಕ್ ಕತ್ತರಿಸಿದ ನಂತರ ಧರ್ಮೇಂದ್ರ ಅವರ ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಅವರೊಂದಿಗೆ ಫೋಟೋ ತೆಗೆಸಿಕೊಂಡರು.

ಆದರೆ ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಧರ್ಮೇಂದ್ರ ಅವರ ಪುತ್ರರಾದ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಅಪ್ಪ ಧರ್ಮೇಂದ್ರ ಜೊತೆ ಹೊಂದಿದ್ದ ಬಾಂಧವ್ಯ. 

ವಯಸ್ಸಾದ ಧರ್ಮೇಂದ್ರ ಅವರಿಗೆ  ಪುತ್ರರಾದ ಬಾಬಿ ಡಿಯೋಲ್‌ ಹಾಗೂ  ಸನ್ನಿ ಡಿಯೋಲ್ ಆಸರೆಯಾಗಿ ನಿಂತಿದ್ದು, ಅನೇಕರನ್ನು ಈ ಅಪ್ಪ ಮಕ್ಕಳ ಬಾಂಧವ್ಯ ಗಮನ ಸೆಳೆಯಿತು. ಸನ್ನಿ ಮತ್ತು ಬಾಬಿ ಅಪ್ಪನ ಕೈಗಳನ್ನು ಹಿಡಿದು ಮುತ್ತು ಕೊಟ್ಟರು.

ಧರ್ಮೇಂದ್ರ ಅವರ ಹುಟ್ಟುಹಬ್ಬದ ಆಚರಣೆಯ ಫೋಟೋಗಳು ಮತ್ತು ವೀಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಕೆಲಸದ ವಿಚಾರದ ಬಗ್ಗೆ ಹೇಳುವುದಾದರೆ ಧರ್ಮೇಂದ್ರ ಕೊನೆಯದಾಗಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ 'ತೇರಿ ಬಾತೋ ಮೇ ಐಸಾ ಉಲಾಜ್ ಜಿಯಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಈ ಸಂಭ್ರಮಾಚರಣೆಯಲ್ಲಿ ಎರಡನೇ ಪತ್ನಿ ಬಾಲಿವುಡ್‌ನ ಕನಸಿನ ಕನ್ಯೆ ಹೇಮಾಮಾಲಿನಿ ಹಾಗೂ ಪುತ್ರಿಯರಾದ ಈಶಾ ಡಿಯೋಲ್ ಹಾಗೂ ಅಹಾನಾ ಡಿಯೋಲ್ ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಕೆಲಸದ ವಿಷಯದಲ್ಲಿ, ಧರ್ಮೇಂದ್ರ ಕೊನೆಯದಾಗಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ 'तेरी बातों में ऐसा उलझा जिया' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Latest Videos

click me!