ಆ ಚಿತ್ರದ ನಿರ್ಮಾಪಕರಾಗಿ, ಮೂರು ಸೆಕೆಂಡುಗಳಷ್ಟು ಬರುವ ಆ ವಿಡಿಯೋಗೆ ಸುಮಾರು 10 ಕೋಟಿ ರೂಪಾಯಿಗಳನ್ನು ಧನುಷ್ ಕಡೆಯಿಂದ ಕೇಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಧನುಷ್ ವಿರುದ್ಧ ನಯನತಾರಾ ತೀಕ್ಷ್ಣವಾದ ಪೋಸ್ಟ್ ಅನ್ನು ಹಾಕಿದ್ದಾರೆ, ವಿಘ್ನೇಶ್ ಶಿವನ್ ಕೂಡ ದನುಷ್ ವಿರುದ್ಧ ಒಂದು ಪೋಸ್ಟ್ ಹಾಕಿದ್ದಾರೆ. ಇದು ಒಂದು ಕಡೆಯಾದರೆ, ಹಲವು ಪ್ರಮುಖ ನಟಿಯರು ಈಗ ನಯನತಾರಾ ಪರವಾಗಿ ನಿಂತು ಧನುಷ್ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಸಿದ್ಧ ನಿರ್ಮಾಪಕ, ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಎಸ್.ಎಸ್. ಕುಮಾರನ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರನ್ನು ಟೀಕಿಸಿ ಒಂದು ಪೋಸ್ಟ್ ಹಾಕಿದ್ದಾರೆ.