ಈ ಕಾರಣದಿಂದ ಪೂನಂ ಧಿಲ್ಲಾನ್ ವಿವಾಹೇತರ ಸಂಬಂಧ ಹೊಂದಿದ್ದರಾ?

First Published Dec 29, 2020, 6:42 PM IST

ಪೂನಮ್ ಧಿಲ್ಲಾನ್ ಬಾಲಿವುಡ್‌ನ ಅತ್ಯಂತ ಮಾದಕ ನಟಿಯರಲ್ಲಿ ಒಬ್ಬರು. ಅವರು ಸಿನಿಮಾದಿಂದ ಸಿನಿಮಾಕ್ಕೆ ಹಾಗೂ ತಮ್ಮ ಏಜ್‌ಲೆಸ್‌ ಬ್ಯೂಟಿಯಿಂದ ಸಾಕಷ್ಟು ಗಮನ ಮತ್ತು ಸ್ಟಾರ್ಡಮ್ ಪಡೆದರು. ಈ ನಟಿ ಇಂಡಸ್ಟ್ರಿಯಲ್ಲಿ ಅನೇಕ ಅಫೇರ್‌ಗಳ ಕಾರಣದಿಂದ ಲವ್‌ ಲೈಫ್‌ ಸಹ ಸಾಕಷ್ಟು ಚರ್ಚೆಯಾಗಿದೆ. 

ಪೂನಂ ಅವರ ಲವ್‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಜೀವನದಲ್ಲಿ ಸಾಕಷ್ಟು ಏರಿಳಿತದಿಂದ ಕೂಡಿದ್ದು,ವಿವಾಹೇತರ ಸಂಬಂಧದವನ್ನು ಹೊಂದಿದ್ದಾರೆ ಎಂಬ ವರದಿ ಇದೆ. ಅದಕ್ಕೆ ಕಾರಣ ಏನು ಗೊತ್ತಾ?
undefined
ಮಿಸ್ ಯಂಗ್ ಇಂಡಿಯಾ ' ಕೀರೀಟ ಗೆದ್ದ ನಂತರ ಪೂನಂ ಜೀವನದಲ್ಲಿ ತೀವ್ರ ಬದಲಾವಣೆಯಾಯಿತು. ಅವರು ರಾತ್ರೋರಾತ್ರಿ ಖ್ಯಾತಿಗೆ ಏರಿದಳು. ತನ್ನ ಚೊಚ್ಚಲ ಚಿತ್ರ ತ್ರಿಶೂಲ್‌ನಿಂದ ಇತ್ತೀಚಿನ ಚಿತ್ರ ಡಬಲ್ ದಿಟ್ರಬಲ್‌ವರೆಗೆ ಸುಮಾರು 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
undefined
ಯಶ್ ಚೋಪ್ರಾರೊಂದಿಗೆ ಸಹ ಸಂಬಂಧ ಹೊಂದಿದ್ದರು ಎಂಬ ಸುದ್ದಿಯಿತ್ತು. ಆದರೆ ನಟಿ ಗಾಸಿಪ್ ಅನ್ನು ತಳ್ಳಿ ಹಾಕಿದ್ದರು, ಏಕೆಂದರೆ ಅವಳನ್ನು ಲೆಂಜೆಂಡ್‌ ಜೊತೆ ಲಿಂಕ್‌ ಮಾಡುವುದು ಬಹಳ ಅಗೌರವದಿಂದ ಕೂಡಿದೆ ಎಂದು ನಟಿ ಭಾವಿಸಿದರು.
undefined
ಪೂನಂ ಬಗ್ಗೆ ಡೈರೆಕ್ಟರ್‌ ರಮೇಶ್‌ರ ಭಾವನೆಗಳು ಹೆಚ್ಚಾದವು, ಆದರೆ ಅವರು ಅವನನ್ನು ಉತ್ತಮ ಸ್ನೇಹಿತ ಎಂದು ಪರಿಗಣಿಸಿ ಶೀಘ್ರದಲ್ಲೇ ಅವನೊಂದಿಗೆ ಸಂಬಂಧವನ್ನು ಕಡಿದುಕೊಂಡರು.
undefined
1980 ರ ದಶಕದಲ್ಲಿ ಪೂನಮ್ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ರಾಜ್ ಸಿಪ್ಪಿ ನಟಿ ಜೀವನದಲ್ಲಿ ಪ್ರವೇಶಿಸಿದರು. ಆಗಲೇ ಮದುವೆಯಾಗಿದ್ದ ನಿರ್ದೇಶಕರಿಗೆ ಪೂನಂ ಮನಸೋತರು. ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು, ಮತ್ತು ಬಿಟೌನ್‌ನ ಚರ್ಚೆಯ ವಿಷಯವಾಯಿತು.. ರಾಜ್ ತನ್ನ ಕುಟುಂಬವನ್ನು ನಟಿಗಾಗಿ ಬಿಟ್ಟಿರಲಿಲ್ಲ, ಮತ್ತು ಪೂನಮ್ 'ಇತರ ಮಹಿಳೆ' ಆಗಲು ಇಷ್ಟಪಡಲಿಲ್ಲ.
undefined
1988ರಲ್ಲಿ ಇದು ನಿಜಕ್ಕೂ ಪೂನಮ್ ಜೀವನದಲ್ಲಿ ರಫ್‌ ಪ್ಯಾಚ್‌ ಆಗಿತ್ತು. ಅವಳು ರಾಜ್ ಜೊತೆ ಬ್ರೇಕಪ್‌ ಆದ ನಂತರ ತನ್ನ ತಂದೆಯನ್ನು ಸಹ ಕಳೆದುಕೊಂಡರು.
undefined
ಪತಿ, ನಿರ್ಮಾಪಕ ಅಶೋಕ್ ಠಾಕೆರಿಯಾ ಅವರನ್ನು ಭೇಟಿಯಾಗಿದ್ದು ಫಾರ್ಮ್‌ ಹೌಸ್‌ನಲ್ಲಿ ಹೋಳಿ ಆಚರಣೆಯ ಸಮಯದಲ್ಲಿ. ಆತ ಈಕೆಯ ಸೌಂದರ್ಯದಿಂದ ಬೆರಗಾದರು.
undefined
ತನ್ನ ತಂದೆಯ ಸಾವಿನ ದುಃಖದಲ್ಲಿದ್ದ ಪೂನಂ ಮೇಲೆ ಒಂದು ಬಕೆಟ್ ನೀರನ್ನು ಸುರಿಯುವುದರ ಮೂಲಕ ಸಂತೋಷ ಪಡಿಸಲು ಅಶೋಕ್‌ ಪ್ರಯತ್ನಿಸಿದರು. ನಂತರ ಅದೇ ವರ್ಷ ನಟಿ ತರಾತುರಿಯಲ್ಲಿ ಮದುವೆಯಾಗಲು ನಿರ್ಧರಿಸಿದರು, ಅವರು ನಂಬಿದ್ದರು. ದಂಪತಿ ಒಬ್ಬ ಮಗ ಮತ್ತು ನಂತರ ಮಗಳನ್ನು ಹೊಂದಿದ್ದರು. ಆದರೆ ಪೂನಮ್ ಸಿನಿಮಾವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದರು.
undefined
1994 ರಲ್ಲಿ ಅಶೋಕ್‌ರ ಎಕ್ಸ್‌ಟ್ರಾ ಮೇರಿಟಲ್‌ ಆಫೇರ್‌ ಕಾರಣದಿಂದ ಸಂಬಂಧದಲ್ಲಿ ಬಿರುಕು ಪ್ರಾರಂಭಿಸಿತು. ನಟಿ ವಿವಾಹೇತರ ಸಂಬಂಧವನ್ನು ಹೊಂದುವ ಮೂಲಕ ಪತಿಗೆ ತಿರುಗೇಟು ಕೊಟ್ಟರು. ಪೂನಮ್ ಡೀವೋರ್ಸ್‌ಗೆ ಅರ್ಜಿ ಸಲ್ಲಿಸಿದರು.ಮಕ್ಕಳನ್ನು ಕಸ್ಟಡಿಗೆ ಪಡೆದರು. ನಂತರ, ಅವರು ಕೆಲವು ಪ್ರಾಜೆಕ್ಟ್‌ಗಳನ್ನು ಮಾಡಿದರು ಮತ್ತು ತಮ್ಮದೇ ಬ್ಯುಸಿನೆಸ್‌ ಸ್ಥಾಪಿಸಿದರು.
undefined
click me!