ಇವ್ರಲ್ಲಿ ಚಿರುಗೆ ತುಂಬಾ ಇಷ್ಟವಾದ ನಾಯಕಿ ಯಾರು ಅಂತ ಒಂದು ಪ್ರಶ್ನೆ ಬಂತು. ಇದು ಚಿರುಗೆ ಸ್ವಲ್ಪ ಟ್ರಿಕಿ ಪ್ರಶ್ನೆ. ಆದ್ರೆ ಚಿರು ಚಾಣಾಕ್ಷತನದಿಂದ ಉತ್ತರಿಸಿ, ಪ್ರತಿ ನಾಯಕಿಗೂ ಒಂದೊಂದು ವಿಶೇಷತೆ ಇದೆ ಅಂದ್ರು. ಆದ್ರೂ, ಅವ್ರಿಗೆ ತುಂಬಾ ಇಷ್ಟವಾದ ನಾಯಕಿಯ ಹೆಸರನ್ನ ಚಿರು ಓಪನ್ ಆಗಿ ಹೇಳೇಬಿಟ್ರು. ಒಂದು ಟಿವಿ ಶೋನಲ್ಲಿ ಚಿರು ಭಾಗವಹಿಸಿದ್ದಾಗ ಈ ಪ್ರಶ್ನೆ ಬಂತು. ಚಿರು ಜೊತೆ ನಟಿಸಿದ್ದ ರಾಧಿಕಾ, ಸುಮಲತಾ ಸ್ಕ್ರೀನ್ ಮೇಲೆ ಬಂದು ಚಿರು ಜೊತೆ ಮಾತಾಡಿದ್ರು. ರಾಧಿಕಾ, ನನ್ನ ಫೇವರಿಟ್ ಹೀರೋ ಚಿರು ಅಂತ ಹೇಳಿದ್ರು. ಚಿರುಗೆ ತಮಾಷೆಯಾಗಿ ಬೆದರಿಕೆ ಹಾಕಿ, ಚಿರು ನಿನಗೂ ಇಷ್ಟದ ನಾಯಕಿ ನಾನೇ, ಈ ವಿಷ್ಯ ನೀನು ಎಲ್ಲರ ಮುಂದೆ ಹೇಳ್ಬೇಕು ಅಂತ ಸ್ವೀಟ್ ವಾರ್ನಿಂಗ್ ಕೊಟ್ರು. ಅವ್ರ ಮಾತಿಗೆ ಚಿರು ನಕ್ಕುಬಿಟ್ರು.