ಕೇರಳ ಮೂಲದ ಈ ನಟಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ರಜನಿಕಾಂತ್, ಚಿರಂಜೀವಿ, ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್‌ನ ಶಾರುಖ್ ಖಾನ್ ಮತ್ತು ಮೋಹನ್‌ಲಾಲ್‌ರಂತಹ ಭಾರತೀಯ ಸಿನಿಮಾ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಇವರ ಬಾಲಿವುಡ್ ಚೊಚ್ಚಲ ಚಿತ್ರವು 1000 ಕೋಟಿ ಸಂಗ್ರಹವನ್ನು ಗಳಿಸಿತು. ಇದು ಬೇರೆ ಯಾವ ನಟಿಯೂ ಸಾಧಿಸದ ಸಾಧನೆ. 2018ರಲ್ಲಿ, ಫೋರ್ಬ್ಸ್ ಇಂಡಿಯಾದ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ದಕ್ಷಿಣ ಭಾರತದ ನಟಿ.
ಕಳೆದ 20 ವರ್ಷಗಳಲ್ಲಿ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಇವರಿಗೆ ಆರಂಭದಲ್ಲಿ ನಟನೆಯ ಆಸೆ ಇರಲಿಲ್ಲ. ನಿರೂಪಕಿಯಾಗಿ ಆರಂಭವಾದ ಇವರ ಸಿನಿಮಾ ಪ್ರವೇಶ ಆಕಸ್ಮಿಕವಾಗಿ ಸಿನಿಮಾದೆಡೆಗೆ ವಾಲಿಕೊಂಡಿತು.
ಚಿತ್ರರಂಗದಲ್ಲಿ ವೈಯಕ್ತಿಕ ಜೀವನದ ವಿಚಾರಕ್ಕೆ ಎರಡು ದೊಡ್ಡ ಆಘಾತಗಳನ್ನು ಎದುರಿಸಿದ ಇವರು ಚಿತ್ರರಂಗವನ್ನು ತೊರೆಯುವ ಬಗ್ಗೆ ಯೋಚಿಸಿದ್ದರು. ಆದರೆ ಮತ್ತೆ ಪ್ರಮುಖ ನಟಿಯಾಗಿ ಮರಳಿದರು. ಒಬ್ಬ ನಿರ್ದೇಶಕರನ್ನು ವಿವಾಹವಾದ ಈ ನಟಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾರೆ.
ಈ ನಟಿಗೆ ಖ್ಯಾತಿಯಷ್ಟೇ ವಿವಾದಗಳೂ ಇವರನ್ನು ಸುತ್ತುವರೆದಿವೆ. ಇವರು ಬೇರೆ ಯಾರೂ ಅಲ್ಲ, ಲೇಡಿ ಸೂಪರ್‌ಸ್ಟಾರ್ ನಯನತಾರಾ. 40೦ರ ವಯಸ್ಸಿನಲ್ಲೂ, ಅವರು ತಮಿಳು ಚಿತ್ರರಂಗದ ಟಾಪ್ ನಟಿಯಾಗಿದ್ದು, ಪ್ರತಿ ಚಿತ್ರಕ್ಕೆ 12-15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ನಟನೆಯನ್ನು ಹೊರತುಪಡಿಸಿ, ಅವರು ರೌಡಿ ಪಿಕ್ಚರ್ಸ್ ಸಂಸ್ಥೆ ಎಂಬುದನ್ನು ನಡೆಸುತ್ತಿದ್ದಾರೆ. ಇದು ಹಲವಾರು ಬ್ಲಾಕ್‌ಬಸ್ಟರ್‌ಗಳನ್ನು ನಿರ್ಮಿಸಿದೆ. ಇವರು ಕೇವಲ 50 ಸೆಕೆಂಡುಗಳ ಜಾಹೀರಾತಿಗೆ ಬರೋಬ್ಬರಿ 5 ಕೋಟಿ ರೂ. ಪಡೆದು ಇತ್ತೀಚೆಗೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದು ಭಾರತದಲ್ಲಿ ಇದುವರೆಗಿನ ಅತಿಹೆಚ್ಚಿನ ಸಂಭಾವನೆ ಆಗಿದೆ.
ಅಷ್ಟಕ್ಕೂ ಕೇವಲ 50 ಸೆಕೆಂಡಿನ ವಿಡಿಯೋಗೆ 5 ಕೋಟಿ ರೂ. ಸಂಭಾವನೆ ಕೊಟ್ಟ ಜಾಹೀರಾತು ಯಾವುದೆಂದರೆ ಅದು ಟಾಟಾ ಸ್ಕೈ ಜಾಹೀರಾತು ವಿಡಿಯೋ. ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗಿನ ತಮ್ಮ ಮದುವೆಯನ್ನು ದಾಖಲಿಸುವ ಮೂಲಕ 25 ಕೋಟಿ ರೂ. ಗಳಿಸಿದರು. ಅವರು ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ ಎಂದು ವರದಿಯಾಗಿದೆ.