ದಕ್ಷಿಣ ಭಾರತದಲ್ಲಿ ತೆಲುಗು ಚಿತ್ರರಂಗದ ಮೆಗಾಸ್ಟಾರ್ ನಟ ಚಿರಂಜೀವಿ ಅವರು ಸಿನಿಮಾ ಇಂಡಸ್ಟ್ರಿಗೆ ತುಂಬಾ ಕಷ್ಟಪಟ್ಟು ಬಂದವರು. ಯಾವುದೇ ಸಿನಿಮಾ ಹಿನ್ನೆಲೆಯೂ ಇಲ್ಲದೆ ಇಂಡಸ್ಟ್ರಿಗೆ ಬಂದು ಮೆಗಾಸ್ಟಾರ್ ಆಗಿ ಬೆಳೆದಿದ್ದು ತುಂಬಾ ದೊಡ್ಡ ವಿಷಯ. ಮೆಗಾಸ್ಟಾರ್ ಆಗಿ ಬೆಳೆದದ್ದು ಮಾತ್ರವಲ್ಲದೆ, ಮೆಗಾ ಸಾಮ್ರಾಜ್ಯವನ್ನೇ ವಿಸ್ತರಿಸಿ ಸೌತ್ ಇಂಡಿಯನ್ ಕಪೂರ್ ಫ್ಯಾಮಿಲಿ ಅಂತ ಹೆಸರು ಮಾಡಿದ್ದಾರೆ.
ಟಾಲಿವುಡ್‌ನಲ್ಲಿ ಮೆಗಾ ಫ್ಯಾಮಿಲಿ ಪ್ರಭಾವ ತುಂಬಾನೇ ಇದೆ. ನಾಲ್ಕು ಜನ ಪ್ಯಾನ್ ಇಂಡಿಯಾ ಸ್ಟಾರ್‌ಗಳು, ನಾಲ್ಕು ಜನ ಟಾಲಿವುಡ್ ಸ್ಟಾರ್‌ಗಳು, ನಿರ್ಮಾಣ ಸಂಸ್ಥೆಗಳು, ಬೇರೆ ಬೇರೆ ಬ್ಯುಸಿನೆಸ್‌ಗಳು.. ಹೀಗೆ ಒಂದು ಸಿನಿಮಾ ಪ್ರಪಂಚವನ್ನೇ ಸೃಷ್ಟಿ ಮಾಡಿದ್ದಾರೆ ಚಿರು.