2024 ರಲ್ಲಿ ಪೋಷಕರಾಗಿ ಬಡ್ತಿ ಪಡೆದ ಸಂಭ್ರಮದಲ್ಲಿರುವ ಜನಪ್ರಿಯ ಸೆಲೆಬ್ರಿಟಿಗಳಿವರು…

First Published | Dec 6, 2024, 4:34 PM IST

2024 ಮನರಂಜನಾ ಜಗತ್ತಿಗೆ ಬಾಲಿವುಡ್ ಸ್ಟಾರ್ಸ್ ಹೊಸ ಸ್ಟಾರ್ ಗಳನ್ನು ನೀಡಿದ್ದಾರೆ. 2024 ರಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಪೋಷಕರಾದ್ರು ಅನ್ನೋದನ್ನ ನೋಡೋಣ. 
 

2024 ಕೊನೆಗೊಳ್ಳೋದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಮನರಂಜನಾ ಜಗತ್ತಿನಲ್ಲಿ ಒಳ್ಳೆಯದೋ ಕೆಟ್ಟದ್ದೋ, ತುಂಬಾ ಘಟನೆಗಳು ನಡೆದಿವೆ. ಅದರಲ್ಲಿ ವಿಶೇಷವಾದುದು ಅಂದ್ರೆ, ಈ ವರ್ಷ ಹಲವಾರು ಸೆಲೆಬ್ರಿಟಿಗಳು ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಈ ವರ್ಷ ಯಾವೆಲ್ಲಾ ತಾರೆಯರು ತಮ್ಮ ಮಿನಿ ವರ್ಷನ್ ಗಳನ್ನು ಜಗತ್ತಿಗೆ ಪರಿಚಯಿಸಿದ ಸಂಭ್ರಮದಲ್ಲಿದ್ದಾರೆ ನೋಡೋಣ. 
 

ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿ - ಅಕಾಯ್ 
ಪವರ್ ಫುಲ್ ಜೋಡಿಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ (Anushka Sharma) ಫೆಬ್ರವರಿ 15, 2024 ಎರಡನೇ ಬಾರಿ ಪೋಷಕರಾದರು. ಅನುಷ್ಕಾ ತಮ್ಮ ಎರಡನೇ ಮಗು ಅಕಾಯ್ ಗೆ ಜನ್ಮ ನೀಡಿದ್ದರು. ಅಕಾಯ್ ತಂದೆಯಂತೆ ಕ್ರಿಕೆಟರ್ ಆಗ್ತಾರೆ ಎನ್ನುವ ಆಸೆ ಅಭಿಮಾನಿಗಳಲ್ಲಿದೆ. 
 

Tap to resize

ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ - ದುವಾ
ಬಾಲಿವುಡ್ ನ ಸ್ಟಾರ್ ಜೋಡಿಗಳಾದ ದೀಪಿಕಾ (Deepika Padukone) ಮತ್ತು ರಣವೀರ್ ಸೆಪ್ಟೆಂಬರ್ 8 ರಂದು ಹೆಣ್ಣುಮಗುವಿನ ಪೋಷಕರಾದರು. ಈ ಜೋಡಿ ಮಗುವಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ.

ವರುಣ್ ಧವನ್ -ನತಾಶ - ಲಾರ
ಬಾಲಿವುಡ್ ನಟ ವರುಣ್ ಧವನ್ (Varun Dhawan) ಮತ್ತು ನತಾಶ ದಂಪತಿಗಳು ಸಹ ಪೊಷಕರಾದ ಸಂಭ್ರಮದಲ್ಲಿದ್ದಾರೆ. ಜೂನ್ 3 ರಂದು ಈ ಜೋಡಿಯ ಜೀವನಕ್ಕೆ ಪುಟ್ಟ ಲಾರ ಕಾಲಿಟ್ಟಿದ್ದಳು.

ರಿಚಾ ಚಡ್ಡಾ -ಆಲಿ ಫಜಲ್ -ಝುನೈರಾ ಇದಾ
ನಟಿ ರಿಚಾ ಚಡ್ಡಾ ಮತ್ತು ಆಲಿ ಫಜಲ್ ಕೂಡ ಈ ವರ್ಷ ಪೋಷಕರಾಗಿದ್ದಾರೆ. ಈ ವರ್ಷ ಜುಲೈ 16 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಯಾಮಿ ಗೌತಮ್ - ಆದಿತ್ಯಾ ಧರ್ -ವೇದಾವಿದ್
ಕನ್ನಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟು, ಸದ್ಯ ಹಿಂದಿ ಸಿನಿಮಾದಲ್ಲಿ ಮಿಂಚುತ್ತಿರುವ ಯಾಮಿ ಗೌತಮ್ (Yami Gowtham), 2021ರಲ್ಲಿ ನಿರ್ದೇಶಕ ಆದಿತ್ಯ ಧರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೇ 10 ರಂದು ಯಾಮಿ ತಾಯಿಯಾಗಿದ್ದು, ಮಗನಿಗೆ ವೇದಾವಿದ್ ಎಂದು ಹೆಸರಿಟ್ಟಿದ್ದಾರೆ. 
 

ವಿಕ್ರಾಂತ್ ಮೆಸ್ಸಿ - ಶೀತಲ್ ಠಾಕೂರ್ - ವರ್ಧಾನ್
12th ಫೈಲ್ ತಾರೆ ವಿಕ್ರಾಂತ್ ಮೆಸ್ಸಿ ಮತ್ತು ಶೀತಲ್ ಠಾಕೂರ್ ಜೋಡಿಗಳು ಸಹ ಈ ವರ್ಷದ ಆರಂಭದಲ್ಲಿ ಅಂದ್ರೆ ಫೆಬ್ರುವರಿ 7 ರಂದು ಪೋಷಕರಾಗಿದ್ದಾರೆ. ಸದ್ಯ ಇವರು ತಮ್ಮ ಜೀವನವನ್ನು ಪ್ರೈವೆಟ್ ಆಗಿಟ್ಟಿದ್ದಾರೆ. 

ಪ್ರಣೀತಾ ಸುಭಾಷ್ - ನಿತಿನ್ ರಾಜು
ಕನ್ನಡ ನಟಿಯಾಗಿರುವ ಪ್ರಣೀತಾ ಸುಭಾಷ್ (Pranitha Subhash)ಕೂಡ ಈ ವರ್ಷ ಎರಡನೇ ಬಾರಿ ತಾಯಿಯಾಗಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಇವರು ತಾಯಿಯಾಗಿದ್ದಾರೆ. ಈಗಾಗಲೇ ಇವರಿಗೆ ಹೆಣ್ಣು ಮಗು ಇದ್ದು ಮಗಳಿಗೆ ಆರ್ಣ ಎಂದು ಹೆಸರಿಟ್ಟಿದ್ದಾರೆ. ಈ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಅದಿತಿ ಪ್ರಭುದೇವ - ಯಶಸ್ ಪಾಟ್ಲ -ನೇಸರ
ಸ್ಯಾಂಡಲ್ ವುಡ್ ಸ್ಟಾರ್ ನಟಿ ಅದಿತಿ ಪ್ರಭುದೇವ (Adithi Prabhudeva) ಮತ್ತು ಯಶಸ್ ಪಾಟ್ಲ ಎಪ್ರಿಲ್ ತಿಂಗಳಲ್ಲಿ ತಮ್ಮ ಮಗಳನ್ನು ಬರಮಾಡಿಕೊಂಡರು. ಈ ಜೋಡಿ ತಮ್ಮ ಮಗುವಿಗೆ ನೇಸರ ಎಂದು ನಾಮಕರಣ ಮಾಡಿದ್ದಾರೆ. 

ಮಿಲನಾ ನಾಗರಾಜ್ - ಡಾರ್ಲಿಂಗ್ ಕೃಷ್ಣ - ಪರಿ 
ಸ್ಯಾಂಡಲ್ ವುಡ್ ನ ಜೋಡಿಗಳಾದ ಮಿಲನಾ ನಾಗರಾಜ್ ಮತ್ತು ಕೃಷ್ಣಾ ಕೂಡ ಈ ವರ್ಷ ತಮ್ಮ ಜೀವನಕ್ಕೆ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ಜೋಡಿ ತಮ್ಮ ಮಗುವನ್ನು ಪ್ರೀತಿಯಿಂದ ಪರಿ ಎಂದು ಕರೆದಿದ್ದಾರೆ. 

ಕಾವ್ಯಾ ಗೌಡ - ಸೋಮ ಶೇಖರ್ - ಸಿಯಾ 
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕಾವ್ಯಾ ಗೌಡ ಮತ್ತು ಬ್ಯುಸಿನೆಸ್ ಮೆನ್ ಸೋಮಶೇಖರ್ ದಂಪತಿಗಳಿಗೆ ಇದೇ ವರ್ಷ ಜನವರಿ ತಿಂಗಳ 22 ರಂದು ಹೆಣ್ಣು ಮಗು ಜನಿಸಿದ್ದು. ಈ ಜೋಡಿ ಮಗುವಿಗೆ ಸಿಯಾ ಎಂದು ನಾಮಕರಣ ಮಾಡಿದ್ದಾರೆ. 

Latest Videos

click me!