ಬ್ರಹ್ಮಾಸ್ತ್ರ ರಣಬೀರ್ ಕಪೂರ್ ದೊಡ್ಡ ಓಪನರ್; ಆದರೂ KGF ಮೊದಲ ದಿನದ ಕಲೆಕ್ಷನ್ ಮುಟ್ಟಲಿಲ್ಲ

First Published | Sep 10, 2022, 6:03 PM IST

ಬ್ರಹ್ಮಾಸ್ತ್ರ  ಪಾರ್ಟ್ ಒನ್ ಶಿವ (Brahmastra) ರಣಬೀರ್ ಕಪೂರ್ (Ranbir Kapoor) ಅವರ ವೃತ್ತಿಜೀವನದ ದೊಡ್ಡ ಆರಂಭಿಕ ಚಿತ್ರ ಎಂದು ಸಾಬೀತಾಗಿದೆ. ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಚಿತ್ರ 35-36 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ತಮ್ಮ ಹಿಂದಿನ ಚಿತ್ರ 'ಸಂಜು' ದಾಖಲೆಯನ್ನು ಮುರಿದಿದ್ದಾರೆ. ಆದರೆ ಇಷ್ಟು ದೊಡ್ಡ ಓಪನಿಂಗ್ ಮಾಡಿದ ನಂತರವೂ 'ಬ್ರಹ್ಮಾಸ್ತ್ರ' 9 ಭಾರತೀಯ ಚಿತ್ರಗಳ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಮುಟ್ಟಿಲ್ಲ. ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳು ಇವು.

ರಾಕ್‌ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' (ಹಿಂದಿ ಆವೃತ್ತಿ) ಮೊದಲ ದಿನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಚಿತ್ರವು 14 ಏಪ್ರಿಲ್ 2022 ರಂದು ಬಿಡುಗಡೆಯಾಯಿತು ಮತ್ತು ರೂ 53.95 ಕೋಟಿಗಳೊಂದಿಗೆ ತೆರೆಕಂಡಿತು.
 

ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್', ಮೊದಲ ದಿನದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ, 2 ಅಕ್ಟೋಬರ್ 2019 ರಂದು ಬಿಡುಗಡೆಯಾಯಿತು. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಮೊದಲ ದಿನವೇ ಸುಮಾರು 53.35 ಕೋಟಿ ಗಳಿಸಿದೆ. ಟೈಗರ್ ಶ್ರಾಫ್ ಚಲನಚಿತ್ರಗಳಲ್ಲಿ ರಣಬೀರ್ ಕಪೂರ್‌ಗಿಂತ 7 ವರ್ಷ ಜೂನಿಯರ್.
 

Tap to resize

ಆಮೀರ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಅಭಿನಯದ 'ಥಗ್ಸ್ ಆಫ್ ಹಿಂದೂಸ್ತಾನ್' ಮೊದಲ ದಿನ 52.25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಮೂರನೇ ಅತಿ ಹೆಚ್ಚು ಓಪನರ್ ಹಿಂದಿ ಚಿತ್ರವಾಗಿದೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ, 8 ನವೆಂಬರ್ 2018 ರಂದು ಬಿಡುಗಡೆಯಾಯಿತು.

'ಹ್ಯಾಪಿ ನ್ಯೂ ಇಯರ್' ನಾಲ್ಕನೇ ಅತಿ ಹೆಚ್ಚು ಓಪನರ್ ಹಿಂದಿ ಚಿತ್ರವಾಗಿದ್ದು, ಮೊದಲ ದಿನದಲ್ಲಿ ಸುಮಾರು 44.97 ಕೋಟಿ ಕಲೆಕ್ಷನ್ ಮಾಡಿದೆ. ಫರಾ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದರು.

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಭಾರತ್' ಮೊದಲ ದಿನವೇ 42.30 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅತಿ ದೊಡ್ಡ ಆರಂಭಿಕ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸಲ್ಮಾನ್ ಖಾನ್ ಅಭಿನಯದ ಈ ಚಿತ್ರವು 5 ಜೂನ್ 2019 ರಂದು ಬಿಡುಗಡೆಯಾಯಿತು.

ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ 'ಬಾಹುಬಲಿ 2: ದಿ ಕನ್‌ಕ್ಲೂಷನ್' ಹಿಂದಿ ಆವೃತ್ತಿಯು ಈ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ, ಇದು ಸುಮಾರು 41 ಕೋಟಿ ರೂಪಾಯಿಗಳೊಂದಿಗೆ ಪ್ರಾರಂಭವಾಗಿದೆ. 28 ಏಪ್ರಿಲ್ 2017 ರಂದು ಬಿಡುಗಡೆಯಾದ ಈ ಚಿತ್ರವನ್ನು ಎಸ್.ಎಸ್. ರಾಜಮೌಳಿ ನಿರ್ದೇಶನ ಮಾಡಿದ್ದಾರೆ.

 ಸಲ್ಮಾನ್ ಖಾನ್ ಅಭಿನಯದ 'ಪ್ರೇಮ್ ರತನ್ ಧನ್ ಪಾಯೋ' ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಸುಮಾರು 40.35 ಕೋಟಿ ಗಳಿಸಿದೆ. ಇದು ಅತಿ ಹೆಚ್ಚು ಓಪನರ್ ಹಿಂದಿ ಚಲನಚಿತ್ರಗಳ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಸೂರಜ್ ಬರ್ಜತ್ಯಾ ನಿರ್ದೇಶಿಸಿದ ಚಲನಚಿತ್ರವು 12 ನವೆಂಬರ್ 2015 ರಂದು ಬಿಡುಗಡೆಯಾಯಿತು.

ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಚಿತ್ರವು ಮೊದಲ ದಿನದಲ್ಲಿ ಸುಮಾರು 36.54 ಕೋಟಿ ಗಳಿಸುವ ಮೂಲಕ ಸಾರ್ವಕಾಲಿಕ 8 ನೇ ಅತಿ ಹೆಚ್ಚು ಆರಂಭಿಕ ಹಿಂದಿ ಚಲನಚಿತ್ರವಾಗಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರವು 6 ಜುಲೈ 2016 ರಂದು ಚಿತ್ರಮಂದಿರಗಳನ್ನು ತಲುಪಿತು.

ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 'ಧೂಮ್ 3' ಮೊದಲ ದಿನವೇ 36.22 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇದುವರೆಗಿನ 9ನೇ ಅತಿ ಹೆಚ್ಚು ಓಪನರ್ ಆಗಿದೆ. 20 ಡಿಸೆಂಬರ್ 2013 ರಂದು ಬಿಡುಗಡೆಯಾದ ಚಲನಚಿತ್ರವು ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿತ್ತು.

ಈ ಪಟ್ಟಿಯಲ್ಲಿ ರಣಬೀರ್ ಕಪೂರ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಚಿತ್ರ 10 ನೇ ಸ್ಥಾನದಲ್ಲಿದೆ. ಸೆಪ್ಟೆಂಬರ್ 9 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಆಲಿಯಾ ಭಟ್, ಅಕ್ಕಿನೇನಿ ನಾಗಾರ್ಜುನ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ.
 

Latest Videos

click me!