ಬಾಲಿವುಡ್’ನ ಲಾಂಗೆಸ್ಟ್ ಕಿಸ್…. ಯಾವ ಸಿನಿಮಾ ನಟರು ಮುತ್ತಿನ ಮೂಲಕ ಮತ್ತೇರಿಸಿದ್ದರು ನೋಡಿ

Published : Feb 11, 2025, 03:06 PM ISTUpdated : Feb 11, 2025, 03:29 PM IST

ಬಾಲಿವುಡ್ ನ ಯಾವ ನಟ-ನಟಿಯರು ಸಿನಿಮಾಕ್ಕಾಗಿ ಕಿಸ್ ಮಾಡಿ ಸುದ್ದಿಯಾಗಿದ್ದರು, ಹಾಗೂ ಅವರ ಕಿಸ್ಸಿಂಗ್ ದೃಶ್ಯಗಳು ಎಷ್ಟು ಹೊತ್ತು ಇದ್ದವು ಅನ್ನೋದು ಗೊತ್ತಾ? ಇಲ್ಲಿದೆ ಲಾಂಗೆಸ್ಟ್ ಕಿಸ್ ನೀಡಿ ಮತ್ತೇರಿಸಿದ ಸ್ಟಾರ್ ಗಳು ಯಾರೆಂದು.  

PREV
17
ಬಾಲಿವುಡ್’ನ ಲಾಂಗೆಸ್ಟ್ ಕಿಸ್…. ಯಾವ ಸಿನಿಮಾ ನಟರು ಮುತ್ತಿನ ಮೂಲಕ ಮತ್ತೇರಿಸಿದ್ದರು ನೋಡಿ

ಸಿನಿಮಾಗಳಲ್ಲಿ ರೊಮ್ಯಾನ್ಸ್, ಕಿಸ್ ಎಲ್ಲವೂ ಈಗ ಸಾಮಾನ್ಯ, ಅದರಲ್ಲೂ ಬಾಲಿವುಡ್ ಜನ ಒಂದು ಹೆಜ್ಜೆ ಯಾವಾಗಲೂ ಮುಂದು. ಲಿಪ್ ಲಾಕ್ ಮಾಡದ ಸಿನಿಮಾಗಳೇ ಇಲ್ಲವೇನೋ ಎನ್ನುವಷ್ಟು ಬಾಲಿವುಡ್ ಮುಂದುವರೆದಿದೆ. ಇಲ್ಲಿದೆ ಬಾಲಿವುಡ್ ನ ಲಾಂಗೆಸ್ಟ್ ಕಿಸ್ ಗಳ (longest kiss)ವರದಿ. ಯಾವ ಸಿನಿಮಾಕ್ಕಾಗಿ ಯಾವ ನಟರು ಹೆಚ್ಚು ಹೊತ್ತು ಕಿಸ್ ಮಾಡಿದ್ದರು ನೋಡಿ. 
 

27

ಹೃತಿಕ್ ರೋಷನ್ ಮತ್ತು ಕತ್ರೀನಾ ಕೈಫ್
ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಜೀಂದಗಿ ನಾ ಮಿಲೇಗಾ ದುಬರಾ ಸಿನಿಮಾಕ್ಕಾಗಿ ಹೃತಿಕ್ ರೋಷನ್ (Hrithik Roshan) ಮತ್ತು ಕತ್ರೀನಾ ಕೈಫ್ ಮಾಡಿದ್ದ ಲಿಪ್ ಲಾಕ್ ತುಂಬಾನೆ ವೈರಲ್ ಆಗಿತ್ತು. ಈ ಕಿಸ್ಸಿಂಗ್ ಸೀನ್ ಬರೋಬ್ಬರಿ 2 ನಿಮಿಷದಷ್ಟು ಇತ್ತು. 

37

ಅಮೀರ್ ಖಾನ್ ಮತ್ತು ಕರೀಷ್ಮಾ ಕಪೂರ್ 
ರಾಜಾ ಹಿಂದೂಸ್ತಾನಿ (Raja Hindusthani) ಸಿನಿಮಾಕ್ಕಾಗಿ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಹಾಗೂ ಕರೀಷ್ಮಾ ಕಪೂರ್ 1 ನಿಮಿಷ 30 ಸೆಕೆಂಡುಗಳ ಕಾಲ ಕಿಸ್ ಮಾಡಿ, ದಾಖಲೆ ನಿರ್ಮಿಸಿದ್ದರು. 

47

ಕತ್ರೀನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ
ಬಾರ್ ಬಾರ್ ದೇಕೋ ಸಿನಿಮಾ ನೆನೆಪಿದೆ ಅಲ್ವಾ? ಈ ಸಿನಿಮಾದಲ್ಲಿ ಕತ್ರೀನಾ ಕೈಫ್ (Katrina Kaif) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತುಟಿಗೆ ತುಟಿ ಬೆಸೆದು, ಟೆಂಪ್ರೇಚರ್ ಏರಿಸಿದ್ದರು. ಈ ಜೋಡಿ 1 ನಿಮಿಷಗಳ ಕಾಲ ಕಿಸ್ ಮಾಡಿದ್ದರು. 

57

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ
ರಿಯಲ್ ಜೋಡಿ, ಹಾಗೂ ಗೋಲಿಯೋಕಿ ರಾಸ್ ಲೀಲಾ ರಾಮ್ ಲೀಲಾ ಸಿನಿಮಾದ ಹಾಟ್ ಜೋಡಿಗಳಾದ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ 10 ಸೆಕೆಂಡುಗಳಿಂದ 1 ನಿಮಿಷಗಳವರೆಗೆ ಕಿಸ್ ಮಾಡಿ ಸದ್ದು ಮಾಡಿದ್ದರು. 
 

67

ಶಾರುಖ್ ಖಾನ್ ಮತ್ತು ಕತ್ರೀನಾ ಕೈಫ್ 
ಶಾರುಖ್ ಖಾನ್ ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡೋದೆ ಕಡಿಮೆಯೇ. ಆದರೆ ಜಬ್ ತಕ್ ಹೇ ಜಾನ್ ಸಿನಿಮಾದಕ್ಕಾಗಿ ಶಾರುಖ್ ಅವರು ಕತ್ರೀನಾ ಕೈಫ್ ಜೊತೆ 30 ಸೆಕೆಂಡುಗಳ ಕಿಸ್ಸಿಂಗ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದರು. 
 

77

ಇಮ್ರಾನ್ ಹಶ್ಮಿ ಮತ್ತು ಇಶಾ ಗುಪ್ತಾ
ಬಾಲಿವುಡ್ ನ ಸೀರಿಯಲ್ ಕಿಸ್ಸರ್ ಎಂದೇ ಖ್ಯಾತಿ ಗಳಿಸಿದ್ದ ನಟ ಇಮ್ರಾನ್ ಹಶ್ಮಿ (Imran Hashmi). ರಾಜ್ 3 ಸಿನಿಮಾಕ್ಕಾಗಿ ನಟಿ ಇಶಾ ಗುಪ್ತಾ ಜೊತೆ ಇಮ್ರಾನ್ ಹಶ್ಮಿ 30 ಸೆಕೆಂಡುಗಳ ಕಾಲ ಕಿಸ್ ಮಾಡಿದ್ದರು. 
 

click me!

Recommended Stories