ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸದ್ಯಕ್ಕೆ ಬುಚ್ಚಿಬಾಬು ನಿರ್ದೇಶನದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಮೈತ್ರಿ ಮೂವೀಸ್ ಸಂಸ್ಥೆ ದೊಡ್ಡ ಬಜೆಟ್‌ನಲ್ಲಿ ಈ ಚಿತ್ರವನ್ನು ರೂರಲ್ ಸ್ಪೋರ್ಟ್ಸ್ ಬ್ಯಾಕ್ ಡ್ರಾಪ್‌ನಲ್ಲಿ ತೆರೆಗೆ ತರ್ತಿದೆ. ಜಾನ್ವಿ ಕಪೂರ್ ಹೀರೋಯಿನ್ ಆಗಿ ನಟಿಸ್ತಿದ್ದು, ಜಗಪತಿ ಬಾಬು, ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸ್ತಿದ್ದಾರೆ.