Published : Mar 14, 2020, 06:19 PM ISTUpdated : Mar 14, 2020, 06:23 PM IST
ಬಾಲಿವುಡ್‌ನ 'ಮಿ. ಪರ್ಫೆಕ್ಷನಿಸ್ಟ್' ಅಮೀರ್ ಖಾನ್ ಹುಟ್ಟಿದ ದಿನ ಇವತ್ತು. ಅವರ 55ನೇ ಹುಟ್ಟಿದ ಹಬ್ಬಕ್ಕೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಹೊಳೆ ಹರಿಯುತ್ತಿದೆ. ಈ ನಟ ನಿಸ್ಸಂದೇಹವಾಗಿ ಭಾರತದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಅವರ ಸ್ಟಾರ್ಡಮ್ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತದ ಅಭಿಮಾನಿಗಳು ನಟನಿಗೆ ಪ್ರೀತಿ ಮತ್ತು ಬರ್ಥ್‌ಡೇ ವಿಶ್ ಹೇಳುತ್ತಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ವಿಶೇಷವಾಗಿ ಟ್ವೀಟ್ ಮಾಡಿ ಅಮೀರ್‌ಗೆ ವಿಶ್ ಮಾಡಿದ್ದಾರೆ.