ಕಾಜೋಲ್‌ ಕೆಟ್ಟ ನಟಿ ಎಂದಿದ್ದರು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌

Suvarna News   | Asianet News
Published : Jun 29, 2020, 04:20 PM IST

ಕಾಜೋಲ್ ಮತ್ತು ಶಾರುಖ್ ಜೋಡಿಯನ್ನು ಇಂದಿಗೂ ಬೆಳ್ಳಿ ಪರದೆಯ ಅತ್ಯಂತ ರೊಮ್ಯಾಂಟಿಕ್‌ ಮತ್ತು ಜನಪ್ರಿಯ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 'ಬಾಜಿಗರ್' ನಿಂದ 'ದಿಲ್ವಾಲೆ' ವರೆಗಿನ ಅನೇಕ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದಲ್ಲದೆ, ಕಾಜೋಲ್ ಶಾರುಖ್‌ರ ಅನೇಕ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿಯಬ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಶಾರುಖ್ ಕ್ಲೋಸ್‌ ಫ್ರೆಂಡ್‌ಶಿಪ್ ಸಹ ಹೊಂದಿದ್ದಾರೆ. ಆದರೆ ಶಾರುಖ್ ಕಾಜೋಲ್‌ರನ್ನು ದ್ವೇಷಿಸುತ್ತಿದ್ದ ಸಮಯವೂ ಇತ್ತು ಒಂದು ಕಾಲದಲ್ಲಿ.  

PREV
115
ಕಾಜೋಲ್‌ ಕೆಟ್ಟ ನಟಿ ಎಂದಿದ್ದರು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌

ಸೂಪರ್‌ ಹಿಟ್ ಸಿನಿಮಾ ಬಾಜಿಗರ್‌ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ ಶಾರುಖ್‌ ಕಾಜೋಲ್‌.

215

ಕೊನೆಯದಾಗಿ ದಿಲ್ವಾಲೆಯಲ್ಲಿ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ.

315

ಈ ಸ್ಟಾರ್‌ಗಳ ಅನ್‌ಸ್ಕ್ರೀನ್‌ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ.

415

ರಿಯಲ್‌ ಲೈಫ್‌ನಲ್ಲಿಯೂ ಒಳ್ಳೆಯ ಫ್ರೆಂಡ್ಸ್‌ ಆಗಿರುವ ಕಾಜೋಲ್‌ ಶಾರುಖ್‌.

515

ಆದರೆ ಒಂದು ಕಾಲದಲ್ಲಿ ಶಾರುಖ್‌ ಈ ನಟಿಯನ್ನು ದ್ವೇಷಿಸುತ್ತಿದ್ದರು. ಅಲ್ಲದೇ ಕಾಜೋಲ್‌ಗೆ ನಟನೆಯೇ ಗೊತ್ತಿಲ್ಲವೆಂಬ ಸರ್ಟಿಫಿಕೇಟ್ ನೀಡಿದ್ದರು ಒಮ್ಮೆ.

615

ಶಾರುಖ್ ಖಾನ್ 'ಬಾಜಿಗರ್' ಚಿತ್ರದ ಸಂದರ್ಭದಲ್ಲಿ ಕಾಜೋಲ್ ಜೊತೆಗೆ ಕೆಲಸ ಮಾಡಿದ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. 'ನಾನು ಕಾಜೋಲ್ ಜೊತೆ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾಗ,ಆಮೀರ್ ಖಾನ್ ಕಾಜೋಲ್ ಹೇಗೆಂದು ನನ್ನನ್ನು ಒಮ್ಮೆ ಕೇಳಿದ್ದರು. ಆಗ ಆಮೀರ್ ಕೂಡ ಕಾಜೋಲ್ ಜೊತೆ ಕೆಲಸ ಮಾಡಲು ಬಯಸಿದ್ದರು. ಅದಕ್ಕೆ ಅವಳು ಕೆಲಸದ ಮೇಲೆ ಗಮನ ಕೊಡುವುದಿಲ್ಲ. ನಿಮ್ಮಂತವರು ಅವಳೊಂದಿಗೆ ಕೆಲಸ ಮಾಡುವುದು ಕಷ್ಟ,' ಎಂದು ಹೇಳಿದ್ದಾಗಿ ಸ್ವತಃ ಶಾರುಖ್‌ ಹೇಳಿಕೊಂಡಿದ್ದರು.

715

ಚಿತ್ರ ಬಿಡುಗಡೆ ನಂತರ ಒಮ್ಮೆ ಅಮೀರ್ ಖಾನ್‌ಗೆ ಕರೆ ಮಾಡಿ, ಇದು ಏನು ಎಂದು ನನಗೆ ತಿಳಿದಿಲ್ಲ, ಆದರೆ ಪರದೆ ಮೇಲೆ ಅವಳು ಮ್ಯಾಜಿಕ್‌ ಮಾಡಿದ್ದಾಳೆ ಎಂದೆ.

815

ತನ್ನ ಮಗಳು ಸುಹಾನಾ ಖಾನ್ ಕಾಜೋಲ್‌ರಿಂದ ನಟನೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಬೇಕೆಂದು ಬಯಸುತ್ತೇನೆ ಎಂದೂ ಒಮ್ಮೆ ಹೇಳಿದ್ದರು ಕಿಂಗ್‌ ಖಾನ್‌. ವಾಸ್ತವವಾಗಿ, ಕಾಜೋಲ್ ತಾಂತ್ರಿಕ ನಟಿಯಲ್ಲ, ಆದರೆ ಪ್ರಾಮಾಣಿಕ ನಟಿ ಮತ್ತು ಇದು ಅವರ ಅತ್ಯುತ್ತಮ ಗುಣ.

915

ನಾನೂ ಕಾಜೋಲ್‌ನಿಂದಲೂ ನಟನೆ ಕಲಿಯಬೇಕೆಂದು ಬಯಸುತ್ತೇನೆ. ಕಾಜೋಲ್ ಪರದೆ ಮೇಲೆ ಬೇರೆಯವರಾಗಿ ಕಾಣಿಸುತ್ತಾರೆ. ಅವರ ನಟನೆ ಅದ್ಭುತ, ಎಂದಿದ್ದರು ಶಾರುಖ್.

1015

ಈಗ ಪ್ರತಿ ಸಿನಿಮಾದಲ್ಲೂ ಕಾಜೋಲ್ ಅವರನ್ನು ಮಿಸ್‌ ಮಾಡಿಕೊಳ್ಳುತ್ತೇನೆ, ಎನ್ನುತ್ತಾರೆ ಕಿಂಗ್ ಖಾನ್.

1115

ಕರಣ್ ಅರ್ಜುನ್, ಬಾಜಿಗರ್, ದಿಲ್‌ವಾಲೇ ದುಲ್ಹಾನೀಯ ಲೇ ಜಾಯೇಂಗೇ, ಕುಛ್ ಕುಛ್ ಹೋತಾ ಹೇ, ಕಭಿ ಕುಶಿ ಕಭಿ ಗಮ್, ಮೈ ನೇಮ್ ಇಸ್ ಖಾನ್ ಮತ್ತು ದಿಲ್ವಾಲೇಯಂಥ ಸೂಪರ್ ಹಿಟ್ ಚಿತ್ರಗಳಲ್ಲಿ ಈ ಜೋಡಿ ನಟಿಸಿದೆ.

1215

ದಿಲ್ವಾಲೆ ಸಿನಿಮಾಕ್ಕಾಗಿ ಕಾಜೋಲ್‌ ತಮ್ಮ 150 ದಿನಗಳ ಸಮಯವನ್ನು ನೀಡಿದರು. ಈ ಸಮಯದಲ್ಲಿ ಕಾಜೋಲ್ ತನ್ನ ಮಕ್ಕಳಿಂದ ದೂರವಿರಬೇಕಾಗಿತ್ತು. ಇದು ಒಬ್ಬ ತಾಯಿಯ ದೊಡ್ಡ ತ್ಯಾಗ.

1315

ಈ ಜೋಡಿ ಕೆಲಸ ಮಾಡಿರುವ ಸಿನಿಮಾಗಳು ಒಂದಕ್ಕಿಂತ, ಒಂದು ವಿಭಿನ್ನ. 

1415

ಶಾರುಖ್‌ ಖಾನ್‌ ಮತ್ತು ಕಾಜೋಲ್‌ ಒಟ್ಟಿಗೆ ನಟಿಸಿದ 2015ರ ದಿಲ್‌ವಾಲೇ ದುಲ್ಹಾನಿಯಾ ಲೇ ಜಾಯಂಗೆ ಹಲವು ದಾಖಲೆಗಳನ್ನು ನಿರ್ಮಿಸಿತು.

1515

ವರ್ಕ್‌ ಫ್ರಂಟ್‌ನಲ್ಲಿ ಕಾಜೋಲ್ ಶೀಘ್ರದಲ್ಲೇ 'ತ್ರಿಭಂಗ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ,  ಕೊನೆಯ ಬಾರಿ ಜೀರೋ ಸಿನಿಮಾದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್, ಇದುವರೆಗೂ ಯಾವುದೇ ಪ್ರಾಜೆಕ್ಟ್‌
ಅನೌನ್ಸ್‌ ಮಾಡಿಲ್ಲ

click me!

Recommended Stories