ಕಂಗನಾಗೆ ಬೇಕಂತೆ ಕಂಜೂಸ್ ಪತಿ: ರೀಸನ್ ಇಂಟ್ರೆಸ್ಟಿಂಗ್

Published : Oct 17, 2021, 08:55 PM ISTUpdated : Oct 17, 2021, 09:09 PM IST

ನಟಿ ಕಂಗನಾಗೆ ಬೇಕಂತೆ ಕಂಜೂಸ್ ಪತಿ ಇಷ್ಟೊಂದು ಶ್ರೀಮಂತ ನಟಿಗೆ ಇಂಥದ್ದೊಂದು ಆಸೆ ಏಕೆ ?.

PREV
16
ಕಂಗನಾಗೆ ಬೇಕಂತೆ ಕಂಜೂಸ್ ಪತಿ: ರೀಸನ್ ಇಂಟ್ರೆಸ್ಟಿಂಗ್

ಬಾಲಿವುಡ್ ನಟಿ ಕಂಗನಾ ರಣಾವತ್(Kanaga Ranaut) ದೇಶದಲ್ಲಿ ನಡೆಯುವ ಎಲ್ಲ ಬೆಳವಣಿಗೆಗೂ ಪ್ರತಿಕ್ರಿಯಿಸುತ್ತಾರೆ. ಯಾವುದೇ ಬೆಳವಣಿಗೆ ನಡೆದಾಗಲೂ ಕಮೆಂಟ್ ಮಾಡುತ್ತಾರೆ.

26

ತಮ್ಮ ವಿವಾದಾತ್ಮಕ ಹೇಳಿಕೆ, ಪೋಸ್ಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರೋ ನಟಿಯ ವಿವಾಹದ ಬಗ್ಗೆಯೂ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಆದರೆ ಕೆರಿಯರ್‌ನ ಉತ್ತುಂಗದಲ್ಲಿರೋ ಕಂಗನಾ ರಣಾವತ್ ಸದ್ಯ ಮದುವೆಯಾಗುತ್ತಾರಾ ಎನ್ನುವುದರ ಬಗ್ಗೆ ಯಾವುದೇ ಸೂಚನೆ ಇಲ್ಲ.

36

ಆದರೆ ಪತಿಯಾಗುವವನ ಬಗ್ಗೆ ಒಂದಷ್ಟು ಐಡಿಯಾ ಅವರ ತಲೆಯಲ್ಲೂ ಇದೆ.
ಅವರ ಲೇಟೆಸ್ಟ್ ರಿಲೀಸ್ ತಲೈವಿ ಪ್ರಮೋಷನ್ ಸಂದರ್ಭ ನಟಿ ಕಪಿಲ್ ಶರ್ಮಾ ಶೋದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ತಮ್ಮ ಭಾವೀ ಪತಿಯ ಕುರಿತ ಕೆಲವು ಆಲೋಚನೆಗಳನ್ನು ಶೇರ್ ಮಾಡಿಕೊಂಡಿದ್ದಾರೆ.

46

ನಿಮ್ಮ ಪತಿ ಕಂಜೂಸ್ ಆಗಿರಬೇಕಾ ಅಥವಾ ಖರ್ಚು ಮಾಡುವವರಾಗಿರಬೇಕಾ ಎಂದು ಕಪಿಲ್ ಶರ್ಮಾ ಅವರು ಕಂಗನಾಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ ಹಾಸ್ಯಾಸ್ಪದವಾಗಿ ಉತ್ತರಿಸಿದ್ದಾರೆ.

56

ನನ್ನ ಪತಿ ಕಂಜೂಸ್ ಆಗಿರಬೇಕು ಎಂದಿದ್ದಾರೆ ಕಂಗನಾ. ಅರೆ ಇದೇನಿದು ಇಷ್ಟೊಂದು ಶ್ರೀಮಂತ ನಟಿ ಹೀಗಂತಿದ್ದಾರೆ ಎಂದು ಎಲ್ಲರೂ ಮುಖ ಮುಖ ನೋಡುತ್ತಿರುವಾಗಲೇ ನಟಿ ತನ್ನ ಆಯ್ಕೆಗೆ ಒಂದು ಕಾರಣವನ್ನೂ ಹೇಳಿದ್ದಾರೆ.

66

ನನ್ನ ಪತಿ ಕಂಜೂಸ್ ಆಗಿರಬೇಕು, ಯಾಕೆಂದರೆ ಖರ್ಚೆಲ್ಲಾ ನಾನೇ ಮಾಡುತ್ತೀನಿ ಎಂದಿದ್ದಾರೆ ಕಂಗನಾ. ಈಗ ನಗುವ ಸರದಿ ಕಪಿಲ್ ಹಾಗೂ ಪ್ರೇಕ್ಷಕರದ್ದು. ಹೇಗಿದೆ ಕಂಗನಾ ಐಡಿಯಾ ? ಸೂಪರ್ ಅಲ್ವಾ ?

click me!

Recommended Stories