ನಟ ಸಂಜಯ್ ದತ್ ಮೂರು ಮಕ್ಕಳ ತಂದೆ. 1988ರಲ್ಲಿ ತಮ್ಮ ಮೊದಲ ಮಗಳು ತ್ರಿಷಾಳ ತಂದೆಯಾಗಿದ್ದರು ಸಂಜಯ್. ನಂತರ ಅವರ ಮೂರನೇಯ ಮದುವೆಯಿಂದ ಎರಡು ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಆಗ ಸಂಜಯ್ ದತ್ 51 ವರ್ಷದವರಾಗಿದ್ದರು.
ಪ್ರಕಾಶ್ ರಾಜ್ ತಮಗಿಂತ12 ವರ್ಷ ಕಿರಿಯ ಕೊರಿಯೋಗ್ರಾಫರ್ ಪೋನಿ ವರ್ಮಾ ಜೊತೆ 2010ರಲ್ಲಿ ಮರುಮದುವೆಯಾದರು. 3 ಫೆಬ್ರವರಿ 2016ರಂದು ಪ್ರಕಾಶ್ 50ನೇ ವಯಸ್ಸಿನಲ್ಲಿ ಮಗ ವೇದಾಂತ್ಗೆ ತಂದೆಯಾದರು. ಇದು ಪ್ರಕಾಶ್ ರಾಜ್ ಅವರ ನಾಲ್ಕನೇ ಮಗು. ವಾಸ್ತವವಾಗಿ, ಪೋನಿಗೆ ಮೊದಲು ಪ್ರಕಾಶ್ ನಟಿ ಲಲಿತಾ ಕುಮಾರಿ ಅವರನ್ನು ವಿವಾಹವಾಗಿದ್ದರು.
ರಾಜೇಶ್ ಕಟ್ಟರ್ 1990ರಲ್ಲಿ ಶಾಹಿದ್ ಕಪೂರ್ ತಾಯಿ ನೀಲಿಮಾ ಆಜೀಮ್‌ರನ್ನು ಮದುವೆಯಾದರು. 5 ವರ್ಷಗಳ ನಂತರ ಇಶಾನ್ ಕಟ್ಟರ್‌ಗೆ ತಂದೆಯಾದಾಗಿದ್ದರು. ಡಿವೋರ್ಸ್ ನಂತರ ರಾಜೇಶ್ 2008ರಲ್ಲಿ ವಂದನಾ ಸಜ್ನಾನಿ ಅವರನ್ನು ವರಿಸಿ 2019ರಲ್ಲಿ ಮತ್ತೆ ತಂದೆಯಾದರು. ಸೆಕೆಂಡ್ ವೈಫ್ ವಂದನಾ, ವನರಾಜ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದಾಗ ರಾಜೇಶ್ ಕಟ್ಟರ್‌ಗೆ52 ವರ್ಷ.
ಆಮೀರ್ ಖಾನ್ ರೀನಾ ದತ್ತಾ ಜೊತೆಯ ತಮ್ಮ ಮೊದಲ ಮದುವೆಯ ಮೂಲಕ ಜುನೈದ್ ಮತ್ತು ಇರಾ ಎಂಬ 2 ಮಕ್ಕಳ ತಂದೆಯಾಗಿದ್ದರು. ರೀನಾರಿಂದ ವಿಚ್ಛೇದನ ಪಡೆದ ನಂತರ ಅಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಖಾನ್ 45ನೇ ವಯಸ್ಸಿನಲ್ಲಿ ಸರೊಗಸಿ ಮೂಲಕ 2011ರಲ್ಲಿ ಮೂರನೇ ಬಾರಿಗೆ ತಂದೆಯಾದರು.
ಶಾರುಖ್ ಖಾನ್ ಹಾಗೂ ಗೌರಿ ಮೊದಲ ಬಾರಿಗೆ 1997ರಲ್ಲಿ ಮಗ ಅರ್ಯಾನ್‌ಗೆ ಪೋಷಕರಾದರು. ನಂತರ 2000ರಲ್ಲಿ ಸುಹಾನ್‌ಗೆ ಶಾರುಖ್ ತಂದೆಯಾದರು. 13 ವರ್ಷಗಳ ನಂತರ ಶಾರುಖ್ ಖಾನ್ ಮೂರನೇ ಬಾರಿ ತಂದೆಯಾದರು. ಮಗ ಅಬ್ರಾಮ್ ಜನ್ಸಿದಾಗ ಈ ಸೂಪರ್‌ಸ್ಟಾರ್ 48 ವರ್ಷದವರಾಗಿದ್ದರು.
ನಟ ಅರ್ಜುನ್ ರಾಮ್‌ಪಾಲ್ ತಮ್ಮ 46ನೇ ವಯಸ್ಸಿನಲ್ಲಿ ಮೂರನೇ ಬಾರಿ ತಂದೆಯಾದರು. 1996ರಲ್ಲಿ ಅವರ ಗರ್ಲ್‌ಫ್ರೆಂಡ್ ಗೇಬ್ರಿಯೆಲಾ ಡೆಮೆಟ್ರಿಯಡ್ಸ್ ಮಗ ಆರಿಕ್‌ಗೆ ಜನ್ಮ ನೀಡಿದರು.
ಧರ್ಮೇಂದ್ರ 1980ರಲ್ಲಿ ಬಾಲಿವುಡ್ ನಟಿ ಹೇಮಾ ಮಾಲಿನಿಯನ್ನು ವಿವಾಹವಾದರು. ಮೊದಲು ಮಗಳು ಇಶಾ ಜನಿಸಿದಾಗ ಧರ್ಮೇಂದ್ರರಿಗೆ 46 ವರ್ಷ ಮತ್ತು ಎರಡನೇ ಮಗಳು ಅಹನಾ ಜನಿಸಿದಾಗ 50 ವರ್ಷ.
ಸೈಫ್ ಆಲಿ ಖಾನ್ ಅಮೃತಾ ಸಿಂಗ್ ಜೊತೆಯ ತಮ್ಮ ಮೊದಲ ಮದುವೆಯಿಂದ ಸಾರಾ ಮತ್ತು ಇಬ್ರಾಹಿಂ ಎಂಬ 2 ಮಕ್ಕಳ ತಂದೆಯಾಗಿದ್ದರು. ಡಿವೋರ್ಸ್ ನಂತರ ಕರೀನಾ ಕಪೂರ್ ಅವರನ್ನು ಮದುವೆಯಾಗಿ 2006ರಲ್ಲಿ ಮಗ ತೈಮೂರ್‌ಗೆ ತಂದೆಯಾದರು. ಆಗ ಅವರಿಗೆ 46 ವರ್ಷ ಆಗಿತ್ತು. ಈಗ ಸೈಫ್ ಪುನಾ ತಮ್ಮ 50ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ.
ಟ್ವಿಂಕಲ್ ಖನ್ನಾರನ್ನು ವರಿಸಿದ ಅಕ್ಷಯ್ ಕುಮಾರ್ 2002ರಲ್ಲಿ ಮಗ ಆರವ್‌ಗೆ ತಂದೆಯಾಗಿದ್ದರು. 10 ವರ್ಷಗಳ ನಂತರ 2012ರಲ್ಲಿ ಮಗಳು ನೀತಾರ ಜನಿಸಿದಳು. ಆ ಸಮಯದಲ್ಲಿ ಅಕ್ಷಯ್ ಕುಮಾರ್ ವಯಸ್ಸು 45 ವರ್ಷವಾಗಿತ್ತು.
ಸೊಹೈಲ್ ಖಾನ್ ಮತ್ತು ಸೀಮಾ ಸಚ್ದೇವ್ 2000ರಲ್ಲಿ ಮಗ ನಿರ್ವಾಣಗೆ ಪೋಷಕರಾದರು. ನಂತರ 2011ರಲ್ಲಿ ಸೊಹೈಲ್ ತಮ್ಮ 42ನೇ ವಯಸ್ಸಿನಲ್ಲಿ ಮಗ ಯಾಹನ್‌ಗೆ ತಂದೆಯಾದರು.